Tuesday, 17th October 2017  

Vijayavani

1. ಅಕ್ರಮ ಕಸಾಯಿಖಾನೆ ಮಾಲೀಕರ ದರ್ಪ – ನೋಟಿಸ್​​​ ನೀಡಲು ಹೋದ ಪೊಲೀಸರ ಮೇಲೆಯೇ ಹಲ್ಲೆ – ಹೊಯ್ಸಳ ಸೇರಿ ನಾಲ್ಕು ವಾಹನಗಳು ಜಖಂ 2. ದಿಗ್ವಿಜಯ ಸಿಂಗ್​​ ಸಂಬಂಧಿ ಟೆಂಡರ್​ ಟೋಪಿ – ಗುತ್ತಿಗೆ​​​​​​ ನೆಪದಲ್ಲಿ ಕೋಟಿ ಕೋಟಿ ಪಂಗನಾಮ – ಭವಾನಿ ಸಿಂಗ್​​​ ವಿರುದ್ಧ ವಂಚನೆ ಆರೋಪ 3. ಉಸ್ತುವಾರಿ ಎದುರಲ್ಲೇ ಕಾಂಗ್ರೆಸ್​ ಗಲಾಟೆ – ಕೈಗೆ ಸಿಕ್ಕ ಕುರ್ಚಿಗಳು ಪೀಸ್ ಪೀಸ್​- ಚಿತ್ರದುರ್ಗದಲ್ಲಿ ಮನೆ ಮನೆ ಪ್ರಚಾರದ ವೇಳೆ ಕಿತ್ತಾಟ 4. ಜನರಕ್ಷಾ ಯಾತ್ರೆಗೆ ಅಂತಿಮ ತೆರೆ – ಸಾವಿರಾರು ಕಾರ್ಯಕರ್ತರೊಂದಿಗೆ ಚಾಣಕ್ಯ ಪಾದಯಾತ್ರೆ -ತಿರುವನಂತಪುರಂನಲ್ಲಿ ಬಿಜೆಪಿ ಬೃಹತ್​ Rally  5. ಸಾರಥಿಗೆ ಸಂದ ಬ್ರಿಟನ್​ ಗೌರವ – ಚಕ್ರವರ್ತಿಗೆ ಬಂದಿದೆ ಆಹ್ವಾನ – ಅ.19 ರಂದು ಲಂಡನ್​ನಲ್ಲಿ ಸನ್ಮಾನ
Breaking News :

ಸ್ವಗ್ರಾಮ ಬಂಟ್ವಾಳದಲ್ಲಿ ಶರತ್ ಮಡಿವಾಳ ಅಂತ್ಯಕ್ರಿಯೆ

Saturday, 08.07.2017, 4:06 PM       No Comments

ಮಂಗಳೂರು: ಆರ್​ಎಸ್​ಎಸ್​ ಕಾರ್ಯಕರ್ತ ಶರತ್​​ ಮಡಿವಾಳ ಅವರ ಅಂತ್ಯಕ್ರಿಯೆ ಸ್ವಗ್ರಾಮ ಬಂಟ್ವಾಳದಲ್ಲಿ ನೆರವೇರಿದೆ. ಬಂಟ್ವಾಳದ ಸಜಿಪದಲ್ಲಿ ನೆರವೇರಿದ ಅಂತ್ಯಕ್ರಿಯೆಯಲ್ಲಿ ಬಿಜೆಪಿ ನಾಯಕರು ಹಾಗೂ ಸಾವಿರಾರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು.

ಶನಿವಾರ ಬೆಳಗ್ಗೆ ಮಂಗಳೂರಿನಿಂದ ಹೊರಟ ಶರತ್​ ಮಡಿವಾಳ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಮೆರವಣಿಗೆಯಲ್ಲಿ ಸಾವಿರಾರು ಹಿಂದು ಕಾರ್ಯಕರ್ತರು ಭಾಗಿಯಾಗಿದ್ದರು. ಬಿಜೆಪಿ ಮುಖಂಡರೂ ಪಾಲ್ಗೊಂಡಿದ್ದರು.

ಶಾಂತಿಯುತವಾಗಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿ ಗಲಭೆ ಎಬ್ಬಿಸುವ ಯತ್ನ ಕೂಡ ನಡೆಯಿತು. ಈ ವೇಳೆ ಪೊಲೀಸರಿಂದ ಲಾಠಿ ಚಾಜ್​ರ್ ಮಾಡಲಾಯಿತು. ಕಿಡಿಗೇಡಿಗಳು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಸಣ್ಣ-ಪುಟ್ಟ ಅಹಿತಕರ ಘಟನೆಗಳು ನಡೆದವು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top