Thursday, 20th September 2018  

Vijayavani

Breaking News

‘ವಿಜಯ್ ಮಲ್ಯ ಪರಾರಿಗೆ ಸಿಬಿಐನಿಂದಲೇ ನೆರವು’

Saturday, 15.09.2018, 2:03 AM       No Comments

ನವದೆಹಲಿ: ಉದ್ಯಮಿ ವಿಜಯ್ ಮಲ್ಯ ವಿದೇಶಕ್ಕೆ ಪರಾರಿಯಾಗಲು ಸಿಬಿಐ ನೆರವು ನೀಡಿತ್ತು. ಈ ವಿಷಯ ಪ್ರಧಾನಿ ನರೇಂದ್ರ ಮೋದಿಗೂ ಗೊತ್ತಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮಲ್ಯ ವಿರುದ್ಧ 2015ರಲ್ಲಿ ‘ಲುಕ್ ಔಟ್’ ನೋಟಿಸ್ ಜಾರಿಯಾಗಿತ್ತು. ಇದರಿಂದ ಅವರು ದೇಶ ಬಿಟ್ಟು ಹೋಗುವುದಕ್ಕೆ ಅಡ್ಡಿಯಾಗಿತ್ತು. ಡಿಟೆನ್ಷನ್(ಬಂಧನ) ಇದ್ದದ್ದನ್ನು ‘ಇನ್​ಫಾಮ್ರ್’ ನೋಟಿಸನ್ನಾಗಿ ಮಾರ್ಪಾಡು ಮಾಡಲಾಯಿತು. ಈ ವಿಷಯವನ್ನು ಪ್ರಧಾನಿಗೆ ತಿಳಿಸಲಾಗಿತ್ತು ಎಂದು ರಾಹುಲ್ ಟ್ವಿಟರ್​ನಲ್ಲಿ ಆಪಾದಿಸಿದ್ದಾರೆ.

ಸುಸ್ತಿದಾರ ಮಲ್ಯಗೆ ದೇಶಬಿಟ್ಟು ತೆರಳದಂತೆ ನಿರ್ಬಂಧ ವಿಧಿಸಬೇಕು ಎಂದು ಎಸ್​ಬಿಐ ನೇತೃತ್ವದಲ್ಲಿ 13 ಬ್ಯಾಂಕ್​ಗಳು ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಲು ವಿಳಂಬ ಮಾಡಿದ್ದು ಏಕೆ ಎಂದೂ ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪಿಯೂಷ್ ಗೋಯೆಲ್, ಮಲ್ಯರೊಂದಿಗೆ ಸೋನಿಯಾ ಗಾಂಧಿ ಕುಟುಂಬ ಹೊಂದಿರುವ ಸಂಬಂಧ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಕಾರಣದಿಂದ ಬ್ಯಾಂಕ್​ಗಳು ನಿಯಮಬಾಹಿರವಾಗಿ ಸಾಲ ಮಂಜೂರು ಮಾಡಲು ಸಾಧ್ಯವಾಯಿತು ಎಂದು ತಿರುಗೇಟು ನೀಡಿದ್ದಾರೆ.

ಸಿಬಿಐ ಸ್ಪಷ್ಟನೆ

ರಾಹುಲ್ ಗಾಂಧಿ ಟ್ವಿಟರ್​ನಲ್ಲಿ ಮಾಡಿರುವ ಆರೋಪವನ್ನು ಸಿಬಿಐ ತಳ್ಳಿಹಾಕಿದೆ. ಮಲ್ಯ ವಿಷಯದಲ್ಲಿ ಮೃದು ಧೋರಣೆ ತಳೆದಿಲ್ಲ ಎಂದು ಹೇಳಿದೆ.

ತನಿಖೆ ವಿಸ್ತರಿಸಿದ ಸಿಬಿಐ

ಯುಪಿಎ ಅವಧಿಯಲ್ಲಿ ಮಲ್ಯಗೆ ಬ್ಯಾಂಕ್ ಸಾಲ ಮಂಜೂರಾತಿ ವೇಳೆ ಹಣಕಾಸು ಸಚಿವಾಲಯದ ಅಧಿಕಾರಿಗಳ ಪಾತ್ರ ಕುರಿತಂತೆ ಸಿಬಿಐ ಮರುತನಿಖೆ ಕೈಗೊಂಡಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Back To Top