Sunday, 24th June 2018  

Vijayavani

ಆಪ್ತರ ಜತೆ ಮಾಜಿ ಸಿಎಂ ಸಭೆ ಹಿನ್ನೆಲೆ - ಸಿದ್ದರಾಮಯ್ಯ ಭೇಟಿಗೆ ತೆರಳಿದ ಪರಂ - ರಾಜಕೀಯ ವಿಚಾರಗಳ ಬಗ್ಗೆ ನಾಯಕರ ಚರ್ಚೆ ಸಾಧ್ಯತೆ        ಪ್ರಕೃತಿ ಚಿಕಿತ್ಸಾಲಯದಿಂದ ಹೊರ ಬಂದ ಸಿದ್ದು - ಅಭಿಮಾನಿಗಳ ಜತೆ ಮಾಜಿ ಸಿಎಂ ಚರ್ಚೆ - ಕೈ ಕಾರ್ಯಕರ್ತರ ಜತೆ ಸೆಲ್ಫಿಗೆ ಫೋಸ್​​        ಶಿವಮೊಗ್ಗದಲ್ಲಿ ಮತ್ತೆ ಝಳಪಿಸಿದ ಮಾರಕಾಸ್ತ್ರ - ರೌಡಿ ಶೀಟರ್​​​ ಹಬೀಬ್​ ಬರ್ಬರ ಹತ್ಯೆ - ತುಂಗಾನಗರ ಠಾಣೆಯಲ್ಲಿ ಪ್ರಕರಣ        ಖಾತೆ ಹಂಚಿಕೆಯಾಯ್ತು, ಈಗ ಬಂಗಲೆ ಸರದಿ - ಒಂದೊಂದು ಬಂಗಲೆಗೆ ಮೂವರ ಪೈಪೋಟಿ - ಸಿಎಂ ಕುಮಾರಸ್ವಾಮಿಗೆ ಬಂಗಲೆ ಕೊಡೋದೇ ಚಿಂತೆ        ಹಿಟ್​​ಲಿಸ್ಟ್​​ನಲ್ಲಿದ್ದ 20 ಉಗ್ರರ ಪೈಕಿ ಇಬ್ಬರು ಫಿನಿಶ್ - ಕುಲ್ಗಾಮದಲ್ಲಿ ಇಬ್ಬರು ಎಲ್​​ಇಟಿ ಉಗ್ರರು ಉಡೀಸ್​ - ಶಸ್ತ್ರ ಸಹಿತ ಒಬ್ಬ ಟೆರರ್​ ಸರೆಂಡರ್        ಮನೆಗಾಗಿ ಕಣ್ಣೀರಿಟ್ಟ ವೃದ್ಧೆಗೆ ಶಾಸಕರ ಸಹಾಯ - 20 ಸಾವಿರ ಹಣ ನೀಡಿದ ಡಾ.ರಂಗನಾಥ - ದಿಗ್ವಿಜಯ ನ್ಯೂಸ್​ ವರದಿಗೆ ಸ್ಪಂದಿಸಿದ ಕುಣಿಗಲ್​ ಶಾಸಕ       
Breaking News

ಅಭಿವೃದ್ಧಿ ನೆಪದಲ್ಲಿ ಮರಗಳಿಗೆ ಕೊಡಲಿ ಹಾಕಬೇಡಿ

Friday, 08.06.2018, 6:01 PM       No Comments

ಮಾನ್ವಿಯಲ್ಲಿ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಸಲಹೆ>>ಆರ್‌ವಿಎನ್ ಗ್ರೂಪ್ ಅಧ್ಯಕ್ಷ ರಾಜಾ ವಸಂತನಾಯಕ ಹುಟ್ಟುಹಬ್ಬ, ಪರಿಸರ ದಿನಾಚರಣೆ>>15 ಸಾವಿರ ಸಸಿ ವಿತರಣೆ

ಮಾನ್ವಿ: ಮಕ್ಕಳಿಲ್ಲ ಎನ್ನುವ ಕೊರಗಿಲ್ಲದೆ ತಾನು ಸಸಿ-ಗಿಡ ನೆಟ್ಟಿದ್ದೇನೆ ಮತ್ತು ಬೆಳೆದ ಮರಗಳನ್ನು ಮಕ್ಕಳಂತೆ ಸಾಕುತ್ತಿದ್ದೇನೆ ಎಂದು ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ತಿಳಿಸಿದರು.

