Sunday, 21st October 2018  

Vijayavani

ಅರ್ಜುನ್‌ ಸರ್ಜಾಕಡೆಯಿಂದ ಬೆದರಿಕೆ ಕರೆ - ಕಾನೂನು ಹೋರಾಟದ ಬಗ್ಗೆ ದಾಖಲೆ ಸಂಗ್ರಹ - ಸುದ್ದಿಗೋಷ್ಠಿಯಲ್ಲಿ ಶ್ರುತಿ ಗಂಭೀರ ಆರೋಪ        ಭಾವೈಕ್ಯತೆ ಶ್ರೀಗಳಿಗೆ ಕಣ್ಣೀರ ವಿದಾಯ - ಕ್ರಿಯಾಸಮಾಧಿಯಲ್ಲಿ ಸಿದ್ದಲಿಂಗ ಶ್ರೀ ಲೀನ - ಭಕ್ತಸಾಗರದಿಂದ ತೋಂಟದಾರ್ಯರಿಗೆ ಅಂತಿಮ ನಮನ        ಡಿಕೆಶಿ ಶೋ ಮಾಡೋದು ಬಿಡ್ಬೇಕು - ಪಕ್ಷದ ಪರ ಕೆಲಸ ಮಾಡ್ಬೇಕು - ಬಳ್ಳಾರಿ ಪ್ರಚಾರದಲ್ಲಿ ಬಯಲಾಯ್ತು ಜಾರಕಿಹೊಳಿ ಸಿಟ್ಟು        ಸಿಎಂ ಎಚ್‌ಡಿಕೆ ಮತ್ತೆ ಟೆಂಪಲ್‌ರನ್‌ - ಶಕ್ತಿ ದೇವತೆ ಸನ್ನಿಧಿಗೆ ಕುಮಾರಸ್ವಾಮಿ - ಮಹಾರಾಷ್ಟ್ರದ ತುಳಜಾ ಭವಾನಿ ದೇಗುಲಕ್ಕೆ ಭೇಟಿ        ಶಿರಡಿ ಸಾಯಿ ಸಮಾಧಿ ಶತಮಾನೋತ್ಸವ ಹಿನ್ನೆಲೆ - ಸಾಯಿ ಸನ್ನಿಧಿಗೆ ಭಕ್ತ ಸಾಗರ - ನಾಲ್ಕು ದಿನದಲ್ಲಿ 5 ಕೋಟಿ ರೂಪಾಯಿ ಕಾಣಿಕೆ        ರೋಡ್ ರೋಲರ್​ನ್ನೂ ಬಿಡದ ಕಳ್ಳರು - ವರ್ತೂರು ಬಳಿ ನಿಲ್ಲಿಸಿ ಎಸ್ಕೇಪ್ ಆದ ಚೋರರು - ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ       
Breaking News

ಕಾಫಿ ಬೆಳೆ ನಷ್ಟದ ಅಂದಾಜಿಗೆ ಕಾಫಿ ಮಂಡಳಿ ನಿರ್ಧಾರ

Wednesday, 13.06.2018, 8:18 PM       No Comments

ಚಿಕ್ಕಮಗಳೂರು: ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದಾಗಿರುವ ನಷ್ಟದ ಅಂದಾಜು ಮಾಡಲು ಕಂದಾಯ ಇಲಾಖೆ ಜತೆ ಸೇರಿ ಜಂಟಿ ಸಮೀಕ್ಷೆ ನಡೆಸಲು ಕಾಫಿ ಮಂಡಳಿ ನಿರ್ಧರಿಸಿದೆ. ಬುಧವಾರ ಬೆಂಗಳೂರಿನ ಕಾಫಿ ಮಂಡಳಿ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷ ಎಂ.ಎಸ್.ಭೋಜೇಗೌಡರ ಅಧ್ಯಕ್ಷತೆಯಲ್ಲಿ ಮಂಡಳಿ ಹಾಗೂ ಕಾಫಿ ಬೆಳೆಯುವ ರಾಜ್ಯಗಳ ವಾಣಿಜ್ಯ ಹಾಗೂ ರಾಷ್ಟ್ರೀಯ ಬ್ಯಾಂಕ್​ಗಳ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಯಿತು.

