Wednesday, 21st March 2018  

Vijayavani

ಮುಂದಿನ ಚುನಾವಣೆಯಲ್ಲಿ ಮೋದಿ ಸೋಲ್ತಾರೆ- ಇಂದಿರಾಗಾಂಧಿಯಂತೆ ನಮ್ಮನ್ನೂ ಗೆಲ್ಲಿಸಿ- ಚಿಕ್ಕಮಗಳೂರಿನಲ್ಲಿ ರಾಹುಲ್‌ ಟಾಕ್‌ವಾರ್‌        ಕುಡಿದು ಅಡ್ಡಾದಿಡ್ಡಿ ಬಸ್‌ ಚಲಾಯಿಸಿದ- ಕಾರು, ಬೈಕ್‌ ಮರಕ್ಕೆ ಡಿಕ್ಕಿ ಹೊಡೆಸಿದ- ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ ಅವಾಂತರ        ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ ವಿಚಾರ- ಹೈಕೋರ್ಟ್​ಗೆ ಅಭಿಪ್ರಾಯ ತಿಳಿಸಿದ ಸ್ಪೀಕರ್​- ಮುಚ್ಚಿದ ಲಕೋಟೆಯಲ್ಲಿ ಎಜಿ ಮೂಲಕ ರವಾನೆ        5 ಕೋಟಿ ಫೇಸ್​ಬುಕ್‌ಗಳ ಮಾಹಿತಿ ಹ್ಯಾಕ್- ಕಾಂಗ್ರೆಸ್‌ ವಿರುದ್ಧ ಬಿಜೆಪಿ ಗಂಭೀರ ಆರೋಪ- ರವಿಶಂಕರ್‌ ಆರೋಪಕ್ಕೆ ಕೈತಿರುಗೇಟು        ಬೈಕ್ ಸವಾರನ ಮೇಲೆ ಬಿದ್ದ ಬೃಹತ್ ಮರ- ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರು- ಹೆಲ್ಮೆಟ್​ ಪುಡಿಪುಡಿ ತಲೆ ಸೇಫ್​       
Breaking News

ಪಿಎಫ್​ಐ, ಎಸ್​ಡಿಪಿಐ ನಿಷೇಧ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ರಾಮಲಿಂಗಾರೆಡ್ಡಿ

Friday, 05.01.2018, 4:02 PM       No Comments

ಬಾಗಲಕೋಟೆ: ರಾಜ್ಯದಲ್ಲಿ ಪಿಎಫ್​ಐ, ಎಸ್​ಡಿಪಿಐ, ಹಿಂಜಾವೇ ಸಂಘಟನೆ ನಿಷೇಧ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯ ಗದ್ದನಕೇರಿ ಕ್ರಾಸ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಿಎಫ್​ಐ ಸಂಘಟನೆ ನಿಷೇಧಕ್ಕೆ ಒತ್ತಾಯಿಸುವ ಬಿಜೆಪಿ ಬಟ್ಕಳ ತಾಲೂಕಿನ ಸಜ್ಜಪಾಡು ಗ್ರಾಮ ಪಂಚಾಯಿತಿಯಲ್ಲಿ ಪಿಎಫ್​ಐ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಪಿಎಫ್​ಐ ತಾಲೀಬಾನ್​ ಆದರೆ, ಆ ತಾಲೀಬಾನ್ ಜೊತೆ ಬಿಜೆಪಿ ಅವರು ಸೇರಿದ್ದಾರೆ. ಇನ್ನು ಪಿಎಫ್ಐ ಎಸ್​ಡಿಪಿಐ ಸಂಘಟನೆಯನ್ನು ನಿಷೇಧಿಸುವುದರ ಬಗ್ಗೆ ಸಿಎಂ ಪ್ರವಾಸದಿಂದ ಬಂದ ನಂತರ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕರಾವಳಿಯಲ್ಲಿ ನಡೆದಿರುವ ಕೊಲೆಗಳಲ್ಲಿ ಸುಮಾರು 10 ರಿಂದ 11 ಮಂದಿ ಹಿಂದುಪರ ಸಂಘಟನೆಯ ಕಾರ್ಯಕರ್ತರದ್ದಾಗಿದ್ದರೆ, ಆರು ಮಂದಿ ಪಿಎಫ್​ಐನ ಕಾರ್ಯಕರ್ತರ ಕೊಲೆಯಾಗಿದೆ ಎಂದರು.

ಚುನಾವಣಾ ದೃಷ್ಟಿಯಿಂದ ಇದೆಲ್ಲ ಗಲಾಟೆಗಳು ನಡೆದಿವೆ. ಅಲ್ಲಿನ ಜನರಿಗೆ ಇದೆಲ್ಲ ಬೇಕಿಲ್ಲ. ರಾಜಕಾರಣ ಮತ್ತು ಸಂಘಟನೆಗಳು ಮೌನವಾಗಿದ್ದರೆ ಕರಾವಳಿ ಶಾಂತವಾಗಿಯೇ ಇರುತ್ತದೆ. ರಾಜಕೀಯ ಬೇಳೆ ಬೇಯಿಸಲು ಇದೆಲ್ಲಾ ನಡೆದಿದೆ ಎಂದು ದೂರಿದ್ದಾರೆ.

Leave a Reply

Your email address will not be published. Required fields are marked *

Back To Top