Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಎಂದೋ ಆಗಬೇಕಿದ್ದ ರಾಜಕಾರಣ ತಿರುವು

Tuesday, 11.07.2017, 3:00 AM       No Comments

ವೈಯಕ್ತಿಕ ಜೀವನದಲ್ಲಿನಂತೆ ರಾಜಕಾರಣದಲ್ಲಿಯೂ ಹಿತಕರ ತಿರುವುಗಳು ಪದೇಪದೆ ಬರುವುದಿಲ್ಲ. ಪೃಥ್ವೀರಾಜನು ಮೊದಲನೆಯ ಯುದ್ಧದಲ್ಲೇ ಮಹ್ಮದ್ ಘೊರಿಗೆ ಜೀವದಾನ ಮಾಡದೆ ಕೊಂದುಹಾಕಿದ್ದರೆ ನಮ್ಮ ಚರಿತ್ರೆಯೇ ಬೇರೆಯಿರುತ್ತಿತ್ತು. ಮಾರೀಚನನ್ನು ಶ್ರೀರಾಮ ವಿಶ್ವಾಮಿತ್ರರ ಸಿದ್ಧಾಶ್ರಮದಲ್ಲೇ ಮುಗಿಸಿದ್ದರೆ ರಾಮಾಯಣ ಕಥೆಯೇ ಬೇರೆಯಿರುತ್ತಿತ್ತು. ತಾಟಕೆಯನ್ನು ಕೊಂದವನು ಶೂರ್ಪಣಖೆಯನ್ನೂ ಸಾಯಿಸಿದ್ದರೆ ಚರಿತ್ರೆ ಬೇರೆ ರೀತಿ ಇರುತ್ತಿತ್ತು ಎಂದು ವೀರ ಸಾವರ್ಕರ್ ಬರೆದಿದ್ದಾರೆ. ಸ್ವಾತಂತ್ರ್ಯ ಬರುತ್ತಿದ್ದ ಸಂದರ್ಭದಲ್ಲಿ ಎಡ್ವಿನಾ ಮೌಂಟ್ ಬ್ಯಾಟನ್ನಳನ್ನು ನೆಹ್ರೂ ಬಳಿ ಬಾರದಂತೆ ಯಾರಾದರೂ ತಂತ್ರ ಮಾಡಿದ್ದರೆ? ನೆಹ್ರೂ, ಗಾಂಧಿ ಕುತಂತ್ರಕ್ಕೆ ಪಟೇಲರು ಹಿಂಜರಿಯದೆ ‘ನನ್ನನ್ನು ಆರಿಸಿದ್ದಾರೆ, ನಾನು ಕೆಳಗಿಳಿಯುವುದಿಲ್ಲ’ ಎಂದು ಹೇಳಿ ಪ್ರಧಾನಿ ಪಟ್ಟದಲ್ಲಿ ಉಳಿದಿದ್ದರೆ ನಮ್ಮ ಭಾಗ್ಯವೇ ಬೇರೆ ಇರುತ್ತಿತ್ತು. ಹಾಗಾಗಲಿಲ್ಲ. ಕಾಶ್ಮೀರ ಸಮಸ್ಯೆ, ಕಮ್ಯೂನಲ್ ಪಾಲಿಟಿಕ್ಸ್, ವೋಟ್ ಬ್ಯಾಂಕ್ ರಾಜಕೀಯ, ಕುಟುಂಬ ರಾಜಕಾರಣ, ವಿದೇಶಿ ನೀತಿಯಲ್ಲಿ ದಡ್ಡತನ, ಸುತ್ತ ಶತ್ರುವ್ಯೂಹ ನಿರ್ವಣ, ಅಸಂಭಾವಿತ ‘ಪಂಚಶೀಲ’, “non-alignment’,  