Tuesday, 20th February 2018  

Vijayavani

ಸದನದಲ್ಲಿ ಶಾಸಕರಿಲ್ಲದೆ ಬಣಬಣ - ಇಂದಿನ ಕಲಾಪಕ್ಕೆ ಬರೀ 22 ಮಂದಿ ಹಾಜರ್​ - ಬಜೆಟ್​ ಅಧಿವೇಶನವೂ 3 ದಿನ ಮೊಟಕು.        ಒಬ್ಬರಿಗಿಂತ ಮತ್ತೊಬ್ಬ ಖತರ್ನಾಕ್​​ - ಎಂಎಲ್​ಎ ಪುತ್ರನ ಟೀಂನಲ್ಲಿ 8 ಮಂದಿ - ಇದು ನಲಪಾಡ್​​​​​ ಗ್ಯಾಂಗ್​ನ ಕಂಪ್ಲೀಟ್​ ಕಹಾನಿ.        ವಿದ್ವತ್​ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ - ಮೂಗಿನ ಮೂಳೆ‌ ಕಟ್​​​, ಮೂಖ ಊದಿಕೊಂಡಿದೆ - ಐಸಿಯುನಲ್ಲೇ ಚಿಕಿತ್ಸೆ ಅಂದ್ರು ಮಲ್ಯ ಆಸ್ಪತ್ರೆ ವೈದ್ಯರು.        ವಿದ್ವತ್​​​​​​​​​​ ಬಿಜೆಪಿ ಕಾರ್ಯಕರ್ತ ವಿಚಾರ - ವಿವಾದದ ಬಳಿಕ ತಪ್ಪು ಸರಿಪಡಿಸಿಕೊಂಡ ಬಿಜೆಪಿ - ಅವ್ರು ನಮ್ಮ ಕಾರ್ಯಕರ್ತನಲ್ಲ ಅಂತಾ ಅಮಿತ್ ಷಾ ಸ್ಪಷ್ಟನೆ.        ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ - ಚಲಿಸುತ್ತಿದ್ದ ಲಾರಿಯ ಟಯರ್ ಸ್ಫೋಟ - ಇಬ್ಬರ ದುರ್ಮರಣ, ಲಾರಿ ಚಾಲಕನ ಸ್ಥಿತಿ ಗಂಭೀರ.       
Breaking News

ಭಾರತ-ದಕ್ಷಿಣ ಆಪ್ರಿಕ ಎರಡನೇ ಟೆಸ್ಟ್‌: ಭಾರತಕ್ಕೆ ಹೀನಾಯ ಸೋಲು

Wednesday, 17.01.2018, 4:03 PM       No Comments

ಸೆಂಚುರಿಯನ್‌: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಹೀನಾಯ ಸೋಲನ್ನು ಅನುಭವಿಸಿದ್ದು, ದಕ್ಷಿಣ ಆಫ್ರಿಕ 2-0 ಅಂತರದಲ್ಲಿ ಸರಣಿ ಮುನ್ನಡೆ ಕಾಯ್ದುಕೊಂಡಿದೆ.

ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ 151ಕ್ಕೆ ಆಲೌಟ್ ಆಗಿದ್ದು, ದಕ್ಷಿಣ ಆಫ್ರಿಕಾ ತಂಡಕ್ಕೆ 135 ರನ್​​ಗಳ ಗೆಲುವು ದೊರೆತಿದೆ.

1ನೇ ಇನ್ನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾ 335, ಭಾರತ 307 ರನ್ ಗಳಿಸಿದ್ದರೆ 2ನೇ ಇನ್ನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾ 258, ಭಾರತ 151 ರನ್ ಗಳಿಸಿ ಸೋಲೊಪ್ಪಿಕೊಂಡಿದೆ.​​

ಭಾರತದ ಪರ ಮುರಳಿ ವಿಜಯ್ 9, ರಾಹುಲ್ 4, ಕೊಹ್ಲಿ 5, ಪೂಜಾರ 19, ಪಾರ್ಥಿವ್ ಪಟೇಲ್ 19, ರೋಹಿತ್ ಶರ್ಮಾ 47, ಪಾಂಡ್ಯ 6, ಅಶ್ವಿನ್‌ 3, ಮೊಹಮ್ಮದ್ ಶಮಿ 28, ಜಸ್ಪ್ರೀತ್​ ಬುಮ್ರಾ 2 ಮತ್ತು ಇಶಾಂತ್‌ ಶರ್ಮಾ 4 ರನ್​ ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪರ ಎನ್ಜಿಡಿ 6, ರಬಡಾಗೆ 3 ವಿಕೆಟ್​ ಕಬಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top