Monday, 19th February 2018  

Vijayavani

ಮೈಸೂರಲ್ಲಿ ಮೋದಿ ಮೇನಿಯಾ - ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ -ಮಹಾಪುರುಷರ, ವಸ್ತುಗಳ ಸ್ಮರಿಸಿದ ನಮೋ.        ಬಡವರ ಅವಶ್ಯಕತೆ ಪೂರೈಕೆಗೆ ರೈಲ್ವೆ ಅವಶ್ಯಕ - ಜೋಡಿ ಮಾರ್ಗ ಉದ್ಘಾಟಿಸಿ ನಮೋ ಮಾತು - ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ.        ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ - ಸಿಎಂ ವಿರುದ್ಧ ಪ್ರತಾಪಸಿಂಹ ವಾಕ್ಪ್ರಹಾರ - ಮೋದಿಗೆ ಸ್ಮರಣಿಕೆ ನೀಡಿದ ಮುಖಂಡರು.        ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆ ಕೇಸ್​ - ಆರೋಪಿಗಳಿಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್​​ - ಶಿವಾಜಿನಗರದ ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್.        ಸರ್ವಸಂಘ ಪರಿತ್ಯಾಗಿಗೆ ಮಹಾಮಜ್ಜನ - ಶ್ರವಣಬೆಳಗೊಳದಲ್ಲಿ ಭಕ್ತ ಸಾಗರ - ಆಸ್ಪತ್ರೆ, ಬೆಟ್ಟದ ಮೆಟ್ಟಿಲು ಲೋಕಾರ್ಪಣೆ.       
Breaking News

ತಂದೆ, ಇಬ್ಬರು ಮಕ್ಕಳ ಸಾಯಿಸಿ ಪರಾರಿಯಾದ ದಾಯಾದಿಗಳು

Saturday, 24.06.2017, 9:49 AM       No Comments

ವಿಜಯಪುರ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ದಾಯಾದಿಗಳೇ ತಂದೆ ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಜಿಲ್ಲೆಯ ಸಿಂದಗಿ ತಾಲೂಕಿನ ಹೊಸ ತಾವರಖೇಡ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಸಂಗಪ್ಪ ಹರಿಂದ್ರಾಳ (58) ಇವರ ಮಕ್ಕಳಾದ ಶರಣಬಸು ಹರಿಂದ್ರಾಳ (30) ಮತ್ತು ಮಲ್ಲಿಕಾರ್ಜುನ ಹರಿಂದ್ರಾಳ (22) ಹತ್ಯೆಗೀಡಾದವರು. ಸಂಗಪ್ಪ ಅವರ ಮತ್ತೋರ್ವ ಮಗನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಗಪ್ಪ ಮತ್ತು ಅವರ ಮಕ್ಕಳನ್ನು ಕೊಲೆಗೈದ ನಂತರ ದಾಯಾದಿಗಳು ಪರಾರಿಯಾಗಿದ್ದಾರೆ. ಅಲಮೇಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top