Wednesday, 19th September 2018  

Vijayavani

ಭಿನ್ನಮತ ಶಮನಕ್ಕೆ ಕೈ ಪಡೆ ಕಸರತ್ತು - ಸಂಪುಟದಲ್ಲಿ ಖಾಲಿ ಇರೋದು ಆರು, ಆಕಾಂಕ್ಷಿಗಳು ಹತ್ತಾರು        ರಾಜ್ಯ ಕೈ ಪಡೆಯಲ್ಲಿ ಬಂಡಾಯ ಶಮನಕ್ಕೆ ಸರ್ಕಸ್ - ಇತ್ತ ದಿಲ್ಲಿಯಲ್ಲಿ ಸಿದ್ದು ವಾಕಿಂಗ್ ಮೂಲಕ ರಿಲ್ಯಾಕ್ಸ್ - ರಾಹುಲ್ ಜತೆ ಮೀಟಿಂಗ್        ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ರಣೋತ್ಸಾಹದಲ್ಲಿ ರಾಜ್ಯ ಕಮಲ ಪಾಳಯ - ಅರಮನೆ ಮೈದಾನದಲ್ಲಿ ಬಿಜೆಪಿ ವಿಶೇಷ ಸಭೆ - ಗಾಯತ್ರಿ ವಿಹಾರಕ್ಕೆ ಆಗಮನ        ಇಡಿ ಕೇಸ್ ಬಳಿಕ ಡಿಕೆ ಸಹೋದರರಲ್ಲಿ ತಳಮಳ - ಸುಪ್ರೀಂ ವಕೀಲರ ಜತೆ ಸುರೇಶ್ ನಿರಂತರ ಸಂಪರ್ಕ        ಅಗಸ್ತಾ ವೆಸ್ಟ್​ಲ್ಯಾಂಡ್ ಕಾಪ್ಟರ್ ಖರೀದಿ ಹಗರಣ - ಮಧ್ಯವರ್ತಿ ಮೈಕಲ್ ಹಸ್ತಾಂತರಕ್ಕೆ ದುಬೈಕೋರ್ಟ್ ಗ್ರೀನ್ ಸಿಗ್ನಲ್       
Breaking News

ಬಿಎಂಟಿಸಿ ಬಸ್​-ಕಾರು ಡಿಕ್ಕಿ: ಕಾರ್​ ಚಾಲಕ ಸ್ಥಳದಲ್ಲೇ ಸಾವು

Saturday, 14.07.2018, 2:22 PM       No Comments

ಬೆಂಗಳೂರು: ಬಿಎಂಟಿಸಿ ಬಸ್​-ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಹೆಸರಘಟ್ಟ ರಸ್ತೆಯ ಹುರುಳಿ ಚಿಕ್ಕನಹಳ್ಳಿ ಬಳಿ ಘಟನೆ ನಡೆದಿದ್ದು, ಸೋಮಶೆಟ್ಟಿಹಳ್ಳಿ ನಿವಾಸಿ ಜಗದೀಶ್(32) ಮೃತರಾಗಿದ್ದಾರೆ. 253G ನಂಬರಿನ 9ನೇ ಡಿಪೋಗೆ ಸೇರಿದ ಬಸ್ಸು ಇದಾಗಿದ್ದು, ಕೆಂಪೇಗೌಡ ಬಸ್ ನಿಲ್ದಾಣದಿಂದ ಮಧುರೆ ಗ್ರಾಮಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.

ಬಸ್ ಚಾಲಕನಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜಾಲಹಳ್ಳಿ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top