Tuesday, 16th October 2018  

Vijayavani

ಜಮಖಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಜಂಗೀಕುಸ್ತಿ- ಕೈ-ಕಮಲ ಅಭ್ಯರ್ಥಿಗಳಿಂದ ನಾಮಿನೇಷನ್​​ - ಬಿಎಸ್​ವೈ, ಸಿದ್ದು ಶಕ್ತಿಪ್ರದರ್ಶನ        ಗಣಿಧಣಿಗಳ ನಾಡಲ್ಲಿ ಬಿಗ್ ಫೈಟ್-ಉಗ್ರಪ್ಪ-ಶಾಂತಾರಿಂದ ಉಮೇದುವಾರಿಕೆ-ರಾಮುಲು, ಡಿಕೆಶಿ ನಡುವೆ ಅಸಲಿ ಕದನ        ಶಿವಮೊಗ್ಗ ಅಖಾಡದಲ್ಲಿ ಮಾಜಿ ಸಿಎಂ ಪುತ್ರರ ಸಮರ-ಇಂದು ಮಧು ಬಂಗಾರಪ್ಪ ನಾಮಪತ್ರ-ಜೆಡಿಎಸ್‌ ಅಭ್ಯರ್ಥಿಗೆ ಕಾಂಗ್ರೆಸ್ ಸಾಥ್        ಮಂಡ್ಯ ಲೋಕಸಭಾ ಚುನಾವಣೆ ಕದನ-ಇಂದು ಬಿಎಸ್​​ವೈ, ಎಚ್​ಡಿಕೆಯಿಂದ ಪ್ರಚಾರ-ದೋಸ್ತಿಗೆ ಸೆಡ್ಡು ಹೊಡೆಯಲು ಕಮಲ ಪ್ಲಾನ್​​        ರಾಮನಗರದಲ್ಲಿ ಕೋಟ್ಯಧಿಪತಿಗಳ ಕಾರುಬಾರು-ಸಿಎಂ ಪತ್ನಿ 127 ಕೋಟಿ ರೂ. ಒಡತಿ-ನಾನೇನು ಕಮ್ಮಿನಾ ಅಂತಿದ್ದಾರೆ ಚಂದ್ರಶೇಖರ್        ಬೈ ಎಲೆಕ್ಷನ್​ ಟೆನ್ಷನ್​ ಮಧ್ಯೆಯೇ ಡಿಸಿಎಂ ವರ್ಕಿಂಗ್​​-ಹುಬ್ಬಳ್ಳಿ ಠಾಣೆಗೆ ದಿಢೀರ್ ವಿಸಿಟ್​​​​​​​​​​-ಬೀಟ್ ಸಿಸ್ಟ್ಂ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಪಾಠ       
Breaking News

ದಕ್ಷಿಣದಲ್ಲಿ ಮಳೆ, ಉತ್ತರದಲ್ಲಿ ಗುಳೆ!

Tuesday, 18.09.2018, 3:03 AM       No Comments

| ಹೀರಾನಾಯ್ಕ ಟಿ. ವಿಜಯಪುರ

ಕೊಡಗು, ಕರಾವಳಿ ಭಾಗದಲ್ಲಿ ಅಬ್ಬರಿಸಿ ದಾಖಲೆ ಪ್ರಮಾಣದ ಮಳೆಯೊಂದಿಗೆ ಅಪಾರ ಅನಾಹುತ ಸೃಷ್ಟಿಸಿರುವ ಈ ವರ್ಷದ ಮುಂಗಾರು, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ನಿರಾಸೆ ಮೂಡಿಸಿದೆ. ಮಳೆ ಕೊರತೆಯಿಂದ ಕಂಗಾಲಾಗಿರುವ ಈ ಭಾಗದ ಜನರು ಉದ್ಯೋಗ ಅರಸಿ ಮಳೆಗಾಲದಲ್ಲೇ ಪಕ್ಕದ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ.

ರಾಜ್ಯದಲ್ಲಿ 23 ಜಿಲ್ಲೆಗಳ 91 ತಾಲೂಕುಗಳು ಬರಕ್ಕೆ ತುತ್ತಾಗಿವೆ. ಪ್ರತಿವರ್ಷ ಬೇಸಿಗೆ ತಿಂಗಳಲ್ಲಿ ಗುಳೆ ಹೋಗುತ್ತಿದ್ದ ಉತ್ತರ ಕರ್ನಾಟಕ ಭಾಗದ ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್, ಹಾವೇರಿ, ಯಾದಗಿರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಲಂಬಾಣಿ ಸಮುದಾಯದ ಜನರು ಈ ವರ್ಷ ಸೆಪ್ಟೆಂಬರ್​ನಲ್ಲೇ ನೆರೆಯ ರಾಜ್ಯಗಳತ್ತ ಮುಖ ಮಾಡುತ್ತಿದ್ದಾರೆ.

