Monday, 11th December 2017  

Vijayavani

1. ಜಮ್ಮುವಿನಲ್ಲಿ ಗುಂಡಿನ ಚಕಮಕಿ- ಯೋಧರ ಗುಂಡೇಟಿಗೆ ಮೂವರು ಉಗ್ರರು ಮಟಾಶ್​​​- ಒಬ್ಬ ಜೀವಂತವಾಗಿ ಸೆರೆ, ವಿಚಾರಣೆ 2. ರವಿ ಬೆಳಗೆರೆ ಕಸ್ಟಡಿ ಅವಧಿ ಇಂದಿಗೆ ಅಂತ್ಯ- ಮಧ್ಯಾಹ್ನ ನ್ಯಾಯಾಲಯಕ್ಕೆ ಪತ್ರಕರ್ತ ಹಾಜರು- ಜಾಮೀನು ಕೊಡ್ತಾರಾ ನ್ಯಾಯಾಧೀಶರು..? 3. ಮಕ್ಕಳ ಮೊಟ್ಟೆ ಗುತ್ತಿಗೆದಾರರ ಹೊಟ್ಟೆಗೆ- ಕೊಪ್ಪಳದಲ್ಲಿ ನಡೆದಿದೆ ಮೊಟ್ಟೆ ಗೋಲ್​​ಮಾಲ್​- ಡಿಸಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತಕ್ಕೆ ದೂರು 4. ಸರ್ಕಾರಿ ಜಾಗದ ಮೇಲೆ ಬಿಲ್ಡರ್​ ಕಣ್ಣು- ರಾತ್ರೋರಾತ್ರೊ ಮನೆ ಖಾಲಿಗೆ ಆವಾಜ್​​- ಹುಬ್ಬಳ್ಳಿಯಲ್ಲಿ ದಯಾಮರಣಕ್ಕೆ 12 ಕುಟುಂಬದಿಂದ ಅರ್ಜಿ 5. ಗುತ್ತಿಗೆದಾರರ ಬಳಿ ಸರ್ಕಾರಿ ಫೈಲ್​​​​​ ಪ್ರಕರಣ- ಸ್ಪಷ್ಟನೆ ಕೋರಿ ಎಇಇಗೆ ನೋಟಿಸ್​​​- ಇದು ದಿಗ್ವಿಜಯ ನ್ಯೂಸ್​​ ಬಿಗ್​​ ಇಂಪ್ಯಾಕ್ಟ್​​​​
Breaking News :

ಮಾಜಿ ಸಚಿವ ಹರತಾಳು ಹಾಲಪ್ಪಗೆ ಸಿಕ್ತು ಬಿಗ್​ ರಿಲೀಫ್​

Thursday, 17.08.2017, 5:12 PM       No Comments

ಶಿವಮೊಗ್ಗ: ಮಾಜಿ ಸಚಿವ ಹರತಾಳು ಹಾಲಪ್ಪ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಿವಮೊಗ್ಗ JMFC ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಮಾಜಿ ಸಚಿವ ಹರತಾಳು ಹಾಲಪ್ಪ ಯಾವುದೇ ತಪ್ಪು ಮಾಡಿಲ್ಲ ಎಂದು ಕೋರ್ಟ್ ಹೇಳಿದೆ.

ಬಿಜೆಪಿಯ ಮಾಜಿ ಸಚಿವ ಹಾಲಪ್ಪ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ಚಂದ್ರಾವತಿ ಈ ಹಿಂದೆ ದೂರು ದಾಖಲಿಸಿದ್ದರು. ಸಂತ್ರಸ್ತೆ ಚಂದ್ರಾವತಿ ಹರತಾಳ ಹಾಲಪ್ಪನವರ ಸ್ನೇಹಿತನ ಹೆಂಡತಿ.

ಹಾಲು ಕುಡಿದಷ್ಟೇ ಸಂತೋಷ:

ಚಂದ್ರಾವತಿ ನೀಡಿದ ದೂರಿನ ವಿಚಾರಣೆ ನಡೆಸಿದ ಶಿವಮೊಗ್ಗ JMFC ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ನ್ಯಾಯಾಧೀಶೆ ಬಿ.ಜೆ. ರಮಾ ಅವರು ಹಾಲಪ್ಪ ಅವರಿಗೆ ಕ್ಲೀಚ್ ನೀಡಿ, ಇದೀಗತಾನೆ ತೀರ್ಪು ಪ್ರಕಟಿಸಿದ್ದಾರೆ. ಶಂಕರಪ್ಪ ಎಂಬ ವಕೀಲರು ಹಾಲಪ್ಪ ಪರ ವಕಾಲತ್ತು ವಹಿಸಿದ್ದರು.

ತಮ್ಮ ನಾಯಕ ಹಾಲಪ್ಪಗೆ ಕ್ಲೀನ್​ ಚಿಟ್​ ಸಿಗುತ್ತಿದ್ದಂತೆ ಕೋರ್ಟ್​ ಆವರಣದಲ್ಲಿ ಹಾಲಪ್ಪ ಅಭಿಮಾನಿಗಳು ಸಂಭ್ರಮಿಸಿದರು.

ಹಾಲಪ್ಪ ಮೇಲೆ ಮೇ, 3. 2010 ರಲ್ಲಿ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ನೇಹಿತನ ಹೆಂಡತಿಯನ್ನು ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಹಾಲಪ್ಪ ಮೇಲಿತ್ತು.

ಅಂದಹಾಗೆ ಮಾಜಿ ಸಚಿವ ಹಾಲಪ್ಪ ಈ ಹಿಂದಿನ ಬಿಜೆಪಿ ಪಕ್ಷದ ಆಡಳಿತಾವಧಿಯಲ್ಲಿ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವರಾಗಿದ್ದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top