Monday, 25th September 2017  

Vijayavani

1. ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಅಬ್ಬರಿಸಿದ ವರುಣ- ಕೆರೆಯಂತಾಗಿದ್ದವು ಅಂಡರ್​ಪಾಸ್​- ಮೈಸೂರು ಬ್ಯಾಂಕ್​ ಸರ್ಕಲ್​ನಲ್ಲಿ ಪಲ್ಟಿಯಾಯ್ತು ವಾಹನ 2. ಇಂದು ದೀನ್​ ದಯಾಳ್​​ ಜನುಮ ದಿನ- ಲೋಕಾರ್ಪಣೆಗೊಳ್ಳಲಿದೆ ವಿದ್ಯುತ್​ ಭವನ- ಕುಸಿದ ಅರ್ಥವ್ಯವಸ್ಥೆಗೆ ಮೋದಿ ನೀಡ್ತಾರಾ ಟಾನಿಕ್​ 3. ಬಾರ್ಡರ್​ ವಿಸಿಟ್​ಗೆ ಹೊರಟ ಹೋಮ್​ ಮಿನಿಸ್ಟರ್​- ಸೆ.28 ರಿಂದ 4 ದಿನಗಳ ಪ್ಲಾನ್​- ಡೋಕ್ಲಾಂ ಪ್ರದೇಶಕ್ಕೆ ಮೊದಲ ಭೇಟಿ 4. ಜರ್ಮನಿ ಸಂಸತ್ತಿನ ಚುನಾವಣೋತ್ತರ ಸಮೀಕ್ಷೆ- ಮಾರ್ಕೆಲ್​ ಮತ್ತೆ ಚಾನ್ಸಲರ್​ ಆಗೋ ಸಾಧ್ಯತೆ- ಅಲ್ಟರ್​ನೇಟಿವ್​ ಜರ್ಮನಿಗಿಲ್ಲ ಮನ್ನಣೆ 5. 3ನೇ ಪಂದ್ಯದಲ್ಲೂ ಕಾಂಗರೂ ಪಡೆ ಉಡೀಸ್‌- ರೋಹಿತ್, ಪಾಂಡ್ಯ ಆಟಕ್ಕೆ ಆಸೀಸ್‌ ಪೀಸ್‌ ಪೀಸ್‌- ಟೀಂ ಇಂಡಿಯಾ ಪಾಲಾಯ್ತು ಸಿರೀಸ್‌
Breaking News :

ಮೋದಿ 2 ಲಕ್ಷ ಕೊಡ್ತಾರೆಂಬ ವದಂತಿ: ಅಂಚೆ ಕಚೇರಿ ಮುಂದೆ ಜಮಾಸಿದ ಮಹಿಳೆಯರು

Thursday, 06.07.2017, 5:45 PM       No Comments

ಬೀದರ್​: ಪ್ರಧಾನಿ ನರೇಂದ್ರ ಮೋದಿ ಅವರು ‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂಬ ಯೋಜನೆ ಅಡಿಯಲ್ಲಿ 2 ಲಕ್ಷ ಹಣ ನೀಡುತ್ತಾರೆ ಎಂಬ ವದಂತಿಯನ್ನು ನಂಬಿದ ಬೀದರ್​ ಜನರು ‘ಜನಮರಳೋ ಜಾತ್ರೆ ಮರಳೋ’ ಎಂಬ ಗಾದೆ ಮಾತಿನಂತೆ ಹಣಕ್ಕಾಗಿ ಪೋಸ್ಟ್​ ಆಫೀಸ್​ ಮುಂದೆ ಜಮಾಯಿಸಿರುವ ಘಟನೆ ನಡೆದಿದೆ.

ಗಡಿ ಜಿಲ್ಲೆಯ ಬೀದರ್, ಭಾಲ್ಕಿ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಪೋಸ್ಟ್ ಆಫಿಸ್ ( ಅಂಚೆ ಕಚೇರಿಯ) ಮುಂದೆ ಜಮಾಯಿಸಿದ್ದಾರೆ. ಯಾರೋ ಹಬ್ಬಿಸಿದ ಸುಳ್ಳು ವದಂತಿಗೆ ಮೊರೆ ಹೋಗಿ ಪ್ರಧಾನಿ ಮೋದಿ 6 ವರ್ಷ ದಿಂದ 18 ವರ್ಷದ ಬಾಲಕಿಯರ ಮದುವೆಗಾಗಿ ಎರಡು ಲಕ್ಷ ರೂಪಾಯಿ ನೀಡುತ್ತಿದ್ದಾರೆ ಎಂಬ ವದಂತಿ ಹಬ್ಬಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರು ಪೊಸ್ಟ್​ಆಫೀಸಿಗೆ ಬಂದು ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಫಾರ್ಮ್ ತುಂಬಿ ದೆಹಲಿ ಪ್ರಧಾನಿ ಹೆಸರಿನಲ್ಲಿ ಜನರು ಪೊಸ್ಟ್ ಮಾಡುತ್ತಿದ್ದಾರೆ.

6 ವರ್ಷ ದಿಂದ 32 ವರ್ಷದ ವರೆಗಿನ ಬಾಲಕಿಯರು ಮಹಿಳೆಯರಿಗಾಗಿ ಈ ಯೋಜನೆ ಎಂದು ಸುಳ್ಳು ಸುದ್ದಿ ಯಿಂದ ಇಡೀ ಜಿಲ್ಲೆಯ ಎಲ್ಲಾ ಅಂಚೆ ಕಚೇರಿ ಮುಂದೆ ಹೆಣ್ಣು ಮಕ್ಕಳೊಂದಿಗೆ ಮಹಿಳೆಯರು ಜಮಾಯಿಸಿದ್ದಾರೆ.

Leave a Reply

Your email address will not be published. Required fields are marked *

Back To Top