Tuesday, 20th February 2018  

Vijayavani

ಹ್ಯಾರಿಸ್ ಪುತ್ರ ಆಯ್ತು ಮತ್ತೊಬ್ಬ ಕೈ ಮುಖಂಡನ ದರ್ಪ- ಸರ್ಕಾರಿ ಕಚೇರಿಗೆ ನುಗ್ಗಿ ಅಧಿಕಾರಿಗೆ ಧಮ್ಕಿ- ಜಲಮಂಡಳಿ ಸದಸ್ಯ ನಾರಾಯಣಸ್ವಾಮಿ ಗೂಂಡಾಗಿರಿ        ನಾನು ಎರಚಿದ್ದು ಪೆಟ್ರೋಲ್ ಅಲ್ಲ, ನೀರು- ಕಿವಿಗೆ ಕಲರ್ ಕಲರ್ ಹೂವಿಟ್ಟ ನಾರಾಯಣಸ್ವಾಮಿ- ನಿಮ್ಮ ಏರಿಯಾದಲ್ಲಿ ನೀರಿಗೆ ಬಣ್ಣ ಇರುತ್ತಾ...?        ಸಿದ್ದರಾಮಯ್ಯ ಆಪ್ತನ ದರ್ಪ ಕಾಂಗ್ರೆಸ್‌ಗೆ ಕಾಣಿಸಲ್ವಾ- ಪರಮೇಶ್ವರ್‌ ಅವರೇ ಗೂಂಡಾನ ವಿರುದ್ಧ ಕ್ರಮ ಇಲ್ವಾ..?- ಕಾಂಗ್ರೆಸ್‌ ಸರ್ಕಾರದಲ್ಲಿ ಅಧಿಕಾರಿಗಳಿಷ್ಟು ಸೇಫ್..?        ದಕ್ಷಿಣ ಕರ್ನಾಟಕದಲ್ಲಿ ಅಮಿತ್ ಷಾ ದಂಡಯಾತ್ರೆ- ಕುಕ್ಕೆ ಸನ್ನಿಧಿಯಲ್ಲಿ ವಿಶೇಷ ಪೂಜೆ- ಜ್ವರದ ನಡುವೆಯೂ ಹತ್ತು ಹಲವು ಕಾರ್ಯಕ್ರಮದಲ್ಲಿ ಭಾಗಿ        ಮೇಯ್ತಿದ್ದ ಮದಗಜ ಕೆಣಕಿದ ಶ್ವಾನ- ನಾಯಿ ತುಂಟಾಟಕ್ಕೆ ತಿರುಗಿ ಬಿದ್ದ ಆನೆ- ಮಡಿಕೇರಿಯ ಕಾಫಿತೋಟದಲ್ಲಿ ಆನೆ, ನಾಯಿ ಕಾಳಗ       
Breaking News

ರಣಬೀರ್​ಗೆ 5 ಸಾವಿರ ಬಹುಮಾನ!

Monday, 19.06.2017, 3:02 AM       No Comments

ಮುಂದಿನ ಸಿನಿಮಾಕ್ಕೆ ಸೂಕ್ತ ಶೀರ್ಷಿಕೆ ಸೂಚಿಸಿದರೆ 5000 ರೂ. ಬಹುಮಾನ ನೀಡುವುದಾಗಿ ಘೊಷಿಸಿದ್ದ ಶಾರುಖ್ ಖಾನ್, ಕೊನೆಗೂ ಹೇಳಿದಂತೆ ನಡೆದುಕೊಂಡಿದ್ದಾರೆ. ಚಿತ್ರಕ್ಕೆ ‘ಜಬ್ ಹ್ಯಾರಿ ಮೆಟ್ ಸೆಜಲ್’ ಶೀರ್ಷಿಕೆ ನೀಡಿದ್ದಕ್ಕಾಗಿ ನಟ ರಣಬೀರ್ ಕಪೂರ್​ಗೆ ಆ ಬಹುಮಾನ ಸಿಕ್ಕಿದ್ದು, ಖುಷಿಯಿಂದಲೇ ಬಹುಮಾನದ ಹಣ 5 ಸಾವಿರ ರೂ. ಪಡೆದಿದ್ದಾರೆ. ಸಿನಿಮಾಗಾಗಿ ಒಂದೊಳ್ಳೆಯ ಟೈಟಲ್ ಫಿಕ್ಸ್ ಮಾಡುವಂತೆ ಸ್ವತಃ ಶಾರುಖ್ ಕೋರಿದ್ದರು. ಟೈಟಲ್ ಇಷ್ಟವಾದರೆ ನಗದು ರೂಪದಲ್ಲಿ ಬಹುಮಾನ ನೀಡಲಾಗುವುದು ಎಂದು ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು. ಅದರಂತೆ ಆಲಿಯಾ ಭಟ್, ರಣಬೀರ್ ಸೇರಿ ಹಲವರು ಶೀರ್ಷಿಕೆ ನೀಡಿದ್ದರು. ಇದರಲ್ಲಿ ರಣಬೀರ್ ನೀಡಿದ್ದ ಶೀರ್ಷಿಕೆ ಪಕ್ಕಾ ಆಗಿದೆ. ‘ಜಬ್ ಹ್ಯಾರಿ..’ ನಿರ್ದೇಶಕ ಇಮ್ತಿಯಾಜ್ ಅಲಿ ಜನ್ಮದಿನದಂದು ರಣಬೀರ್​ಗೆ 5 ಸಾವಿರ ರೂ. ನೀಡಿರುವ ಫೋಟೋವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಶಾರುಖ್, ‘ಹಿಸಾಬ್ ಬರಾಬರ್’ ಎಂದು ಬರೆದುಕೊಂಡಿದ್ದಾರೆ. ಇನ್ನೊಂದೆಡೆ ತನ್ನ ಶೀರ್ಷಿಕೆ ಆಯ್ಕೆ ಮಾಡಿಕೊಂಡಿಲ್ಲ ಎಂಬ ಕಾರಣಕ್ಕೆ ಆಲಿಯಾ ಮುನಿಸಿಕೊಂಡಿದ್ದಾರೆ! ಇದಕ್ಕೂ ಉತ್ತರ ನೀಡಿದ ಶಾರುಖ್, ಮುಂದಿನ ಸಿನಿಮಾಕ್ಕೆ ಆಲಿಯಾ ನೀಡಿದ್ದ ಶೀರ್ಷಿಕೆ ಇಡಲಾಗುವುದೆಂದು ಭರವಸೆ ನೀಡಿದ್ದಾರೆ.

ಇನ್ನು, ಅನುರಾಗ್ ಬಸು ನಿರ್ದೇಶನದ ‘ಜಗ್ಗ ಜಾಸೂಸ್’ ಸಿನಿಮಾದಲ್ಲಿ ಶಾರುಖ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರಂತೆ. ಜುಲೈ 14ರಂದು ಸಿನಿಮಾ ತೆರೆಕಾಣಲಿದ್ದು, ಯಾವ ಪಾತ್ರಕ್ಕೆ ಶಾರುಖ್ ಬಣ್ಣ ಹಚ್ಚಿದ್ದಾರೆ ಎಂಬ ಸುಳಿವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಈಗಾಗಲೇ ಸಲ್ಮಾನ್ ಖಾನ್ ನಟನೆಯ ‘ಟ್ಯೂಬ್​ಲೈಟ್’ನಲ್ಲೂ ಗೆಸ್ಟ್ ರೋಲ್ ಮಾಡಿದ್ದಾರೆ.

ಸೆಜಲ್​ಗಾಗಿ ಹುಡುಕಾಟ ನಡೆಸಿದ ಶಾರುಖ್: ಸೆಜಲ್ ಹೆಸರಿದ್ದವರಿಗೆ ಇದೀಗ ಅದೃಷ್ಟದ ಬಾಗಿಲು ತೆರೆದಂತಾಗಿದೆ. ಏಕೆಂದರೆ ಖುದ್ದು ಶಾರುಖ್, ಸೆಜಲ್ ಹೆಸರಿನವರನ್ನು ಭೇಟಿಯಾಗಲುನಿರ್ಧರಿಸಿದ್ದಾರೆ. ‘ನನ್ನ ಸೆಜಲ್ ಎಷ್ಟು ಜನ ಇದ್ದೀರಿ,ಹೃದಯ ತೆಗೆದುಕೊಂಡು ಹೋಗಲು ನಾನುಬರುತ್ತಿದ್ದೇನೆ..’ ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

-ಏಜೆನ್ಸೀಸ್

 

Leave a Reply

Your email address will not be published. Required fields are marked *

Back To Top