ಅಮೆರಿಕ, ರಷ್ಯಾಗಳಿಗೆ ನಿಃಶಸ್ತ್ರೀಕರಣದ ಉಪದೇಶ ಮುಂತಾದ ಎಲ್ಲ ನಮ್ಮ ಸಮಸ್ಯೆಗಳಿಗೂ ನೆಹ್ರೂ ನೀತಿಗಳೇ ಕಾರಣವೆಂದು; ಈಗಲಾದರೂ ಒಂದು ಆಶಾದಾಯಕ ತಿರುವು ಬಂದಿದೆಯೆಂದು ಸಂತೋಷಪಟ್ಟು ಮೋದಿಯನ್ನು ಶ್ಲಾಘಿಸುವ ಬದಲು ಅಸಹನೆಯಿಂದ ಬಾಯಿ ಬಡಿದುಕೊಳ್ಳುತ್ತಿರುವುದನ್ನು ನೋಡಿದರೆ ನಮ್ಮ ಒಳಶತ್ರುಗಳ ಶಕ್ತಿ ಎಷ್ಟಿರಬಹುದೆಂಬ ಅಂದಾಜು ದೊರೆತೀತು. ಕಾಂಗ್ರೆಸ್ಸು, ಕಮ್ಯುನಿಷ್ಟರು, ಹೈದ್ರಾಬಾದಿನ ‘ಒವೈಸಿ’ ಭ್ರಾತೃಗಳು, ಅಜಂ ಖಾನ್, ಕಾಶ್ಮೀರದ ಪ್ರತ್ಯೇಕತಾವಾದಿಗಳು, ಎಡಬಿಡಂಗಿ, ಢೋಂಗೀ ಪಕ್ಷಗಳ ಮುಖಂಡರು, ಮಮತಾ ಮುಂತಾದವರು ಎದೆ ಬಡಿದುಕೊಳ್ಳುತ್ತಿದ್ದಾರೆ.

ಮುಳುಗಿಹೋದ ಅವರ ‘ಗಂಟು’ ಏನೆಂದು ಎಲ್ಲರಿಗೂ ಈಗ ತಿಳಿಯಬೇಕಿದೆ. ಇಷ್ಟರ ನಡುವೆ ಇಸ್ರೇಲ್ ಬಗ್ಗೆ ಮೋದಿಯವರು ಇಟ್ಟ ದಿಟ್ಟ ಹೆಜ್ಜೆ ಬಗ್ಗೆ ಅನೇಕ ರಾಷ್ಟ್ರಾಭಿಮಾನಿಗಳು ಪತ್ರಿಕೆಗಳಲ್ಲಿ ಬರೆಯುತ್ತಿದ್ದಾರೆ. ಟಿ.ವಿ.ಗಳಲ್ಲೂ ಧೈರ್ಯವಾಗಿ ಹೇಳಿ ಸಮರ್ಥಿಸುತ್ತಿದ್ದಾರೆ. ಅವರು ಬಿಟ್ಟ ಕೆಲವು ಐತಿಹಾಸಿಕ ಸಂಗತಿಗಳನ್ನು ಇಲ್ಲಿ ನಾವೂ ಪರಾಮಶಿಸೋಣ. ಯಹೂದ್ಯರಿಗೂ ಹಿಂದೂಗಳಿಗೂ ತುಂಬಾ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಸಮಾನಾಂಶಗಳು ಇವೆ. ಯಹೂದ್ಯರನ್ನೂ ಈಜಿಪ್ಟಿನ ದೊರೆಗಳು ಗುಲಾಮರನ್ನಾಗಿಸಿ ಆಳಿದ್ದರು. ಮೋಸಸ್ ಎಂಬ ಯಹೂದ್ಯ ನಾಯಕ ನಾವೆಲ್ಲರೂ Chosen race– ‘ದೇವರು ಆರಿಸಿದ ಜನಾಂಗ’ ಎಂದು ಧೈರ್ಯ ತುಂಬಿ “Promised land”‘ ‘ಭರವಸೆಯಿತ್ತ ನೆಲೆ’ಯತ್ತ ಸಾಮೂಹಿಕವಾಗಿ ಕೊಂಡೊಯ್ದಿದ್ದು”Exodus” ಎಂದು ಒಡಂಬಡಿಕೆಯ ಭಾಗದಲ್ಲಿ ದಾಖಲಾಗಿದೆ. ಆಮೇಲೂ ಯುರೋಪಿನಲ್ಲಿ ಯಹೂದ್ಯರನ್ನು ಕ್ರೖೆಸ್ತರು ನಿಕೃಷ್ಟವಾಗಿ ‘ಸೈತಾನನ ಶಿಷ್ಯ’ ರೆಂದು ಬೈದು ಹಿಂಸಿಸಿದ ಘಟನೆಗಳು, ಹಿಟ್ಲರನ ಕಾಲದವರೆಗೆ ನಡೆದಿದೆ. Christopher Marlow ಎಂಬ ಶೇಕ್ಸ್​ಪಿಯರ ಪೂರ್ವದ ಆಂಗ್ಲ ನಾಟಕಕಾರ The Jew of Malta ಎಂಬ ತನ್ನ ನಾಟಕದಲ್ಲಿ ವಿಡಂಬಿಸಿದ್ದೂ ಇದೆ. ಸ್ವತಃ ಶೇಕ್ಸ್​ಪಿಯರನೇ Merchant of Vanice ಎಂಬ ತನ್ನ ನಾಟಕದಲ್ಲಿ ಶೈಲಾಕ್ ಎಂಬ ಯಹೂದ್ಯ ಬಡ್ಡಿ ವ್ಯಾಪಾರಿಯನ್ನು ಹೀನಾಯವಾಗಿ ಚಿತ್ರಿಸಿಯೂ ಅಲ್ಲಲ್ಲಿ ಅವನಿಗೆ ಕನಿಕರಿಸಿದ್ದೂ ಇದೆ. ನನ್ನ ಮೇಷ್ಟರುಗಳು ಹಾಗೆ ಈ ಅಂಶಗಳನ್ನೂ ಎತ್ತಿ ತೋರಿಸದಿದ್ದರೂ, ನಾನೇ ಉಪಾಧ್ಯಾಯನಾದಾಗ ಈ ಕನಿಕರದ ಅಂಶವನ್ನು ಹೆಚ್ಚಾಗಿ ವ್ಯಾಖ್ಯಾನಿಸಿ ತೋರಿಸಿ ಈ ಬಗ್ಗೆ ನನ್ನ ಹೃದಯ ಮಿಡಿದಿದ್ದೇಕೆ ಎಂಬುದಕ್ಕೆ ಕಾರಣ ಹುಡುಕಲು ಆರಂಭಿಸಿದೆ. ಯಹೂದ್ಯರು ಐರೋಪ್ಯ ಸಮುದಾಯದಲ್ಲಿ ಶೋಷಿತ ವರ್ಗದವರು.

ಮೂಲದಲ್ಲಿ ಮಧ್ಯ ಏಷ್ಯಾದವರಾದರೂ ಚದುರಿ ಐರೋಪ್ಯ ಕ್ರೖೆಸ್ತರಿಂದ ಬಗೆ ಬಗೆಯಲ್ಲಿ ಹಿಂಸೆಗೊಳಗಾದವರು. ಆದರೆ ಪ್ರಚಂಡ ಬುದ್ಧಿವಂತರು, ಶ್ರಮಪೂರ್ವಕ ದುಡಿಮೆಯಿಂದ ಬದುಕನ್ನು ಸೃಷ್ಟಿಸಿಕೊಳ್ಳುವ ಮಹಾಸಾಮರ್ಥ್ಯಾಲಿಗಳು. One of the oldest races of the world. ಭಾರತದ ಹಿಂದೂಗಳೂ ಹಾಗೆಯೇ, ವಿನಾಕಾರಣ ಮುಸ್ಲಿಂ ಆಕ್ರಮಣಕಾರರಿಂದ ಸಾವಿರ ವರ್ಷ ಗುಲಾಮಗಿರಿ ಅನುಭವಿಸಿ ತಮ್ಮ ದೇಶದಲ್ಲೇ ಬದುಕಲು ‘ಜೆಝಿಯ’(Zezia) ತಲೆಗಂದಾಯ ಕೊಡಬೇಕಾಗಿ ಬಂದ ನತದೃಷ್ಟರು. ಐರೋಪ್ಯ ವಸಾಹತುಶಾಹೀ ಶಕ್ತಿಗಳ ದುರಾಕ್ರಮಣ ಕಾಲದಲ್ಲೂ ತಮ್ಮ ದೇಶದಲ್ಲೇ ತಾವೇ ಗುಲಾಮರಾದ ಹತಾಶ ಜನಾಂಗ. ಈಗಲೂ Hindu” ಎಂದೊಡನೆ Colonial- ವಸಾಹತುಶಾಹೀ -ಮನನೆಲೆಗಟ್ಟಿನ ಕಾಂಗ್ರೆಸ್ಸಿಗರು ಹಾರಾಡುವುದು ನಮ್ಮ ನಿಮ್ಮ ಅನುಭವದಲ್ಲೇ ಇದೆ. ಹಿಟ್ಲರನ ಮನಸ್ಥಿತಿ ಅಲ್ಲವೇ, ಈ ಪೀಡಕರದ್ದು? ಕಮ್ಯೂನಿಸ್ಟರು ಮುಸ್ಲಿಂ ಆಕ್ರಮಣಕಾರರ ಪರ ನಿಲುವು ತಾಳಿದ್ದು ಈಗಲೂ ಭಯೋತ್ಪಾದಕರ ಪರ ವಕಾಲತ್ತು ವಹಿಸಿ ಮಾತಾಡುವುದನ್ನೂ, ಕಾಶ್ಮೀರದಲ್ಲಿ ಭಯೋತ್ಪಾದಕರನ್ನೇ ಸಮರ್ಥಿಸಿ ಹಿಂಸಿತರ ಪರ ಮೌನ ವಹಿಸುವುದನ್ನು ಕಾಣುತ್ತಿದ್ದೀರಿ! ಹೇಳಿ- ಯಹೂದಿ= ಹಿಂದೂ ಸಾಮ್ಯಕ್ಕೆ ಅರ್ಥ, ಸಮರ್ಥನೆ ಇಲ್ಲವೇ? ಕೆಲವು ವರ್ಷಗಳ ಹಿಂದೆ ನನಗೆ ಎರಡು ಅಪೂರ್ವ ಗ್ರಂಥಗಳು ದೊರೆತವು. ಬರೆದವರು ಡಾ. ಲಕ್ಷ್ಮೀನಾರಾಯಣ ಎಂಬ ಹೆಸರಿನ ತುಳುನಾಡು ಮೂಲದ ಇತಿಹಾಸಜ್ಞರು. ಪ್ರಕಟಣೆ ಮುಂಬೈ ಭಾರತೀಯ ವಿದ್ಯಾಭವನದ್ದು. ಗ್ರಂಥದ ಹೆಸರು ‘ಭಾರತೀಯ ಇತಿಹಾಸದ ಮರೆತ ಅಧ್ಯಾಯಗಳು‘ ಎಂಬರ್ಥದ ಆಂಗ್ಲ ಶೀರ್ಷಿಕೆ. ಸರಿಯಾಗಿ ನೆನಪಿಲ್ಲ ನನ್ನ ಗ್ರಂಥ ಭಂಡಾರದಲ್ಲಿ ಇವು ಎಲ್ಲಿ ಸೇರಿವೆಯೋ. ನನ್ನ ಸಣ್ಣ ನಿವಾಸದಲ್ಲಿ ನಾನು ತಿಳಿದು ಹೇಳಲಾರದ ಸ್ಥಿತಿ.

