Monday, 11th December 2017  

Vijayavani

5. ಪ್ರಧಾನಿ ಮೋದಿ ರ‍್ಯಾಲಿಗೆ ಅವಕಾಶವಿಲ್ಲ – ಮೆಗಾ ರೋಡ್​ ಶೋಗೆ ಅನುಮತಿ ನಿರಾಕರಣೆ – ರಾಹುಲ್ ಸಮಾವೇಶಕ್ಕೂ ಗುಜರಾತ್ ಪೊಲೀಸರ ತಡೆ 1. ಕೆಲವೇ ಕ್ಷಣಗಳಲ್ಲಿ ರವಿಗೆ ಮತ್ತೆ ವೈದ್ಯಕೀಯ ಪರೀಕ್ಷೆ- ಮಧ್ಯಾಹ್ನ 12ಕ್ಕೆ ಕೋರ್ಟ್​ಗೆ ಹಾಜರು ಸಾಧ್ಯತೆ- ರವಿ ಮೇಲೆ ಮತ್ತೊಂದು ಕೇಸ್​​​ ಸಾಧ್ಯತೆ 2. ಮತ್ತೊಬ್ಬ ಸುಪಾರಿ ಆರೋಪಿಗಾಗಿ ಎಸ್‌ಐಟಿ, ಸಿಸಿಬಿ ಶೋಧ- ವಿಜಯಪುರದ ಸಿಂದಗಿಯಲ್ಲಿ ಬೀಡುಬಿಟ್ಟ ಅಧಿಕಾರಿಗಳು- ಮನೆಯಿಂದ ವಿಜು ಪರಾರಿ ಶಂಕೆ 3. ಅನೈತಿಕ ಚಟುವಟಿಕೆ ತಾಣವಾದ ಜಿಲ್ಲಾಸ್ಪತ್ರೆ- ಚಿಕ್ಕಬಳ್ಳಾಪುರದ ಆಸ್ಪತ್ರೆ ಈಗ ಪ್ರೇಮಿಗಳ ಹಾಟ್​ಸ್ಪಾಟ್​​- ಕ್ರಮಕ್ಕೆ ಮುಂದಾಗ್ತಾರಾ ಅಧಿಕಾರಿಗಳು 4. ಟೀ ಕಚೇರಿಯಲ್ಲೇ ಫೈಲ್​​ಗಳಿಗೆ ಸೈನ್​- ಸಚಿವರ ಕೃಪಾಕಟಾಕ್ಷಕ್ಕಾಗಿ ಹೆಚ್ಚುವರಿ ಡ್ಯೂಟಿ- ಡೀಲ್​​ಗೆ ಇಳಿದಿದ್ದಾರಾ ಶಿರಾ ತಹಸೀಲ್ದಾರ್​​​..?
Breaking News :

18ರ ವಿದ್ಯಾರ್ಥಿನಿ ಮೇಲೆ ನಿರಂತರ ರೇಪ್: ಆರೋಪಿಗಳು ಸಿಕ್ಕಿದ್ದು ಹೇಗೆ?

Tuesday, 19.09.2017, 12:42 PM       No Comments

ಜೈಪುರ: ಶಾಲಾ ನಿರ್ದೇಶಕನೊಬ್ಬ ಶಿಕ್ಷಕನೊಂದಿಗೆ ಸೇರಿ 18 ವರ್ಷದ ವಿದ್ಯಾರ್ಥಿನಿಯ ಮೇಲೆ ಕಳೆದೆರಡು ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ರಾಜಸ್ಥಾನದ ಸಿಕರ್​ ಎಂಬಲ್ಲಿ ನಡೆದಿದೆ.

ಅತ್ಯಾಚಾರಕ್ಕೆ ಒಳಗಾಗಿರುವ ಹುಡುಗಿ 12ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಆಕೆಯ ಮೇಲೆ ಶಾಲಾ ನಿರ್ದೇಶಕ ಜಗದೀಶ್​ ಯಾದವ್​ ಹಾಗೂ ಶಿಕ್ಷಕ ಜಗತ್​ ಸಿಂಗ್​ ಗುಜರ್​​ ಎಂಬ ಕಾಮ ಪಿಶಾಚಿಗಳು ಎರಡು ತಿಂಗಳ ಕಾಲ ನಿರಂತರ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ ಯಾರಿಗೂ ವಿಷಯ ಬಹಿರಂಗಪಡಿಸದಂತೆ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದಾರೆ

ವಿದ್ಯಾರ್ಥಿನಿಗೆ ಉಚಿತ ಕ್ಲಾಸ್​ ತೆಗೆದುಕೊಳ್ಳುತ್ತೇನೆಂದು ಹೇಳಿ ಶಾಲೆ ಬಿಟ್ಟ ನಂತರವೂ ಆಕೆಯನ್ನು ಉಳಿಸಿಕೊಂಡು ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ. ಅಷ್ಟೇ ಅಲ್ಲ ವಿದ್ಯಾರ್ಥಿನಿ ಗರ್ಭಿಣಿಯಾಗುತ್ತಿದ್ದಂತೆ ಆಕೆಗೆ ಗರ್ಭಪಾತವನ್ನೂ ಮಾಡಿಸಿದ್ದಾರೆ.

ಕಳೆದ ಆಗಸ್ಟ್​ 25 ರಂದು ನೋವಿನಿಂದ ಒದ್ದಾಡುತ್ತಿದ್ದ ಹುಡುಗಿಯನ್ನು ಆಕೆಯ ತಾಯಿ ವೈದ್ಯಕೀಯ ತಪಾಸಣೆಗೆಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆ ವೇಳೆ ಶಾಲಾ ನಿರ್ದೇಶಕ ಆಸ್ಪತ್ರೆಗೆ ಬಂದು ತನ್ನ ಸ್ನೇಹಿತನ ಆಸ್ಪತ್ರೆಗೆ ದಾಖಲಿಸುವಂತೆ ಹುಡುಗಿಯ ತಾಯಿಯನ್ನು ಮನವೊಲಿಸಿದ್ದಾನೆ.

ನಂತರ ಸ್ನೇಹಿತನ ಆಸ್ಪತ್ರೆಗೆ ದಾಖಲಿಸಿ ಆಕೆಗೆ ಗರ್ಭಪಾತ ಮಾಡಲಾಗಿದೆ. ಗರ್ಭಪಾತವಾದ ನಂತರ ಹುಡುಗಿಯ ಸ್ಥಿತಿ ಗಂಭೀರವಾಗಿ, ಬೇರೊಂದು ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದಾಗ ಆಕೆಯ ಮೇಲೆ ಅತ್ಯಾಚಾರ ನಡೆಸಿ ಗರ್ಭಪಾತ ಮಾಡಿರುವುದು ಬೆಳಕಿಗೆ ಬಂದಿದೆ.

ಇದರಿಂದ ಅನುಮಾನಗೊಂಡ ಪೋಷಕರು ಶಾಲಾ ನಿರ್ದೇಶಕನ ಮೇಲೆ ದೂರು ದಾಖಲಿಸಿದ್ದಾರೆ. ಪ್ರಕರಣದ ಜಾಡು ಹಿಡಿದ ಪೊಲೀಸರು ಪ್ರಕರಣದ ಹಿಂದಿನ ಅಸಲಿಯತ್ತು ಬಯಲು ಮಾಡಿ ಆರೋಪಿಗಳಿಬ್ಬರನ್ನು ಜೈಲಿಗೆ ಅಟ್ಟಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top