ಮಳೆ ಕೈಕೊಟ್ಟಿದ್ದರಿಂದ ಬೆಳೆ ಬಂದಿಲ್ಲ. ಹೀಗಾಗಿ ಗುಳೆಹೋಗಿ ಕೂಲಿ ಮಾಡುವುದು ಅನಿವಾರ್ಯವಾಗಿದೆ. ಹಬ್ಬ ಹರಿದಿನಗಳಿಗೆ ಒಂದೆರಡು ದಿನ ಊರಿಗೆ ವಾಪಸಾಗುತ್ತಾರೆ. ಇಲ್ಲದಿದ್ದರೆ ಗುಳೆ ಹೋದ ಪ್ರದೇಶದಲ್ಲೇ ಜನರು ವಾಸ ಮಾಡುತ್ತಾರೆ ಎಂದು ವಿಜಯಪುರದ ಮದಭಾವಿ ತಾಂಡಾದ ನಿವಾಸಿ ಅರವಿಂದ ರಾಠೋಡ ಹೇಳುತ್ತಾರೆ.

ಗುಳೆ ತಪ್ಪಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ನರೇಗಾ ಯೋಜನೆಯಡಿ ಪ್ರತಿ ಗ್ರಾಪಂ ಮಟ್ಟದಲ್ಲಿ 100 ದಿನ ಕೂಲಿ ಕೆಲಸ ನೀಡಲಾಗುತ್ತಿದೆ. ಕೆಲಸ ಇಲ್ಲದಿದ್ದರೆ ದಿನಕ್ಕೆ 230 ರೂ. ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಆದರೆ ಹೆಚ್ಚಿನ ಕೂಲಿಗಾಗಿ ಹೊರ ರಾಜ್ಯಗಳಿಗೆ ಗುಳೆ ಹೋಗುತ್ತಾರೆ.

| ಎಸ್.ಬಿ. ಶೆಟ್ಟೆಣ್ಣವರ, ಜಿಲ್ಲಾಧಿಕಾರಿ ವಿಜಯಪುರ

ಇನ್ನು ಹದಿನೈದು ದಿನದಲ್ಲಿ ಊರಲ್ಲಿ ಯಾರು ಇರಲ್ರೀ. ಎಲ್ರೂ ದುಡಿಯಕ್ಕೆ ಮಹಾರಾಷ್ಟ್ರ, ಗೋವಾಕ್ಕೆ ಹೋಗುತ್ತಾರೆ. ಯಾವ ಸರ್ಕಾರ ಬಂದ್ರೇನು? ನಮ್ ಹೊಟ್ಟೆ ತುಂಬಿಕೊಳಕ್ಕಾದ್ರೂ ಹೋಗಬೇಕು. ಇಲ್ಲ ಅಂದ್ರೆ ಜೀವನ ನಡೆಸೋದು ಕಷ್ಟ ಆಗ್ತಾತ್ರೀ.

| ಅರವಿಂದ ರಾಠೋಡ, ಮದಭಾವಿ ತಾಂಡಾ ನಿವಾಸಿ

ಮಹಾರಾಷ್ಟ್ರ, ಗೋವಾಕ್ಕೆ ಪಯಣ

ಮಹಾರಾಷ್ಟ್ರದ ಸಾಂಗ್ಲಿ, ಜತ್ತ, ಮೀರಜ್, ಸೊಲ್ಲಾಪುರ ಹಾಗೂ ಗೋವಾಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಮದಭಾವಿ ತಾಂಡಾ, ಹಡಗಲಿ, ನವಲಗಿ, ಕೋಳೂರ, ಹಂಜಗಿ, ಕೇಸರಾಳ, ಹಡಲಸಂಗ, ಬೂದಿಹಾಳ, ಬರಡೋಲ, ಖಿರೂನ ತಾಂಡಾ, ಅರಕೇರಿ, ಭೂತನಾಳ ತಾಂಡಾಗಳ ಬಹುತೇಕ ಜನರು ಈಗಾಗಲೇ ಮನೆಗೆ ಬೀಗ ಹಾಕಿ, ಕುಟುಂಬ ಸಮೇತರಾಗಿ ಗುಳೆ ಹೋಗಿದ್ದಾರೆ.

ಸರ್ಕಾರಕ್ಕೆ ಸಮಯವೇ ಇಲ್ಲ!

ರಾಜ್ಯದ 13 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ವ್ಯಾಪಕ ಕೊರತೆ ಎದುರಾಗಿದೆ. ಜನರು, ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ. ಪ್ರಸ್ತುತ ರಾಜಕೀಯ ವಿದ್ಯಮಾನದಲ್ಲೇ ಸಮ್ಮಿಶ್ರ ಸರ್ಕಾರ ವ್ಯಸ್ತವಾಗಿದೆ. ಬರಪೀಡಿತ ಜಿಲ್ಲೆಗಳಿಗೆ ಸಿಎಂ ಭೇಟಿ ನೀಡಿ, ಸಮಸ್ಯೆಗೆ ಸ್ಪಂದಿಸಬೇಕು. ರೈತರಿಗೆ ನ್ಯಾಯ ಒದಗಿಸಬೇಕು ಎಂಬ ಆಗ್ರಹ ವ್ಯಾಪಕವಾಗಿ ಕೇಳಿಬರುತ್ತಿದೆ. ಗುಳೆ ತಪ್ಪಿಸಲು ಶಾಶ್ವತವಾಗಿ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವ ಅಗತ್ಯವಿದೆ ಎಂದು ರೈತ ಹೋರಾಟಗಾರ ಅರವಿಂದ ಕುಲಕರ್ಣಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Back To Top