Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಮದನಿಗೆ ಭದ್ರತೆ ನೀಡುತ್ತೇವೆಂದ ಕೇರಳ ಸರ್ಕಾರ

Thursday, 03.08.2017, 11:11 AM       No Comments

ತಿರುವನಂತಪುರಂ: ಬೆಂಗಳೂರು ಸರಣಿ ಸ್ಫೋಟದ ಅಪರಾಧಿ ಅಬ್ದುಲ್ ನಾಸಿರ್​ ಮದನಿಗೆ ಭದ್ರತೆ ನೀಡುವುದಾಗಿ ಕೇರಳ ಸರ್ಕಾರ ಕರ್ನಾಟಕಕ್ಕೆ ತಿಳಿಸಿದೆ.

ಪೀಪಲ್​ ಡೆಮಾಕ್ರಟಿಕ್​ ಪಕ್ಷದ ಮುಖ್ಯಸ್ಥ 51 ವರ್ಷದ ಮದನಿ 2008ರಲ್ಲಿ ಸಂಭವಿಸಿದ ಬೆಂಗಳೂರು ಸರಣಿ ಬಾಂಬ್​ ದಾಳಿಯ ರೂವಾರಿಯಾಗಿದ್ದನು. ಈ ಸಂಬಂಧ ಬೆಂಗಳೂರಿನ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.

ಆಗಸ್ಟ್​ 9 ರಂದು ಕೇರಳದ ಕಣ್ಣೂರಿನಲ್ಲಿ ಮಗನ ಮದುವೆಯಲ್ಲಿ ಭಾಗವಹಿಸಲು ಅನುಮತಿ ಕೇಳಿದ್ದ. ಸುಪ್ರೀಂ ಕೋರ್ಟ್​​ ಅನುಮತಿ ಮೇರೆಗೆ ಮದನಿ ಕೇರಳಕ್ಕೆ ತೆರಳುತ್ತಿದ್ದಾನೆ.ಹಾಗೆ ಪೋಷಕರನ್ನು ಭೇಟಿಯಾಗಲು ಎನ್​ಐಎ ನ್ಯಾಯಾಲಯ ಕೂಡ ಅನುಮತಿ ನೀಡಿದೆ.

ಮದನಿಯನ್ನು ಕರೆತರುವ ವೇಳೆ ಭದ್ರತೆಯನ್ನು ಕೇರಳ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಹೇಳಿದೆ. ಈ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಕೇರಳಕ್ಕೆ ಮದನಿಯನ್ನು ಕರೆದೊಯ್ಯಲು ಭಾರೀ ಭದ್ರತೆ ಒದಗಿಸಬೇಕಾಗುತ್ತದೆ. ಇದಕ್ಕಾಗಿ 14.79 ಲಕ್ಷ ವೆಚ್ಚವಾಗಲಿದೆ.(ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top