Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಖಿನ್ನತೆಗೊಳಗಾಗಿದ್ದ ರಷ್ಯಾದ ಖ್ಯಾತ ನಟಿ ಗುಣವಾಗಿದ್ದು ಕರ್ನಾಟಕದ ಉಡುಪಿಯಲ್ಲಿ !

Monday, 11.12.2017, 7:58 AM       No Comments

<< ತೆರೆಯ ಮೇಲೆ ಎಲ್ಲರನ್ನೂ ನಗಿಸುವ ಹಾಸ್ಯ ನಟಿ ಅನ್ನಾ ಅರ್ದೋವಾ ತಾವೇ ಖಿನ್ನತೆಗೆ ಒಳಗಾಗಿದ್ದರಂತೆ >>

ಕಾಪು: ರಷ್ಯಾದ ಖ್ಯಾತ ನಟಿ ಅನ್ನಾ ಅರ್ದೋವಾ ಅವರು ತಮ್ಮ ಮಾನಸಿಕ ಸಮಸ್ಯೆಯನ್ನು ಗುಣಪಡಿಸಿಕೊಳ್ಳೋದಕ್ಕೆ ಭಾರತದ ಆಯುರ್ವೇದ ಹಾಗೂ ಯೋಗದ ಮೊರೆ ಹೋಗಿದ್ದಾರೆ. ಅದರಲ್ಲೂ ಅವರು ಆಯ್ದುಕೊಂಡಿರುವ ಸ್ಥಳ ಕರ್ನಾಟಕ ಎಂಬುದು ವಿಶೇಷ.

ನಟಿ ಅರ್ದೋವಾ ಹಾಸ್ಯ ನಟಿಯಾಗಿದ್ದು, ತೆರೆಯ ಮೇಲೆ ಎಲ್ಲರನ್ನೂ ನಗಿಸುವ ಅರ್ದೋವಾ ತಾವೇ ಖಿನ್ನತೆಗೆ ಒಳಗಾಗಿದ್ದರಂತೆ. ಇದೀಗ ತಮ್ಮ ಮಾನಸಿಕ ಸಮಸ್ಯೆಗೆ ಅವರು ಉಡುಪಿಯ ಗೋಸ್ವಾಲ್ ಪಂಚಕರ್ಮ ಆ್ಯಂಡ್ ಹೆಲ್ತ್‌ನಲ್ಲಿ ಪಂಚಕರ್ಮ ಚಿಕಿತ್ಸೆ ಪಡೆದು ಉಲ್ಲಸಿತರಾಗಿದ್ದಾರೆ.

ಕಳೆದ ನವೆಂಬರ್​ ಕೊನೆಯ ವಾರದಲ್ಲಿ ಅನ್ನಾ ಅವರು ಭಾರತಕ್ಕೆ ಬಂದಿದ್ದರು. ಅವರಿಗೆ 12 ದಿನಗಳ ಕಾಲ ವಿರೇಚನ ಸಹಿತ ತೆರಪಿಗಳನ್ನು ನೀಡಲಾಗಿದೆ. ಇದರಿಂದ ಅವರು ಇದೀಗ ಹೊಸ ಚೈತನ್ಯ ಪಡೆದಿದ್ದಾರೆ. ಗೋಸ್ವಾಲ್​​ನ ಡಾ. ತನ್ಮಯ ಗೋಸ್ವಾಮಿ ಮಾರ್ಗದರ್ಶನದಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗಿದೆ.

ಈ ಹಿಂದೆ ರಷ್ಯಾದ ಮಾಸ್ಕೋದಲ್ಲಿ ಗೋಸ್ವಾಮಿ ಅವರು ನೀಡಿದ ಭಾರತೀಯ ಆಯುರ್ವೇದ ಹಾಗೂ ಯೋಗದ ಬಗೆಗಿನ ಉಪನ್ಯಾಸ ಕೇಳಿದ ನಟಿ ಅನ್ನಾ, ಗೋಸ್ವಾಮಿ ಅವರನ್ನು ಮನವಿ ಮಾಡಿಕೊಂಡು ಭಾರತಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ.

ಯೋಗ ಮತ್ತು ಆಯುರ್ವೇದದ ಬಗ್ಗೆ ಮಾತನಾಡಿರುವ ಅವರು ಯಾವುದೇ ಅಡ್ಡ ಪರಿಣಾಮ ಇರದ ಉತ್ತಮ ಚಿಕೆತ್ಸೆ ಇದಾಗಿದೆ. ನಾನು ನಿರಂತರ ಯೋಗ ಅಭ್ಯಾಸ ಮಾಡುತ್ತಿರುತ್ತೇನೆ. ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದು, ಈ ಸುಂದರ ನೆನಪುಗಳನ್ನು ನಾನೆಂದಿಗೂ ಮರೆಯುವುದಿಲ್ಲ ಎಂಬ ಮಾತುಗಳನ್ನಾಡಿದ್ದಾರೆ.

ಭಾರತದ ಹಿಂದಿ ಸಿನಿಮಾಗಳು ಅಂದರೆ ನನಗಿಷ್ಟ ಅದರಲ್ಲಿ ಸೀತಾ ಔರ್​ ಗೀತಾ ಎಂಬ ಸಿನಿಮಾ ಇಷ್ಟವಾಗಿದ್ದು, ಅದನ್ನು ಹಲವಾರು ಬಾರಿ ನೋಡಿದ್ದೇನೆ. ಬಾಲಿವುಡ್​ನ ಮಿಥುನ್​ ಚಕ್ರವರ್ತಿ ನಂಗಿಷ್ಟವಾದ ನಟ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top