Sunday, 21st January 2018  

Vijayavani

ಬಳ್ಳಾರಿಯಲ್ಲಿ ಮನೆಗೆ ಬಂದ ಜಾಂಬವಂತ- ಚಿರತೆ ಭಯದಿಂದ ತುಮಕೂರಲ್ಲಿ ಮನೆ ಬಿಟ್ಟ ಕುಟುಂಬ- ರಾಜ್ಯದಲ್ಲಿ ಹೆಚ್ಚಿದ ಕಾಡುಪ್ರಾಣಿಗಳ ಉಪಟಳ        ಕೊಳ್ಳೇಗಾಲದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ- ಮಾದಪ್ಪನ ಬೆಟ್ಟದಲ್ಲಿ ಬಿಎಸ್​ವೈ ವಿಶೇಷ ಪೂಜೆ - ಫ್ಲೆಕ್ಸ್​​ ವಿಚಾರವಾಗಿ ಕಾರ್ಯಕರ್ತರ ಗಲಾಟೆ        ಹೆಲ್ಮೆಟ್​ ಧರಿಸಿ ಬಂದ ಕದೀಮ- ನರ್ಸ್​ ಇರುವಾಗಲೇ ಕ್ಯಾಶ್ ಎಗರಿಸಿದ- ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಹಗಲು ದರೋಡೆ        ದೆಹಲಿ ಅಗ್ನಿ ಅವಘಡದಲ್ಲಿ 17 ಮಂದಿ ಸಜೀವದಹನ- ಪಟಾಕಿ ಕಾರ್ಖಾನೆ ಮಾಲೀಕನ ಬಂಧನ- ಮೃತರಿಗೆ 5 ಲಕ್ಷ ಪರಿಹಾರ (ಕಾರ್ಖಾನೆ ಮಾಲೀಕನ ಬಂಧನ)        ಲಾಲ್​​ಬಾಗ್​ನಲ್ಲಿ ಪುಷ್ಪ ಪ್ರದರ್ಶನ- ಸಸ್ಯಕಾಶಿಗೆ ಹರಿದು ಬಂದ ಜನ- ಲಾಲ್​ಬಾಗ್​ ಸುತ್ತಮುತ್ತ ಭಾರಿ ಟ್ರಾಫಿಕ್​       
Breaking News :

ಲೀಗ್​ನ ಕೊನೆಯ ಪಂದ್ಯದಲ್ಲಿ ಗೆಲುವಿನ ನಗೆಬೀರಿದ ಆರ್​ಸಿಬಿ

Monday, 15.05.2017, 12:04 AM       No Comments

ನವದೆಹಲಿ: ಐಪಿಎಲ್-10ರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಹರ್ಷಲ್ ಪಟೇಲ್ (43 ಕ್ಕೆ 3) ಮತ್ತು ಪವನ್ ನೇಗಿ (10 ಕ್ಕೆ 3) ಅವರ ಆಕರ್ಷಕ ಬೌಲಿಂಗ್ ದಾಳಿಯ ನೆರವಿನಿಂದ ಆರ್​ಸಿಬಿ ತಂಡ ಡೆಲ್ಲಿ ಡೇರ್​ಡೆವಿಲ್ಸ್ ವಿರುದ್ಧ 10 ರನ್​ಗಳಿಂದ ಜಯ ಗಳಿಸಿತು.

162 ರನ್ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಡೇರ್​ಡೆವಿಲ್ಸ್ ತಂಡ 20 ಓವರ್​ಗಳಲ್ಲಿ 151 ರನ್​ಗಳಿಗೆ ಆಲೌಟಾಗುವ ಮೂಲಕ 10 ರನ್​ಗಳಿಂದ ಸೋಲನುಭವಿಸಿತು. ಡೆಲ್ಲಿ ಪರ ರಿಷಬ್ ಪಂತ್ (45), ಶ್ರೇಯಸ್ ಅಯ್ಯರ್ (32) ಮತ್ತು ಕರುಣ್ ನಾಯರ್ (26) ರನ್ ಗಳಿಸಿ ತಂಡಕ್ಕೆ ಗೆಲುವು ತಂದು ಕೊಡುವ ಪ್ರಯತ್ನ ನಡೆಸಿದರು. ಆದರೆ ಮಧ್ಯಮ ಕ್ರಮಾಂಕ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ ಡೆಲ್ಲಿ ಸೋಲನುಭವಿಸಿತು. ಅಯ್ಯರ್, ಪಂತ್ ಮತ್ತು ಸ್ಯಾಮ್ಯುಯಲ್ಸ್ ವಿಕೆಟ್​ಅನ್ನು ಹರ್ಷಲ್ ಪಟೇಲ್ ಪಡೆಯುವ ಮೂಲಕ ಡೆಲ್ಲಿ ತಂಡಕ್ಕೆ ಆಘಾತ ನೀಡಿದರೆ, ಪಂದ್ಯದಲ್ಲಿ ಕೊನೆ ಹಂತದಲ್ಲಿ ಶಮಿ, ನದೀಮ್ ಮತ್ತು ಮಿಶ್ರಾ ವಿಕೆಟ್ ನ್ನು ಪವನ್ ನೇಗಿ ಕಬಳಿಸುವ ಮೂಲಕ ಆರ್​ಸಿಬಿ ಗೆಲುವಿಗೆ ಕಾರಣರಾದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ತಂಡ ವಿರಾಟ್ ಕೊಹ್ಲಿ (58) ಮತ್ತು ಕ್ರಿಸ್ ಗೇಲ್ (48) ಅವರ ಆಕರ್ಷಕ ಆಟದ ನೆರವಿನಿಂದ 20 ಓವರ್​ಗಳಲ್ಲಿ 6 ವಿಕೆಟ್​ಗಳನ್ನು ಕಳೆದುಕೊಂಡು 161 ರನ್ ಗಳಿಸಿತು. ಸತತ ವೈಫಲ್ಯಗಳನ್ನು ಎದುರಿಸುತ್ತಿದ್ದ ನಾಯಕ ಕೊಹ್ಲಿ ಆಕರ್ಷಕ ಅರ್ಧ ಶತಕ ಸಿಡಿಸಿದರು. ಮತ್ತೊಂದು ತುದಿಯಲ್ಲಿ ಅನುಭವಿ ಆಟಗಾರ ಕ್ರಿಸ್ ಗೇಲ್ ಕೊಹ್ಲಿಗೆ ಉತ್ತಮ ಸಾಥ್ ನೀಡಿದರು. ಗೇಯ್್ಲ ಮತ್ತು ಕೊಹ್ಲಿ 2ನೇ ವಿಕೆಟ್​ಗೆ 66 ರನ್ ಜತೆಯಾಟವಾಡಿ ತಂಡಕ್ಕೆ ಆಸರೆಯಾದರು.

ಡೆಲ್ಲಿ ಪರ ಕಮ್ಮಿನ್ಸ್ 21 ಕ್ಕೆ 2, ನದೀಮ್ 12 ಕ್ಕೆ 1 ಮತ್ತು ಜಹೀರ್ ಖಾನ್ 31 ಕ್ಕೆ 1 ವಿಕೆಟ್ ಪಡೆದರು.

– ಏಜೆನ್ಸೀಸ್

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

Back To Top