Sunday, 21st October 2018  

Vijayavani

ಚಡಚಣ ಸೋದರರ ಹತ್ಯೆ ಪ್ರಕರಣ-ಸಿಪಿಐ ಅಸೋದೆ 10 ದಿನ ಕಸ್ಟಡಿಗೆ-ಸಂಬಂಧಿಕರ ಮೇಲೂ ದೂರು ದಾಖಲು        ಸಿಸಿಬಿಯಿಂದ ಮುತ್ತಪ್ಪ ರೈಗೆ 8 ಗಂಟೆ ಡ್ರಿಲ್​-ಸೂಕ್ತ ದಾಖಲೆಗಳಿಂದ ಮಾಜಿ ಡಾನ್​​ ಬಚಾವ್​-ಇಂದು ಪೊಲೀಸರಿಂದ ಗನ್​​ಮ್ಯಾನ್​​ಗಳ ವಿಚಾರಣೆ        ಆ್ಯಕ್ಷನ್​​​ಕಿಂಗ್​​​ ವಿರುದ್ಧ ಶೃತಿ ಹರಿಹರನ್​ ಮೀಟು ಏಟು-ನಟಿ ವಿರುದ್ಧ ಸರ್ಜಾ ಫ್ಯಾಮಿಲಿ ಟಾಕ್​​ಫೈಟ್​​-ಆರೋಪಕ್ಕೆ ಸ್ಪಷ್ಟನೆ ನೀಡಲು ಇಂದು ಪ್ರೆಸ್​​ಮೀಟ್​​​        ಸಂಸದರ ನಿಧಿ ಹೊಡೆಯಲು ಮೆಗಾ ಪ್ಲಾನ್​-ನಕಲಿ ಲೆಟರ್​​​​​ಹೆಡ್​​​ ಮೂಲಕ ಲಕ್ಷ ಲಕ್ಷ ಗುಳುಂ-26 ಲಕ್ಷ ನುಂಗಿದ ಭೂಪ ಪೊಲೀಸರ ವಶಕ್ಕೆ        ರಂಗೇರಿತು ಉಪಚುನಾವಣೆ ಅಖಾಡ-ಇಂದು ಪಂಚ ಕ್ಷೇತ್ರಗಳಲ್ಲೂ ನಾಯಕರ ಪ್ರಚಾರ-ದೋಸ್ತಿಗೆ ಹುರುಪು ತಂದ ಗುರು-ಶಿಷ್ಯರ ಮಿಲನ        ಮಡಿಕೇರಿ ಸಂತ್ರಸ್ತರಿಗೆ ಮಾದರಿ ಮನೆಗಳ ನಿರ್ಮಾಣ-5 ರಿಂದ 10 ಲಕ್ಷದೊಳಗೆ ಮೂರು ರೀತಿಯ ಮನೆ-ಜನರು ಕೇಳಿದ ಮನೆ ಎರಡು ತಿಂಗಳೊಳಗೆ ರೆಡಿ       
Breaking News

ಗ್ರಾಹಕರೇ ಡೇಟಾದ ನೈಜ ಮಾಲೀಕರು

Wednesday, 18.07.2018, 3:05 AM       No Comments

ಅಂತರ್ಜಾಲ, ಸಾಮಾಜಿಕ ಜಾಲತಾಣ ಮತ್ತು ಮೊಬೈಲ್​ಗಳಿಂದ ಮಾಹಿತಿ (ಡೇಟಾ) ಕಳವು ಪ್ರಕರಣ ಹೆಚ್ಚಿರುವ ಬೆನ್ನಿಗೆ ಬಳಕೆದಾರರ ಖಾಸಗಿತನ, ಡೇಟಾ ಒಡೆತನ ಮತ್ತು ಸುರಕ್ಷತೆ ವಿಷಯದಲ್ಲಿ ಸರ್ಕಾರ ಸಮರ್ಪಕವಾದ ನಿಯಂತ್ರಣ ನೀತಿ ರೂಪಿಸಬೇಕು. ಏಕೆಂದರೆ ಮಾಹಿತಿಯ ನೈಜ ಮಾಲೀಕರು ಮತ್ತು ಮೂಲಹಕ್ಕನ್ನು ಹೊಂದಿರುವವರು ಈ ಸೇವೆಗಳನ್ನು ಬಳಸುವಂತಹ ಗ್ರಾಹಕರು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸರ್ಕಾರಕ್ಕೆ ಸಲಹೆ ನೀಡಿದೆ.

ಟ್ರಾಯ್ ಹೇಳಿದ್ದೇನು?

ಡೇಟಾ ಒಡೆತನ ಗ್ರಾಹಕರಿಗೆ ಸೇರಿದ್ದು. ಸೇವಾದಾತ ಟೆಲಿಕಾಂ ಕಂಪನಿ, ಇಂಟರ್​ನೆಟ್ ಆಧಾರಿತ ಸೇವಾ ಸಂಸ್ಥೆಗಳು ಅಥವಾ ಸ್ಮಾರ್ಟ್ ಫೋನ್ ತಯಾರಕರಿಗೆ ಸೇರಿದ್ದಲ್ಲ ಎಂದು ಟ್ರಾಯ್ ಹೇಳಿದೆ. ಮಾಹಿತಿ ಸುರಕ್ಷತೆಗೆ ಪ್ರಸ್ತುತ ಅನುಸರಿಸುತ್ತಿರುವ ಕ್ರಮ ಗ್ರಾಹಕರಿಗೆ ಪರಿಪೂರ್ಣ ಸುರಕ್ಷತೆಯನ್ನು ಒದಗಿಸುತ್ತಿಲ್ಲ ಎಂದಿದೆ. ಯಾವುದೇ ಸೇವೆಯಲ್ಲಿ ಏಕಪಕ್ಷೀಯ ಒಪ್ಪಂದವು ಸಂಕೀರ್ಣವಾಗಿರುತ್ತದೆ ಮತ್ತು ಅರ್ಥ ಮಾಡಿಕೊಳ್ಳುವುದೂ ಕಷ್ಟಕರ. ಆದರೂ ಅನೇಕ ಆಪ್​ಗಳು ಮತ್ತು ಮೊಬೈಲ್ ತಯಾರಕರು ಇದನ್ನೇ ಅನುಸರಿಸುತ್ತಿದ್ದಾರೆ. ಇದನ್ನು ಕೊನೆಗಾಣಿಸಲು ಮೊಬೈಲ್ ಸೆಟ್ ಮತ್ತು ಆಪ್​ಗಳನ್ನು ಡೇಟಾ ಖಾಸಗಿತನ ಕಾಯ್ದೆ ವ್ಯಾಪ್ತಿಗೆ ತರಬೇಕು. ಗ್ರಾಹಕರಿಂದ ಅನಗತ್ಯವಾಗಿ ಮತ್ತು ಸಂಬಂಧಿಸದ ಡೇಟಾ ಸಂಗ್ರಹಿಸುವುದನ್ನು ನಿರ್ಬಂಧಿಸಬೇಕು ಎಂದು ಟ್ರಾಯ್ ಶಿಫಾರಸು ಮಾಡಿದೆ.

ಮಾಹಿತಿ ಕನ್ನ ತಡೆಯಿರಿ

ಪ್ರತಿಯೊಬ್ಬ ಬಳಕೆದಾರರಿಗೂ ವೈಯಕ್ತಿಕ ಮಾಹಿತಿ ಸಂಗ್ರಹ ಇರುತ್ತದೆ. ಅದರ ಮೇಲೆ ಅವರಿಗೆ ಪರಿಪೂರ್ಣ ಹಕ್ಕು ಇರುತ್ತದೆ. ಅವರ ಅನುಮತಿ ಇಲ್ಲದೆ ಬೇರೆಯವರು ಈ ಮಾಹಿತಿಯನ್ನು ಪಡೆಯಲಾಗದು. ಆದರೆ, ಈಗ ಈ ಮಾಹಿತಿಗೆ ನಾಜೂಕಿನಿಂದ ಕನ್ನ ಹಾಕಲಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಮೊಬೈಲ್ ಸೆಟ್, ನಿರ್ವಹಣಾ ವ್ಯವಸ್ಥೆ, ಅಂತರ್ಜಾಲ ಹುಡುಕಾಟ (ಬ್ರೌಸರ್ಸ್) ಮತ್ತು ಆಪ್​ಗಳನ್ನು ನಿಯಂತ್ರಿಸುವ ನೀತಿಯನ್ನು ಸರ್ಕಾರ ರೂಪಿಸಬೇಕು ಎಂದು ಟ್ರಾಯ್ ಸಲಹೆ ನೀಡಿದೆ. ಡೇಟಾದ ಖಾಸಗಿತನ ಕುರಿತಂತೆ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಸಮಿತಿ ವರದಿ ಬೆನ್ನಿಗೆ ಟ್ರಾಯ್ ಈ ಸಲಹೆಗಳನ್ನು ಸರ್ಕಾರಕ್ಕೆ ನೀಡಿದೆ.

ಯಾವುದರ ಮೇಲೆ ಪರಿಣಾಮ?

ಟ್ರಾಯ್ ನೀಡಿರುವ ಸಲಹೆಯಿಂದ ಸಾಮಾಜಿಕ ಜಾಲತಾಣ ಫೇಸ್​ಬುಕ್, ಮೊಬೈಲ್ ತಯಾರಿಕಾ ಕಂಪನಿಗಳಲ್ಲಿ ದಿಗ್ಗಜಗಳಾದ ಆಪಲ್, ಸ್ಯಾಮ್ಂಗ್, ಗೂಗಲ್​ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಗ್ರಾಹಕರೇ ಡೇಟಾದ ನೈಜ ಮಾಲೀಕರು. ಅದರ ಮೇಲೆ ಅವರಿಗೆ ಪರಿಪೂರ್ಣ ಹಕ್ಕು ಇದೆ. ಉಳಿದ ಸೇವಾದಾತರು ಈ ಡೇಟಾದ ರಕ್ಷಕರು.

| ಆರ್.ಎಸ್.ಶರ್ವ ಟ್ರಾಯ್ ಅಧ್ಯಕ್ಷ

ಪ್ರಮುಖ ಶಿಫಾರಸು

# ವೈಯಕ್ತಿಕ ಡೇಟಾ ಸಂಗ್ರಹ ಮತ್ತು ಪರಿಶೀಲನೆಗೂ ಮೊದಲು ಗ್ರಾಹಕರಿಂದ ಅನುಮತಿ ಪಡೆದುಕೊಳ್ಳಬೇಕು

# ಅನಗತ್ಯ ಮತ್ತು ಸಂಬಂಧಿಸದ ಡೇಟಾ ಸಂಗ್ರಹಕ್ಕೆ ನಿರ್ಬಂಧ

# ಮೊಬೈಲ್ ತಯಾರಕರು ಮತ್ತು ಆಪ್​ಗಳ ಏಕಪಕ್ಷೀಯ ಒಪ್ಪಂದ ಕೊನೆಯಾಗಬೇಕು

# ಆಪ್ ಮತ್ತು ಮೊಬೈಲ್ ತಯಾರಕರನ್ನೂ ಡೇಟಾ ಖಾಸಗಿತನ ಕಾಯ್ದೆ ವ್ಯಾಪ್ತಿಗೆ ತರಬೇಕು

Leave a Reply

Your email address will not be published. Required fields are marked *

Back To Top