Sunday, 24th June 2018  

Vijayavani

ಕಾವೇರಿ ನೀರು ಪ್ರಾಧಿಕಾರ ಸಮಿತಿ ರಚನೆ - ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಸರ್ಕಾರದಿಂದ ಪುಸ್ತಕ        ಮಾಜಿ ಸಿಎಂ ಸಿದ್ದುಗೆ ಎಚ್​ಡಿಕೆ ಬಂಪರ್ ಆಫರ್​ - ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ?        ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಆರೋಪ - ಆತ್ಮಹತ್ಯೆ ಯತ್ನ - ಇದೆಲ್ಲಾ ಷಡ್ಯಂತ್ರ ಅಂದ್ರು ಮುನಿಯಪ್ಪ        ಕಲ್ಲಿನ ಹಾರ ಬೇಕಾದ್ರೆ ಕೊರಳಿಗೆ ಹಾಕಿ - ಸುಗಂಧರಾಜದ ಹೂವಿನ ಹಾರ ಬೇಡ್ವೇಬೇಡ - ಸಚಿವ ಡಿಕೆಶಿ ಆಕ್ಷೇಪ        ವಿದ್ಯುತ್ ಉಳಿಸಲು ಕೇಂದ್ರದ ಮೆಗಾ ಪ್ಲಾನ್ - ಇನ್ಮುಂದೆ 24 ಡಿಗ್ರಿಗೆ ಎಸಿ ಡಿಫಾಲ್ಟ್​ ಸೆಟ್ಟಿಂಗ್       
Breaking News

ರೈ ರಯ್ಯಾ ಅಂದ ಮುಖ್ಯಮಂತ್ರಿ ಸಿದ್ದುಗೆ ಜನ ಗುದ್ದು

Wednesday, 26.07.2017, 12:32 PM       No Comments

ಬೆಂಗಳೂರು: ಕಣ್ಣಂಚಿನಲ್ಲೇ ವಿಧಾನಸಭೆ ಚುನಾವಣೆ ಇರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೈ ಸ್ಪೀಡ್​ನಲ್ಲಿದ್ದಾರೆ. ಸಿಎಂ ಸಿದ್ದು – ರೈ ರಯ್ಯಾ – ಎಂದು ಕಾಂಗ್ರೆಸ್ ಮತಗಳನ್ನು ಭದ್ರಗೊಳಿಸಲು ಶೆರವೇಗದಲ್ಲಿದ್ದಾರೆ. ಆದರೆ ಜನ ಮಾತ್ರ ಸಿದ್ದುಗೆ ಸಖತ್ ಗುದ್ದು ಕೊಟ್ಟಿದ್ದಾರೆ.

ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ – ಅರಣ್ಯ ಸಚಿವ ರಮಾನಾಥ ರೈಗೆ ಗೃಹ ಖಾತೆ ನೀಡಲಾಗುತ್ತಿದೆ – ಎಂಬ ಸುದ್ದಿಯನ್ನು ಮುಖ್ಯಮಂತ್ರಿ ಕಚೇರಿಯಿಂದಲೇ ತೇಲಿಬಿಟ್ಟ ನಂತರ ಜನ ನಿದ್ದೆ ಮರೆತಿದ್ದಾರೆ. ಬಾಯ್ಬಿಟ್ಟರೆ ಪ್ರಚೋದನೆಯ ಮಾತು – ಕರ್ತವ್ಯ ನಿರತ ಅಧಿಕಾರಿಗಳಿಗೆ ಅವಾಜ್​ ಹಾಕುವುದನ್ನೇ ಕಸುಬಾಗಿಸಿಕೊಂಡಿರುವ ಸನ್ಮಾನ್ಯ ರಮಾನಾಥ ರೈಗೆ ಗೃಹ ಖಾತೆ ಬೇಕಾ ಅಂತಿದ್ದಾರೆ ಜನ.

ಜನರದ್ದು ಅರಣ್ಯ ರೋದನವಾ? ಅಥವಾ ಸಿದ್ದು ಹಿಟ್​ ವಿಕೆಟ್ಟಾ?

