Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ರಾಯರ ದರ್ಶನ ಪಡೆದ ನಟಿ ಹರಿಪ್ರಿಯಾ ಮದುವೆ ಬಗ್ಗೆ ಹೇಳಿದ್ದು ಹೀಗೆ

Thursday, 09.08.2018, 6:28 PM       No Comments

ರಾಯಚೂರು: ಚಂದನವನದಲ್ಲಿ ಸದ್ಯ ಹೆಚ್ಚು ಬಿಜಿಯಾಗಿರುವ ನಟಿ ಹರಿಪ್ರಿಯಾ ಕುಟುಂಬ ಸಮೇತ ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.

ಗುರುವಾರ ಮಠಕ್ಕೆ ಆಗಮಿಸಿದ ಹರಿಪ್ರಿಯಾ ಅವರು ವೃಂದಾವನಕ್ಕೆ ಭಕ್ತಿಯಿಂದ ಐದು ಸುತ್ತು ಪ್ರದಕ್ಷಿಣೆ ಹಾಕಿದರು. ದರ್ಶನ‌ ಮುಗಿಸಿ ಹರಿಪ್ರಿಯ ಮಠದಿಂದ ಹೊರಗೆ ಬರುತ್ತಿದ್ದಂತೆ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ಸಿನಿಮಾ ಶೂಟಿಂಗ್ ಹಿನ್ನೆಲೆಯಲ್ಲಿ ಮಠಕ್ಕೆ ಬರಲು ಆಗಿರಲಿಲ್ಲ. ಈಗ ಕುಟುಂಬ ಸಮೇತ ಬಂದಿದ್ದೇವೆ. ಅಮ್ಮ, ಅಣ್ಣನೊಂದಿಗೆ ಮಠಕ್ಕೆ ಬಂದಿರುವೆ. ರಾಯರ ದರ್ಶನ ಪಡೆದಿದ್ದು ಖುಷಿ ಆಯ್ತು. ಕುರುಕ್ಷೇತ್ರ, ಬೆಲ್ ಬಾಟಮ್, ಸೂಜಿದಾರ, ಡಾಕ್ಟರ್ ಆಫ್ ಪಾರ್ವತಮ್ಮ ಸೇರಿ ಹಲವು ಸಿನಿಮಾಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ. ಬೆಲ್ ಬಾಟಲ್ ಸಿನಿಮಾ ಹಳೆ ಕಾಲದ ಚಿತ್ರದ ರೀತಿ ಇದೆ. ಇನ್ನು ಎರಡು ತಿಂಗಳಲ್ಲಿ ಬೆಲ್ ಬಾಟಮ್ ಸಿನಿಮಾ ರಿಲೀಸ್ ಆಗುತ್ತೆ. ಮದುವೆ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ಹರಿಪ್ರಿಯಾ ತಿಳಿಸಿದರು.

ರಾಯರ ದರ್ಶನ ಪಡೆದ ನಟಿ ಹರಿಪ್ರಿಯಾ

ರಾಯರ ದರ್ಶನ ಪಡೆದ ನಟಿ ಹರಿಪ್ರಿಯಾ#Hariprriya #Sandalwood #Actress #Mantralayam

Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಅಗಸ್ಟ್ 9, 2018

Leave a Reply

Your email address will not be published. Required fields are marked *

Back To Top