Saturday, 18th November 2017  

Vijayavani

1. ಜಯಾ ನಿವಾಸದಲ್ಲಿ ಐಟಿ ಇಂಚಿಂಚೂ ಶೋಧ- ಪೋಯೆಸ್​ ಗಾರ್ಡನ್​​ನಲ್ಲಿ ದಾಖಲೆಗಳ ಪರಿಶೀಲನೆ- ಚೆನ್ನೈನಲ್ಲಿ ಕಳೆದ ರಾತ್ರಿಯಿಂದಲೂ ಹೈಡ್ರಾಮಾ 2. ಬೆಂಗಳೂರಿನಲ್ಲಿ ವ್ಯಕ್ತಿಯ ಪುಂಡಾಟ- ನಡುರೋಡಲ್ಲೇ ಟ್ರಾಫಿಕ್​​ ಪೊಲೀಸ್​ ಮೇಲೆ ಹಲ್ಲೆ- ದೊಣ್ಣೆ ಹಿಡಿದ ವ್ಯಕ್ತಿ ಈಗ ಖಾಕಿ ಅತಿಥಿ 3. ಒಂದಲ್ಲ… ಎರಡಲ್ಲ… ಬರೋಬ್ಬರಿ ಮೂರು- ಬೀಗರ ಊಟದಲ್ಲೇ ಸಿಕ್ಕಿಬಿದ್ದ ರಸಿಕ ಮಹಾಶಯ- ಹಾಸನದ ಗೊರೂರಿನಲ್ಲಿ ಬಿತ್ತು ಸಖತ್ ಗೂಸಾ 4. ಪಿಒಕೆ ವಶಪಡಿಸಿಕೊಳ್ಳಲು ಪಾಕ್​ ತೆರಿಗೆ ಹುನ್ನಾರ- ಕೋಳಿ, ಕುರಿ, ಹಸುವಿಗೂ ಟ್ಯಾಕ್ಸ್​- ಪಾಕ್​ ವಿರುದ್ಧ ಗಿಲ್ಗಿಟ್​​​ನಲ್ಲಿ ಆಕ್ರೋಶ 5. ಸಿಂಹಳೀಯರ ದಾಳಿಗೆ ಭಾರತ ತತ್ತರ- ಮೊದಲ ಇನ್ನಿಂಗ್ಸ್​​​ನಲ್ಲಿ 172ಕ್ಕೆ ಆಲೌಟ್​- ಶ್ರೀಲಂಕಾ ರಕ್ಷಣಾತ್ಮಕ ಆಟ
Breaking News :

ಮಿ. ರಾಹುಲ್​! 4 ಪೀಳಿಗೆ 9 ದಶಕ ಸಿನಿಮಾ​ಗಾಗಿ ದುಡಿದಿದೆ- ಅದಕ್ಕೆ ಜನಮನ್ನಣೆಯೇ ಶ್ರೀರಕ್ಷೆ

Wednesday, 13.09.2017, 11:19 AM       No Comments

ಮುಂಬೈ: ‘The Kapoors’ ಖಾನ್ದಾನ್​ ಅಂದ್ರೇನೇ ಹಾಗೆ…ಆ ಕುಟುಂಬದ ಅಷ್ಟೂ ಕಲಾವಿದರ ಜೀವನ ಚರಿತ್ರೆಯ ಮೇಲೆ ಒಮ್ಮೆ ಕಣ್ಣಾಡಿಸಿದರೆ ಸಾಕು … ಇಡೀ ಭಾರತೀಯ ಚಿತ್ರೋದ್ಯಮ ಇತಿಹಾಸ ತನ್ನಿಂತಾನೇ ತೆರೆದುಕೊಳ್ಳುತ್ತದೆ. 4 ಪೀಳಿಗೆ 9 ದಶಕಗಳ ಕಾಲ ಭಾರತೀಯ ಚಿತ್ರೋದ್ಯಮಕ್ಕೆ ಅಗಣಿತ/ ಅಮೂಲ್ಯ ಕೊಡುಗೆ ನೀಡಿದೆ. ಅದಕ್ಕೆ ಅಪಾರ ಜನಮನ್ನಣೆ, ಶ್ರೀರಕ್ಷೆಯೂ ಸಿಕ್ಕಿದೆ.

ಈ ಮಧ್ಯೆ, ಇದ್ದದ್ದನ್ನು ಇದ್ದ ಹಾಗೆ ಹೇಳುವ ಭೋಳೆ ಸ್ವಭಾದ ರಿಶಿ ಕಪೂರ್ ನಿನ್ನೆಯಿಂದ ಒಂದಷ್ಟು ಸಿಟ್ಟಿಗೆದ್ದಿದ್ದಾರೆ. ಯಾರದು ವಂಶಪಾರಂಪರ್ಯದ ಬಗ್ಗೆ ಕೊಂಕು ತೆಗೆದಿರುವುದು? ಎಂದು ಝಾಡಿಸತೊಡಗಿದ್ದಾರೆ.

ಹೌದು ನಿನ್ನೆ ಅತ್ತ ಅಮೆರಿಕದಲ್ಲಿ ಕಾಂಗ್ರೆಸ್ಸಿನ ಯುವರಾಜ ವಿದ್ಯಾರ್ಥಿಗಳೆದುರು ಭಾರತದ ಮಾನ ಹರಾಜು ಹಾಕಿದ್ದೇ ಇತ್ತ ಭಾರತದಲ್ಲಿ ಒಬ್ಬೊಬ್ಬರಾಗಿ ಅವರ ಮೇಲೆ ಮುಗಿಬಿದ್ದಿದ್ದಾರೆ.

ಕೇಳಪ್ಪಾ ರಾಹುಲ್​ … 106 ವರಷಗಳ ಭಾರತೀಯ ಚಿತ್ರೋದ್ಯಮದಲ್ಲಿ ಕಪೂರ್​ ಕುಟುಂಬದ ಕೊಡುಗೆ ಬರೋಬ್ಬರಿ 90 ವರ್ಷದ್ದಾಗಿದೆ. ಪ್ರತಿ ಪೀಳಿಗೆಯನ್ನೂ ಜನರೇ ಪೋಷಿಸುತ್ತಾ ಬಂದಿದ್ದಾರೆ. ಅದು ಸುಮ್ಮನೆಯ ಮಾತಲ್ಲ; ಕೇವಲ ಮೆರಿಟ್​ ಆಧಾರದ ಮೇಲೆಯಷ್ಟೇ, ಗೊತ್ತಾ! ಎಂದು ಗುಂಡಿಗೆಯ ಮಾತನ್ನಾಡಿದ್ದಾರೆ ರಿಶಿ ಕಪೂರ್.

‘ದೇವರ ಆಶೀರ್ವಾದ ದೊಡ್ಡದು… ಪೃಥ್ವಿರಾಜ್​ ಕಪೂರ್, ರಾಜ್​ ಕಪೂರ್, ರಣಧೀರ್ ಕಪೂರ್, ರಣಬೀರ್​ ಕಪೂರ್ ಹೀಗೆ ಪಟ್ಟಿ ಸಾಗುತ್ತದೆ. ಬುಲ್​ ಶಿ- ಥರಾ ಜನರ ಬಗ್ಗೆ ಮಾತನಾಡಬೇಡಿ. ಮೊದಲು ಕಠಿಣ ಪರಿಶ್ರಮದಿಂದ ಜನರ ಮನ್ನಣೆ ಗಳಿಸಿ. ಜಬರದಸ್ತಿ ಮತ್ತು ಗುಂಡಾಗರ್ದಿಯಿಂದ ಅಲ್ಲ’ ಎಂದು ರಿಶಿ ಕಪೂರ್ ಅವರು ರಾಹುಲ್​ಗೆ ಬುದ್ಧಿವಾದ ಹೇಳಿದ್ದಾರೆ.

Leave a Reply

Your email address will not be published. Required fields are marked *

Back To Top