Thursday, 24th May 2018  

Vijayavani

ಶಕ್ತಿಸೌಧದ ಮುಂದೆ ಎಚ್​ಡಿಕೆ ಪದಗ್ರಹಣ - ದೇವರು ಹಾಗೂ ಕನ್ನಡ ನಾಡಿನ ಹೆಸರಲ್ಲಿ ಪ್ರಮಾಣವಚನ        ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪದಗ್ರಹಣ -ಮೈತ್ರಿ ಸರ್ಕಾರದಲ್ಲಿ ಅಧಿಕಾರದ ಚುಕ್ಕಾಣಿ        ರಾಜ್ಯದಲ್ಲಿ ಕುಮಾರಪರ್ವ ಶುರು - ವಿಧಾನಸೌಧದ ಮುಂದೆ ತೃತೀಯ ರಂಗದ ವೈಭವ        ವೇದಿಕೆಯಲ್ಲಿ ಮಮತಾ ಬ್ಯಾನರ್ಜಿ ಸಿಡಿಮಿಡಿ - ಎಚ್​ಡಿಡಿ ಸಮಾಧಾನಿಸಿದ್ರೂ ಕರಗದ ಮುನಿಸು        ವಿಧಾನಸೌಧದ ಮುಂದೆ ಜನರ ದಂಡು- ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಕೈ-ದಳ ಕಾರ್ಯಕರ್ತರು        ವರುಣನ ಅಬ್ಬರದ ಬಳಿಕ ಪ್ರಮಾಣವಚನದ ಸಂಭ್ರಮ- ಕುಣಿದು ಕುಪ್ಪಳಿಸಿದ ಎಚ್​ಡಿಕೆ ಅಭಿಮಾನಿಗಳು       
Breaking News

ತಮಿಳುನಾಡಿನ ಶಾಸಕರಿಗೆ ಶೇ. 100 ರಷ್ಟು ವೇತನ ಹೆಚ್ಚಳ ಮಸೂದೆ ಮಂಡನೆ

Wednesday, 10.01.2018, 1:30 PM       No Comments

ಚೆನ್ನೈ: ತಮಿಳುನಾಡಿನ ವಿಧಾನಸಭೆ ಸದಸ್ಯರ ವೇತನ ಪರಿಷ್ಕರಣೆ ಕುರಿತಾದ ಮಸೂದೆಯನ್ನು ಮುಖ್ಯಮಂತ್ರಿ ಪಳನಿಸ್ವಾಮಿ ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದ್ದು, ಪೊಂಗಲ್ ಹಬ್ಬಕ್ಕೂ ಮುಂಚಿತವಾಗಿ ಶಾಸಕರಿಗೆ ಸಿಹಿ ನೀಡಿದ್ದಾರೆ.

ಬಿಲ್‌ಗೆ ಅಂಕಿತ ದೊರೆತರೆ ನಾಳೆಯಿಂದಲೇ ನೂತನ ಆದೇಶ ಜಾರಿಗೆ ಬರಲಿದ್ದು, ಶಾಸಕರ ವೇತನ ನೂರು ಪಟ್ಟು ಹೆಚ್ಚಾಗಲಿದೆ. ಸದ್ಯ ತಿಂಗಳಿಗೆ 55 ಸಾವಿರ ವೇತನ ಪಡೆಯುತ್ತಿರುವ ಶಾಸಕರು ಏಕಾಏಕಿ 1.05 ಲಕ್ಷ ವೇತನ ಪಡೆಯುತ್ತಾರೆ.

ಇನ್ನು ಡಿಎಂಕೆ ಮತ್ತು ಟಿಟಿವಿ ಎಂಎಲ್‌ಎಗಳು ವೇತನ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದ್ದಾರೆ.

ಈ ಹಿಂದೆ ಜುಲೈನಲ್ಲಿಯೇ ವೇತನ ಹೆಚ್ಚಳ ಕುರಿತು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ವಿಧಾನಸಭೆ ಅಧಿವೇಶನದಲ್ಲಿ ಘೋಷಿಸಿದ್ದರು.
ಸಾರಿಗೆ ಇಲಾಖೆಯಲ್ಲಿ ಸಮಸ್ಯೆ ಬಿಗಡಾಯಿಸಿದ್ದು, ನೌಕರಿ ಕಾಯಂ ಮತ್ತು ವೇಚನ ಹೆಚ್ಚಳಕ್ಕೆ ಒತ್ತಾಯಿಸಿ ಕಳೆದ ಒಂದು ವಾರದಿಂದಲೂ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದರೂ ಪಳನಿಸ್ವಾಮಿ ನೇತೃತ್ವದ ಸರ್ಕಾರ ಸಮಸ್ಯೆಗೆ ಪರಿಹಾರ ನೀಡಿಲ್ಲ. ಸದ್ಯ ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top