ಸಾಮಾಜಿಕ ಜಾಲತಾಣಗಳಲ್ಲಂತೂ ವ್ಯಾಪಕ ಟೀಕೆಗಳ ಸುರಿಮಳೆಯಾಗಿದೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದದೆ ಹೋಗಿ … ರಮಾನಾಥ ರೈಗೆ ಗೃಹ ಖಾತೆ ಕೊಡುವುದೇ ಒಳಿತು. ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ಸಿದ್ದು ನಡೆ ಬಗ್ಗೆ ಕೆಂಡ ಕಾರಿದ್ದಾರೆ. ಇದು ಸಿದ್ದು ಸರಕಾರದ ವಿನಾಶಕ್ಕೆ ಸ್ವತಃ ಅವರೇ ಹೊಡೆಯುವ ಅಂತಿಮ ಮೊಳೆಯಾಗಲಿದೆ. ಜನ ಮುಂದಿನ ಚುನಾವಣೆಯಲ್ಲಿ ಹಾಲಿ ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರದ ಗೃಹ ಖಾತೆಯನ್ನ ಅರಣ್ಯ ಸಚಿವ ರಮಾನಾಥ ರೈಗೆ ವಹಿಸುವ ವಿಚಾರದ ಬಗ್ಗೆ ಖುದ್ದು ರಮಾನಾಥ ರೈ ಅವರು ದಿಗ್ವಿಜಯ ನ್ಯೂಸ್‌ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ಸಿಎಂ ನನ್ನ ಜತೆ ವಿಶ್ವಾಸದಿಂದ ಮಾತನಾಡಿದ್ದಾರೆ. ಸಿಎಂ, ಹೈಕಮಾಂಡ್ ನೀಡಿದ ಜವಾಬ್ದಾರಿ ನಿರ್ವಹಿಸ್ತೇನೆ. ಗೃಹ ಖಾತೆಯನ್ನ ಸಮರ್ಥವಾಗಿ ನಿಭಾಯಿಸ್ತೇನೆ. ವಿಪಕ್ಷದವರು ಮೆಚ್ಚುವಂತೆ ಗೃಹ ಖಾತೆ ನಿಭಾಯಿಸುತ್ತೇನೆ ಅಂತಾ ಹೇಳಿದ್ರು. ಜತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಗಲಭೆಗಳನ್ನ ಯಾರು ಮಾಡಿಸ್ತಿದ್ದಾರೆ ಅಂತಾ ಗೊತ್ತಿದೆ ಅಂದಿದ್ದಾರೆ.

ಇನ್ನು ಜನ ಕೇಳುತ್ತಿರುವ ಪ್ರಶ್ನೆಗಳು ಹೀಗಿವೆ. …

# ಸಚಿವ ರಮಾನಾಥ ರೈಗೆ ಗೃಹ ಖಾತೆ ಕೊಡೋದು ಎಷ್ಟರಮಟ್ಟಿಗೆ ಸರಿ..?

# ರೈಗೆ ಗೃಹ ಸಚಿವ ಸ್ಥಾನ ಬೇಕಾ ಅನ್ನೋದು ದಕ್ಷಿಣಕನ್ನಡ ಜಿಲ್ಲೆಯ ಜನರ ಪ್ರಶ್ನೆ

# ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚೋದನೆ ಮಾಡೋ ಸಚಿವರಿಗೆ ಗೃಹ ಖಾತೆ ಯಾಕೆ..?

# ಹಿಂದೆ ಎಸ್ಪಿಯಾಗಿದ್ದ ಭೂಷಣ್​ ಜಿ. ಬೊರಸೆಗೆ ಆದೇಶ ಮಾಡಿದ್ದ ಸಚಿವರು ಆರ್​ಎಸ್​ಎಸ್​ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್‌​ರನ್ನ ಬಂಧಿಸುವಂತೆ ಹೇಳಿದ್ದ ಸಚಿವರು ಕೋಮು ಭಾವನೆ ಕೆರಳಿಸುವಂತಹ ಸಚಿವರಿಗೆ ಗೃಹ ಖಾತೆ ಕೊಡೋದು ಸರಿನಾ..?

# ಗೃಹ ಖಾತೆಯನ್ನ ರಮಾನಾಥ ರೈ ಎಷ್ಟರಮಟ್ಟಿಗೆ ನಿಭಾಯಿಸಬಲ್ಲರು..?

# ಒಂದು ವೇಳೆ ಗೃಹ ಖಾತೆ ರೈಗೆ ಸಿಕ್ಕರೆ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಿತಿ ಏನಾಗಬಹುದು..? (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top