ಈಗಾಗಲೇ ಕಳೆದ ಎರಡು, ಮೂರು ವರ್ಷಗಳಿಂದ ಮಳೆ ಕೊರತೆಯಿಂದ ಕಾಫಿ ತೋಟಗಳು ಹಾಳಾಗಿವೆ. ಜತೆಗೆ ಜಾಗತಿಕ ತಾಪಮಾನ ಹೆಚ್ಚಳ ಅರೇಬಿಕಾ ಕಾಫಿ ತೋಟಗಳಲ್ಲಿ ಬಿಳಿಕಾಂಡ ಕೊರಕದ ಹಾವಳಿ ಹೆಚ್ಚಿಸಿದೆ. ತೋಟಗಳಲ್ಲಿ ವರ್ಷಪೂರ್ತಿ ಹರಿಯುತ್ತಿದ್ದ ಅನೇಕ ಸಣ್ಣ ಹಳ್ಳಗಳು ಒಣಗಿಹೋಗಿವೆ. ಕಾಫಿ ಬೆಲೆಯೂ ತೀವ್ರ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರು ಪಡೆದ ಸಾಲವನ್ನು ತೀರಿಸಲು ಸಾಧ್ಯವಾಗದಿರುವ ಬಗ್ಗೆಯೂ ಬ್ಯಾಂಕ್ ಅಧಿಕಾರಿಗಳ ಗಮನ ಸೆಳೆಯಲಾಯಿತು.

ಕಾಫಿ ತೋಟದ ಆದಾಯದಲ್ಲಿ ಶೇ.70ರಷ್ಟು ಕಾರ್ವಿುಕರ ಸಂಬಳ ಮತ್ತು ಸೌಲಭ್ಯಕ್ಕೆ ಖರ್ಚಾಗುತ್ತಿದೆ. ಉಳಿದ ಹಣದಲ್ಲಿ ಬಡ್ಡಿ ಸಹಿತ ಸಾಲ ಮರುಪಾವತಿಸಬೇಕಿದೆ. ಆದರೆ ಈಗಿನ ಬೆಲೆ ಕುಸಿತದಿಂದ ಸಾಲ ಮರುಪಾವತಿ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಆಡಳಿತ ಮಂಡಳಿ ಬೆಳೆಗಾರರ ಸಾಲ ಮತ್ತು ಬಡ್ಡಿ ಮನ್ನಾ ಬಗ್ಗೆ ಚಿಂತನೆ ನಡೆಸಬೇಕು ಎಂದರು.

ಬೆಳೆಗಾರರ ಪರಿಸ್ಥಿತಿ ಬ್ಯಾಂಕ್​ಗಳಿಗೆ ಅರ್ಥವಾಗಿದೆ. ಇದನ್ನು ಆರ್​ಬಿಐ ಗಮನಕ್ಕೂ ತರಲಾಗುವುದು. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದೆ ಬಡ್ಡಿ ಅಥವಾ ಸಾಲಮನ್ನಾ ಬಗ್ಗೆ ಮಂಡಳಿ ವಿವರಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಬಾರಿ ಪೂರ್ವ ಮುಂಗಾರು ಜತೆಗೆ ಮುಂಗಾರು ಸಹ ಸತತವಾಗಿ ಸುರಿದ ಹಿನ್ನೆಲೆಯಲ್ಲಿ ಕಾಫಿ ಬೆಳೆಯುವ ಅನೇಕ ರಾಜ್ಯಗಳಲ್ಲಿ ತೋಟಗಳು ಅತೀವೃಷ್ಟಿಗೆ ತುತ್ತಾಗಿವೆ. ತಕ್ಷಣ ಕಾಫಿ ಮಂಡಳಿ ಅಧಿಕಾರಿಗಳ ಜತೆಗೆ ಕಂದಾಯ ಇಲಾಖೆ ಅಧಿಕಾರಿಗಳು ಒಗ್ಗೂಡಿ ಸಮೀಕ್ಷೆ ಮೂಲಕ ನಷ್ಟದ ಅಂದಾಜು ಮಾಡಿ ವರದಿ ತಯಾರಿಸುವ ಕುರಿತು ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

Back To Top