Thursday, 24th May 2018  

Vijayavani

ಶಕ್ತಿಸೌಧದ ಮುಂದೆ ಎಚ್​ಡಿಕೆ ಪದಗ್ರಹಣ - ದೇವರು ಹಾಗೂ ಕನ್ನಡ ನಾಡಿನ ಹೆಸರಲ್ಲಿ ಪ್ರಮಾಣವಚನ        ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪದಗ್ರಹಣ -ಮೈತ್ರಿ ಸರ್ಕಾರದಲ್ಲಿ ಅಧಿಕಾರದ ಚುಕ್ಕಾಣಿ        ರಾಜ್ಯದಲ್ಲಿ ಕುಮಾರಪರ್ವ ಶುರು - ವಿಧಾನಸೌಧದ ಮುಂದೆ ತೃತೀಯ ರಂಗದ ವೈಭವ        ವೇದಿಕೆಯಲ್ಲಿ ಮಮತಾ ಬ್ಯಾನರ್ಜಿ ಸಿಡಿಮಿಡಿ - ಎಚ್​ಡಿಡಿ ಸಮಾಧಾನಿಸಿದ್ರೂ ಕರಗದ ಮುನಿಸು        ವಿಧಾನಸೌಧದ ಮುಂದೆ ಜನರ ದಂಡು- ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಕೈ-ದಳ ಕಾರ್ಯಕರ್ತರು        ವರುಣನ ಅಬ್ಬರದ ಬಳಿಕ ಪ್ರಮಾಣವಚನದ ಸಂಭ್ರಮ- ಕುಣಿದು ಕುಪ್ಪಳಿಸಿದ ಎಚ್​ಡಿಕೆ ಅಭಿಮಾನಿಗಳು       
Breaking News

ಒಎನ್‌ಜಿಸಿ ಶೋಧ ನೌಕೆ ಸ್ಫೋಟ: ಐವರು ಸಾವು, 12ಕ್ಕೂ ಹೆಚ್ಚು ಜನರಿಗೆ ಗಾಯ

Tuesday, 13.02.2018, 1:42 PM       No Comments

ಕೇರಳ: ಕೊಚ್ಚಿನ್‌ ಹಡಗುಕಟ್ಟೆ ಸ್ಫೋಟದಲ್ಲಿ ಐವರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ(ಒಎನ್‌ಜಿಸಿ)ದ ಸಾಗರ್‌ ಭೂಷಣ್‌ ತೈಲ ಶೋಧ ನೌಕೆಯಲ್ಲಿ ಮಂಗಳವಾರ ಬೆಳಗ್ಗೆ 10:30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ದುರಸ್ತಿ ಕಾರ್ಯಕ್ಕಾಗಿ ನೌಕೆಯನ್ನು ಹಡಗುಕಟ್ಟೆಗೆ ತರಲಾಗಿತ್ತು ಎಂದು ತಿಳಿದು ಬಂದಿದೆ.

ಮೂರು ಮಂದಿ ನೌಕೆಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

ಸಾರ್ವಜನಿಕ ವಲಯದ ಕೊಚ್ಚಿನ್‌ ಹಡಗುಕಟ್ಟೆಯಲ್ಲಿ ಹಡಗು ನಿರ್ಮಾಣ ಹಾಗೂ ದುರಸ್ತಿ ಕಾರ್ಯ ನಡೆಸಲಾಗುತ್ತದೆ. ಭಾರತೀಯ ನೌಕಾದಳ, ಕಡಲು ರಕ್ಷಣಾ ಪಡೆ, ತೈಲ ಶೋಧನಾ ಕೈಗಾರಿಕೆಗಳ ಬೃಹತ್‌ ಹಡಗು ದುರಸ್ತಿ ಕಾರ್ಯ ಇಲ್ಲಿಯೇ ನಡೆಸಲಾಗುತ್ತದೆ.

Leave a Reply

Your email address will not be published. Required fields are marked *

Back To Top