ನೀವು ಭಾರತೀಯ ವಿದ್ಯಾಭವನ websiteನಲ್ಲಿ ಗ್ರಂಥಕರ್ತರ ಹೆಸರಲ್ಲಿ ಹುಡುಕಿ ಪತ್ತೆಮಾಡಿ ಪುಸ್ತಕ ತರಿಸಿ ಓದಿ. ಇಲ್ಲಿ ನೆನಪಿನ ಮೇಲೆ ನಿಮಗೆ ಅಚ್ಚರಿ ತರುವ ಅಂಶಗಳನ್ನು ಮಾತ್ರ ಇಲ್ಲಿ ಇಡುತ್ತೇನೆ. ಈ ಅಂಶಗಳನ್ನು ನನ್ನ ಒಂದು ಗೋಕರ್ಣ ಪ್ರವಾಸ ಕಾಲದಲ್ಲಿ ನನ್ನನ್ನು ನೋಡಲು ಬಂದಿದ್ದ ಒಂದು ಯಹೂದ್ಯ ತಂಡದವರೊಡನೆ ಹಂಚಿಕೊಂಡಾಗ ಒಬ್ಬ ಮಹಿಳೆ ಬಿಕ್ಕಿ ಬಿಕ್ಕಿ ಅತ್ತಳು. ಕಾಲು ಮುಟ್ಟಿ ನಮಸ್ಕರಿಸಿದಳು. ಹಾಗಿದೆ ಈ ಹಿಂದೂ-ಯಹೂದ್ಯ ಸಂಬಂಧ. (1) ಯಹೂದ್ಯರನ್ನು Judea- ಸಂಸ್ಕೃತಿಯವರು ಎಂದು ಕರೆಯುವುದು ರೂಡಿ, ಈ “Judo” ಶಬ್ದವು ‘ಯದು’, “Judu” ಶಬ್ದದ ಅಪಭ್ರಂಶ ರೂಪಾಂತರ.‘ಯ’=‘ಜ’ ಆಗುವುದನ್ನು ‘ಬ’=‘ವ’ ಆಗುವುದನ್ನು ಬಂಗಾಳಿಗಳಲ್ಲಿ ಈಗಲೂ ಕಾಣುತ್ತೀರಿ. ಉದಾ: ‘ಯದುನಾಥ್ ಸರ್ಕಾರ್’ ಎಂಬುದು “Jadunatha Sarkar” ಆಗುತ್ತದೆ. ಇವರು ಪ್ರಸಿದ್ಧ ಇತಿಹಾಸ ತಜ್ಞರು, ಬರೆಹಗಾರರು. ಯಯಾತಿ ಎಂಬ ಚಂದ್ರವಂಶದ ದೊರೆಯ ಮಕ್ಕಳಲ್ಲಿ ‘ಯದು‘ ಎಂಬವನು ಒಬ್ಬ. (ಪುರು, ದ್ರುಹ್ಯು, ಅನು… ಇತರರು) ಯಯಾತಿಯ ಶಾಪದಿಂದ ‘ದ್ರುಹ್ಯು’ಗಳು ದೇಶಬಿಟ್ಟು Druids ಆಗಿ ಮೆಡಿಟರೇನಿಯನ್ ತೀರದಲ್ಲಿ ನೆಲೆಸಿದರು. ‘ಅನು‘ ಮಕ್ಕಳು Ionians ಆಗಿ ಗ್ರೀಕರಾದರು. ಪುರು ಮಾತ್ರ ಇಲ್ಲೇ ನೆಲೆಸಿ ಕುರು ಪಾಂಡವ ವಂಶ ಬೆಳೆಯಿತು. (ನೋಡಿ, ್ಕRigvedic Aryans by Srikantha Talageri) ಯದುಗಳಲ್ಲಿ ಹಲವರು ಭಾರತೀಯರಲ್ಲೇ ಬೆರೆತು ಚದುರಿ ಇಲ್ಲೇ ನೆಲೆಸಿದರು.

