Thursday, 22nd March 2018  

Vijayavani

ಮುಂದಿನ ಚುನಾವಣೆಯಲ್ಲಿ ಮೋದಿ ಸೋಲ್ತಾರೆ- ಇಂದಿರಾಗಾಂಧಿಯಂತೆ ನಮ್ಮನ್ನೂ ಗೆಲ್ಲಿಸಿ- ಚಿಕ್ಕಮಗಳೂರಿನಲ್ಲಿ ರಾಹುಲ್‌ ಟಾಕ್‌ವಾರ್‌        ಕುಡಿದು ಅಡ್ಡಾದಿಡ್ಡಿ ಬಸ್‌ ಚಲಾಯಿಸಿದ- ಕಾರು, ಬೈಕ್‌ ಮರಕ್ಕೆ ಡಿಕ್ಕಿ ಹೊಡೆಸಿದ- ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ ಅವಾಂತರ        ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ ವಿಚಾರ- ಹೈಕೋರ್ಟ್​ಗೆ ಅಭಿಪ್ರಾಯ ತಿಳಿಸಿದ ಸ್ಪೀಕರ್​- ಮುಚ್ಚಿದ ಲಕೋಟೆಯಲ್ಲಿ ಎಜಿ ಮೂಲಕ ರವಾನೆ        5 ಕೋಟಿ ಫೇಸ್​ಬುಕ್‌ಗಳ ಮಾಹಿತಿ ಹ್ಯಾಕ್- ಕಾಂಗ್ರೆಸ್‌ ವಿರುದ್ಧ ಬಿಜೆಪಿ ಗಂಭೀರ ಆರೋಪ- ರವಿಶಂಕರ್‌ ಆರೋಪಕ್ಕೆ ಕೈತಿರುಗೇಟು        ಬೈಕ್ ಸವಾರನ ಮೇಲೆ ಬಿದ್ದ ಬೃಹತ್ ಮರ- ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರು- ಹೆಲ್ಮೆಟ್​ ಪುಡಿಪುಡಿ ತಲೆ ಸೇಫ್​       
Breaking News

ಮತ್ತೆ ಸದ್ದು ಮಾಡ್ತಿವೆ ದರ್ಶನ್‌-ಪವಿತ್ರಾ ಜಂಟಿ ಫೋಟೊಗಳು!

Tuesday, 19.09.2017, 1:49 PM       No Comments

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಮತ್ತು ಮಾಡಲ್‌ ಪವಿತ್ರಾ ಗೌಡ ಅವರು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜತೆಗಿರುವ ತಮ್ಮ ಫೋಟೊವನ್ನು ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ನಲ್ಲಿ ಹಾಕಿ ಸುದ್ದಿಯಾಗಿದ್ದರು. ಅದು ದರ್ಶನ್‌ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿತ್ತು.

ಆದರೆ ಈಗ ಮತ್ತೆ ಪವಿತ್ರಾ ಗೌಡ ಸುದ್ದಿಯಾಗಿದ್ದಾರೆ. ಇದೀಗ ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿರುವ ಕುರುಕ್ಷೇತ್ರ ಸಿನಿಮಾದ ಸೆಟ್‌ನಲ್ಲಿ ನಟಿ ಪವಿತ್ರಾ ಗೌಡ ಪ್ರತ್ಯಕ್ಷರಾಗಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರಿ ಸುದ್ದಿ ಮಾಡುತ್ತಿದೆ.

ಇನ್ನು ದುರ್ಯೋಧನನ ಪಾತ್ರ ಮಾಡುತ್ತಿರುವ ದರ್ಶನ್ ಹಾಗೂ ಕರ್ಣನ ಪಾತ್ರಧಾರಿ ಅರ್ಜುನ್ ಸರ್ಜಾರ ಜತೆ ಮಾತಿನಲ್ಲಿ ತೊಡಗಿರುವ ಪವಿತ್ರಾ ಗೌಡರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್‌ ಆಗಿವೆ.

ಈ ಹಿಂದೆ ದರ್ಶನ್‌ ಜತೆಗಿರುವ ಫೋಟೋ ಅಪ್ಲೋಡ್ ಆಗುತ್ತಿದ್ದಂತೆಯೇ ಹಲವು ಊಹಾಪೋಹ ಹರಿದಾಡಿ, ದರ್ಶನ್ ಹಾಗೂ ನಟಿ ಪವಿತ್ರಾ ನಡುವೆ ಸಂಬಂಧ ಇರುವ ಕುರಿತು ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಸ್ವತಃ ಪವಿತ್ರಾ ಗೌಡರೇ ಸ್ಪಷ್ಟೀಕರಣ ನೀಡಿದ್ದರು.

ಅಂದಹಾಗೆ, ನಟಿ ಪವಿತ್ರ ಗೌಡ ‘ಛತ್ರಿಗಳು ಸಾರ್ ಛತ್ರಿಗಳು’ ಹಾಗೂ ‘ಭತ್ತಾಸ್’ ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ. (ದಿಗ್ವಿಜಯ ನ್ಯೂಸ್‌)

Leave a Reply

Your email address will not be published. Required fields are marked *

Back To Top