ಪಟ್ಟಣದ ಧ್ಯಾನಮಂದಿರದಲ್ಲಿ ಆರ್‌ವಿಎನ್ ಗ್ರೂಪ್‌ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಾಜಾ ವಸಂತನಾಯಕ ಹುಟ್ಟುಹಬ್ಬ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರಮವಹಿಸಿ ದುಡಿದರೆ ಪ್ರತಿಫಲ ಸಿಗುತ್ತದೆ. ಪರಿಸರ ರಕ್ಷಣೆ ಮಾಡದಿದ್ದರೆ ನಾಡಿಗೆ ಉಳಿಗಾಲವಿಲ್ಲ. ಮರಗಳಿದ್ದರೆ ಮಳೆ ಎಂಬ ನುಡಿ ಸತ್ಯವಾಗಿದೆ. ಮರ, ಗಿಡಗಳಿಲ್ಲದ ಪ್ರದೇಶದಲ್ಲಿ ಮಳೆ ಬೀಳದೆ ಬರ ಆವರಿಸಲಿದೆ. ಇದರಿಂದ ರೈತರು ಸೇರಿ ಜೀವಜಲ ಸಂಕಷ್ಟ ಅನುಭವಿಸುವಂತಾಗಲಿದೆ ಎಂದು ತಿಳಿಸಿದರು.

ಮರಗಳು ಹೆಚ್ಚಿರುವ ಕಡೆ ಮಳೆ ಬೀಳುವುದರಿಂದ ನಾಡು ಸಮೃದ್ಧವಾಗಿರಲಿದೆ ಎಂದರು. ಸಮಾಜದಲ್ಲಿ ಮಹಿಳೆಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಾಲುಮರದ ತಿಮ್ಮಕ್ಕ ತಿಳಿಸಿದರು.

ಆರ್‌ವಿಎನ್ ಗ್ರೂಪ್ ಅಧ್ಯಕ್ಷ ರಾಜಾ ವಸಂತನಾಯಕ ಮಾತನಾಡಿ, ನನ್ನ ಹುಟ್ಟುಹಬ್ಬ ದಿನ ಉಚಿತವಾಗಿ ಸಸಿಗಳನ್ನು ವಿತರಿಸುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದೇನೆ. 4 ವರ್ಷಗಳಿಂದ ವಿವಿಧ ತಳಿಯ ಸಸಿಗಳನ್ನು ವಿತರಿಸುತ್ತಿದ್ದು, ಈ ಬಾರಿ 15 ಸಾವಿರ ಸಸಿಗಳನ್ನು ಜನರಿಗೆ ಹಂಚಲಾಗುತ್ತಿದೆ ಎಂದರು.

ಸಾಲುಮರದ ತಿಮ್ಮಕ್ಕ ಅವರಿಗೆ ಆರ್‌ವಿಎನ್ ಗ್ರೂಪ್‌ನಿಂದ 50 ಸಾವಿರ ರೂ. ನೀಡಿ ಸನ್ಮಾನಿಸಲಾಯಿತು. ವಿವಿಧ ಮುಖಂಡರು ತಿಮ್ಮಕ್ಕ ಅವರಿಗೆ ಧನಸಹಾಯ ಮಾಡಿದರು. ಪುರಸಭೆ ಸದಸ್ಯರಾದ ಶ್ಯಾಂಸುಂದರ ನಾಯಕ, ಲಕ್ಷ್ಮಿದೇವಿ, ಮುಖಂಡರಾದ ಲಕ್ಷ್ಮಿನಾರಾಯಣ ಯಾದವ್, ತಿಪ್ಪಣ್ಣ ಬಾಗಲವಾಡ, ರಾಜಾ ಸುಭಾಶ್ಚಂದ್ರ ನಾಯಕ, ರವಿಚಂದ್ರ ಕಾಜಗಾರ ಹಾಗೂ ಆರ್‌ವಿಎನ್ ಗ್ರೂಪ್ ಸದಸ್ಯರು ಇತರರಿದ್ದರು.

ಪರಿಸರ ಕಾಪಾಡುವ ಕಾಳಜಿ ಇರಲಿ..: ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕಿದೆ. ಮರಗಳನ್ನು ಕಡಿದವರು ಮತ್ತೆ ಸಸಿಗಳನ್ನು ನೆಟ್ಟು ಪರಿಸರ ಕಾಪಾಡುವ ಕಾಳಜಿ ಇಲ್ಲವಾಗಿದೆ. ಇಂಥ ಕಾಳಜಿ ಸರ್ಕಾರ ಸೇರಿ ಪ್ರತಿಯೊಬ್ಬರೂ ಪ್ರದರ್ಶಿಸಬೇಕು. ಯಥೇಚ್ಚವಾಗಿ ಸಸಿಗಳನ್ನು ನೆಟ್ಟು ಪೋಷಿಸಬೇಕು. ಮರಗಳು ನಮ್ಮ ಕಣ್ಣಮುಂದೆ ಬೆಳೆಯುವ ಖುಷಿಯಲ್ಲಿ ನಮಗೆ ನೆಮ್ಮದಿ ಸಿಗಲಿದೆ ಎಂದು ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ತಿಳಿಸಿದರು.

Leave a Reply

Your email address will not be published. Required fields are marked *

Back To Top