ಚಾಳುಕ್ಯರು, ಕಾಕತೀಯರು, ಮೈಸೂರು ಅರಸರು ಎಲ್ಲ ಯಾದವರೇ. ಒಂದು ತಂಡ ಮಾತ್ರ ಭಾರತದ ವಾಯವ್ಯದತ್ತ ಚದುರಿತು. (2) ಹಿಂದೆ ರಾವಣನ ದಿಕ್ಪಲ್ಲಟಕ್ಕೆ ಬಲಿಯಾದ ಅಣ್ಣ ಕುಬೇರ ಮತ್ತು ಹಿಂಬಾಲಕರಾದ ಯಕ್ಷರು ‘ಕೌಬೇರಿ‘ ಜನಾಂಗ ಎನಿಸಿದರು. ಈಗ ಚದುರಿದ ಯದುಗಳೊಡನೆ ರಕ್ತದಲ್ಲಿ ಬೆರೆತರು. ‘ಕೌಬೇರಿ‘ಗಳು ಇದ್ದ ಕಣಿವೆಯೇ ಈಗ ಖೈಬರ್ ಕಣಿವೆಯಾಗಿದೆ. ಮಾತು ತಿರುಚುತ್ತದೆ. ಈಗಲೂ ಖಚಜಟ್ಟಛಿನ್ನು ಟೈಗೋರ್ ಎನ್ನುವ ಹಿಂದೀ ಭಾಷಿಕರಿಲ್ಲವೇ? ಹಾಗೆಯೇ. ಅಂದರೆ ಈ ಯಹೂದ್ಯರು ಸಹಸ್ರಮಾನಗಳಷ್ಟು ಹಿಂದಿನಿಂದ ನಮಗೆ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಸಂಬಂಧವುಳ್ಳವರು. ಬರೀ 2000 ವರ್ಷಗಳಷ್ಟು ಅಲ್ಲ. ಮತಾಂತರ ಹಾವಳಿ ಹೆಚ್ಚಾದಾಗ ಭಾರತದಲ್ಲಿ ಬಂದು ಯಹೂದಿಗಳು ನೆಲೆಸಿದ್ದು ಈಚೆಗೆ. (3) ಯಹೂದ್ಯರ ರಾಷ್ಟ್ರಧ್ವಜ ಚಿಹ್ನೆ ಗಮನಿಸಿದ್ದೀರಾ? ಅದರಲ್ಲಿರುವ ಎರಡು ತ್ರಿಭುಜಾಕೃತಿಗಳು ನಮ್ಮ ಸುದರ್ಶನ ಯಂತ್ರದ ಪರಿಪೂರ್ಣ ಚಿಹ್ನೆ. ಅಚ್ಚರಿಯೇ? ಇಸ್ರೇಲ್​ನಲ್ಲಿ ಶ್ರೀಕೃಷ್ಣನ ಹೆಸರನ್ನೂ ಹೋಲುವ “Kannan” ಎಂಬ ಪ್ರಾಂತ್ಯವೇ ಇದೆ! ಭೂಪಟ ತೆಗೆದು ನೋಡಿ. ಇಡೀ ಜಗತ್ತಿನಲ್ಲೇ ಇಸ್ರೇಲ್ ನಮಗೆ ಭದ್ರ, ವಿಶ್ವಸನೀಯ, ಶಾಶ್ವತ ಸ್ನೇಹಿತ ಹಾಗೂ ಒದಗುವ ರಾಷ್ಟ್ರವಾಯ್ತು. ಈ ಸಂಬಂಧವನ್ನು ನೆಹ್ರೂ ಎಂದೋ ಭದ್ರಪಡಿಸಿಕೊಳ್ಳಬೇಕಿತ್ತು. Glimpses of World History ಎಂಬ ಅಡ್ಡಾದಿಡ್ಡಿ ಪುಸ್ತಕ ಬರೆದವರು ಬಾಬರ್, ಅಕ್ಬರರನ್ನು ಹೊಗಳುವ ಜಾಡಿನಲ್ಲಿ ಇವರಿಗೆ ನಮ್ಮ Indian History ಯಾಕೆ ಬೇಕಿತ್ತು. ನಂಬಿ ಕೂಡದ ಕಮ್ಯೂನಿಸ್ಟರನ್ನೂ, ದೇಶೀಯರನ್ನೂ ನಂಬಿ ಕೈಸುಟ್ಟುಕೊಂಡ ಮೇಲೂ ನೆಹ್ರೂ ಭಕ್ತರಿಗೆ ಬುದ್ಧಿ ಬರಲಿಲ್ಲ. ಬರುವುದೂ ಇಲ್ಲವೆಂದೇ ಕಾಣುತ್ತದೆ. ಕೆಲವು ಹುಚ್ಚುಗಳು ಮಾರಣಾಂತಿಕವಾಗಿರುತ್ತವೆ ಎನ್ನುತ್ತಾರೆ. ಅವರ ಗಂಟು ಹೋದಂತೆ ಅಬ್ಬರಿಸುತ್ತಿದ್ದಾರೆ. ಹೇಳಿ, 70 ವರ್ಷ ಪ್ಯಾಲೆಸ್ತೇನಿಯ ಭಯೋತ್ಪಾದಕರನ್ನೂ, ಇಸ್ಲಾಂ ರಾಷ್ಟ್ರವಾದ ಪಾಕಿಸ್ತಾನವನ್ನೂ ಓಲೈಸುವ ಭರದಲ್ಲಿ ನಾವು ಪಡೆದುಕೊಂಡಿದ್ದೇನು? ಪಾಕಿಸ್ತಾನ ದ್ವೇಷ ಬಿಟ್ಟಿತೇ? ಅರಬ್ಬರು ಮಾರಾಟಗಾರರಂತೆ ಪೆಟ್ರೋಲ್ ಮಾರಿದ್ದು ಬಿಟ್ಟರೆ ನಮಗಾದ ಸಹಾಯವೇನು? ಪಾಕ್ ಜೊತೆ ಯುದ್ಧದಲ್ಲಿ ನಮಗೆ ಸಹಕರಿಸಿದರೇ? ಬಾಯಿಮಾತಿಂದೇನು ಪ್ರಯೋಜನ? ಇಸ್ರೇಲ್ ಹಾಗಾಗದು. ಇತ್ತ ಚೀನಾ, ಅತ್ತ ಪಾಕ್​ಗಳನ್ನು ಸದೆ ಬಡಿಯಲು ಮೋದಿ ಸರಿಯಾದ ಕಾರ್ಯಕ್ರಮವನ್ನೇ ಹಾಕಿಕೊಂಡು ಸ್ನೇಹಿತರನ್ನು ಕಲೆ ಹಾಕುತ್ತಾ ಒಳ ಹೊರಶತ್ರುಗಳನ್ನು ಬಯಲು ಮಾಡುತ್ತಿದ್ದಾರೆ.

ಮೋದಿಯವರ ಹೆಜ್ಜೆ ಅರಿಯದವರು ಮುಗ್ಧರಾದರೆ ಕ್ಷಮಿಸಬಹುದು. ಹಾಗಾಗದೆ ಶತ್ರುಗಳನ್ನೇ ಕೊಂಡಾಡಿ, ಮಿತ್ರರನ್ನೂ, ರಾಷ್ಟ್ರ ರಕ್ಷಕರನ್ನೂ ದೂಷಿಸುವವರನ್ನು ವ್ಯಕ್ತಿಯಾಗಲಿ, ಪಕ್ಷವಾಗಲಿ ರಾಷ್ಟ್ರದ್ರೋಹಿಗಳೆಂದು ಘೊಷಿಸಬೇಕಾಗುತ್ತದೆ. ಪಾಕ್ ಈಗ “Terror State”. ಸಲಾಹುದ್ದೀನ್, ಷಬೀರ್ ಶಾ, ಅಜರ್ ಮಸೂದ್, ಝಾಕೀರ್ ನಾಯಕ್, ಯೂನಿಸ್ ಮಲ್ಲಿಕ್, ಗಿಲಾನಿಯಂಥವರನ್ನೂ ಬೆಂಬಲಿಸುವವರು ‘ಇಲ್ಲಿ ಸಲ್ಲದವರು ಎಲ್ಲಿಯೂ ಸಲ್ಲರಯ್ಯ‘ ಎಂಬಂತೆ ಬೇರೆಲ್ಲಿ ಸಲ್ಲುತ್ತಾರೆ, ಯೋಚಿಸಿ.

Leave a Reply

Your email address will not be published. Required fields are marked *

Back To Top