Thursday, 20th September 2018  

Vijayavani

Breaking News

ಕೇರಳದಲ್ಲಿ ಬತ್ತುತ್ತಿವೆ ನದಿ, ಬಾವಿಗಳು..!

Thursday, 13.09.2018, 9:39 PM       No Comments

ತಿರುವನಂತಪುರಂ: ಶತಮಾನದ ಭೀಕರ ಪ್ರವಾಹದಿಂದ ತೀವ್ರ ಹಾನಿಗೊಳಗಾಗಿರುವ ಕೇರಳ ಈಗಷ್ಟೇ ಚೇತರಿಸಿ ಕೊಳ್ಳುತ್ತಿದೆ. ಆದರೆ ಗಾಯದ ಮೇಲೆ ಬರೆ ಎಳೆದಂತೆ ಕೇರಳದಲ್ಲಿ ಈಗ ನದಿಗಳು ಮತ್ತು ಬಾವಿಗಳು ಬತ್ತುತ್ತಿದ್ದು, ಬರ ಪರಿಸ್ಥಿತಿ ಎದುರಾಗುವ ಆತಂಕ ಕಾಡುತ್ತಿದೆ.

ಹೌದು ಪ್ರವಾಹದ ನಂತರ ಕೇರಳದಲ್ಲಿ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ, ನದಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಬಾವಿಗಳು ಬತ್ತುತ್ತಿವೆ, ಅಂತರ್ಜಲ ಮಟ್ಟ ಕುಸಿಯುತ್ತಿದೆ ಮತ್ತು ರಾಜ್ಯದ ಹಲವೆಡೆ ಎರೆಹುಳುಗಳು ಸಾಮೂಹಿಕವಾಗಿ ಸಾವನ್ನಪ್ಪುತ್ತಿವೆ. ಈ ವಿದ್ಯಮಾನಗಳು ನೆರೆ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಾಜ್ಯ ಸರ್ಕಾರಕ್ಕೆ ಮತ್ತಷ್ಟು ತಲೆಬಿಸಿ ತಂದೊಡ್ಡಿದೆ.

ಈ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ತಜ್ಞರ ಸಮಿತಿಗೆ ಈ ವಿದ್ಯಮಾನಗಳ ಕುರಿತು ವೈಜ್ಞಾನಿಕ ಅಧ್ಯಯನ ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಜಲ ಸಂಪನ್ಮೂಲ ನಿರ್ವಹಣಾ ಕೇಂದ್ರಕ್ಕೆ ನೀರಿನ ಮಟ್ಟ ಕಡಿಮೆಯಾಗುತ್ತಿರುವ ಕುರಿತು, ಅಂತರ್ಜಲ ಮಟ್ಟದಲ್ಲಿ ಉಂಟಾಗಿರುವ ಏರು ಪೇರು ಮತ್ತು ಭೂಮಿಯಲ್ಲಿ ಕಂಡುಬಂದಿರುವ ಬಿರುಕುಗಳ ಕುರಿತು ಅಧ್ಯಯನ ನಡೆಸುವಂತೆ ಸೂಚಿಸಿದ್ದಾರೆ.

ಪ್ರವಾಹದ ಸಂದರ್ಭದಲ್ಲಿ ಉಕ್ಕಿ ಹರಿದಿದ್ದ ಪೆರಿಯಾರ್​, ಭಾರತಾಪುಳಾ, ಪಂಪಾ ಮತ್ತು ಕಬಿನಿ ನದಿಗಳು ಈಗ ಬತ್ತುತ್ತಿದ್ದು, ಈ ನದಿಗಳಲ್ಲಿ ಅಸಹಜವಾಗಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದು ಕಂಡು ಬಂದಿದೆ. (ಏಜೆನ್ಸೀಸ್​)

ನೆರೆಪೀಡಿತ ಕೊಡಗಲ್ಲೀಗ ಬರ!

Leave a Reply

Your email address will not be published. Required fields are marked *

Back To Top