Saturday, 24th February 2018  

Vijayavani

ಮತ್ತೊಂದು ಸುತ್ತಿನ ರಣಕಹಳೆಗೆ ಕೈ ಸಿದ್ಧತೆ - ಇಂದಿನಿಂದ ಮೂರುದಿನ ರಾಹುಲ್ ರಾಜ್ಯ ಪ್ರವಾಸ - ಅಧ್ಯಕ್ಷರ ಆಗಮನಕ್ಕೆ ಭರ್ಜರಿ ತಯಾರಿ        ಮೈಸೂರಲ್ಲಿ ರಂಗೇರಿದ ಎಲೆಕ್ಷನ್ ಅಖಾಡ - ಸುನಿಲ್ ಬೋಸ್ ಜತೆಗಿರುವ ಜೆಡಿಎಸ್‌ ಅಭ್ಯರ್ಥಿ ಫೋಟೋ ವೈರಲ್ - ಆರೋಪ ತಳ್ಳಿ ಹಾಕಿದ ಅಶ್ವಿನ್ ಕುಮಾರ್‌        ಉದ್ಯೋಗ ಕೊಡಿಸುವುದಾಗಿ ನೇಪಾಳದಿಂದ ಕರೆಸಿದ - ಮದುವೆಯಾಗ್ತೀನಿ ಅಂತಾ ಅತ್ಯಾಚಾರವೆಸಗಿದ - ಕಾಮ ಪಿಶಾಚಿ ಹೋಟೆಲ್‌ ಕ್ಯಾಶಿಯರ್‌ ಎಸ್ಕೇಪ್‌        ಸುಪ್ರೀಂಕೋರ್ಟ್​​ ಆದೇಶಗಾಳಿಗೆ ತೂರಿ ಬಾರ್ ಓಪನ್ ​- ಎಂಜಲು ಕಾಸಿಗಾಗಿ ನಿಯಮ ಉಲ್ಲಂಘಿಸಿದ್ರಾ ಅಧಿಕಾರಿಗಳು -ದಿಗ್ವಿಜಯ ನ್ಯೂಸ್ ರಿಯಾಲಿಟಿ ಚೆಕ್‌ನಲ್ಲಿ ಅಸಲಿ ಮುಖ ಬಯಲು        ಬೋಲ್‌ವೆರ್‌ ಕೊರೆಸಿದ್ದು ಒಂದ್ಕಡೆ - ನೀರು ಚಿಮ್ಮಿದ್ದು ಇನ್ನೊಂದ್ಕಡೆ - ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಆಕಾಶಕ್ಕೆ ಉಕ್ಕಿದ ಗಂಗೆ       
Breaking News

ವಿಷಾದದ ಹೊತ್ತಿನಲ್ಲಿ… ಸರಸ್ವತೀ ಪುತ್ರರ ಕುಟುಂಬ ನೆನೆಯುತ್ತಾ!

Friday, 08.09.2017, 5:01 PM       No Comments

ಮೈಸೂರು: ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಟ, ನಾಗೇಂದ್ರ ರಾಯರ ಕೊನೆಯ ಪುತ್ರ ಆರೆನ್ ಸುದರ್ಶನ್ ಇಂದು ವಿಧಿವಶರಾಗಿದ್ದಾರೆ. ಹಾಗೆ ನೋಡಿದರೆ, ಅವರ ಇಡೀ ಕುಟುಂಬವೇ ಅಪಾರ ಕೀರ್ತಿಗಳಿಸಿ ಮೆರೆದ ಭವ್ಯ/ ದಿವ್ಯ ಮನೆತನಕ್ಕೆ ಸೇರಿದ್ದು.

ಈ ವಿಷಾದದ ಹೊತ್ತಿನಲ್ಲಿ ಸರಸ್ವತೀ ಪುತ್ರರ ಕುಟುಂಬ ನೆನೆಯುವುದಾದರೆ… ವಿಷಾದದ ಹೊರತಾಗಿಯೂ ಹೆಮ್ಮೆ ಮೂಡುತ್ತದೆ. ದೈವದತ್ತವಾಗಿ ಧರೆಗಿಳಿದಿದ್ದ ದಿಗ್ಗಜರು ಆ ಕುಟುಂಬ ವರ್ಗದವರು. ಒಬ್ರಾ ಇಬ್ರಾ … ಹಿರಿಯ ತಲೆ ನಾಗೇಂದ್ರ ರಾಯರಿಂದ ಹಿಡಿದು ಒಬ್ಬೊಬ್ಬರೂ ಒಂದೊಂದು ಶಕ್ತಿಯಾಗಿದ್ದವರು. ಕನ್ನಡ ಸಾರಸ್ವತ ಲೋಕದ ದಿಗ್ಗಜರಾಗಿದ್ದರು.

ಚಿತ್ರೋದ್ಯಮದ ಪಿತಾಮಹ:

ದೇಶದ ಇತರೆಡೆ ಬ್ರಿಟೀಶರ ಕರಾಳ ಛಾಯೆಯಿದ್ದರೂ ಮೈಸೂರು ಮಹಾರಾಜರ ಆಳ್ವಿಕೆಯಲ್ಲಿದ್ದ ಹೊಳಲ್ಕೆರೆಯ ರತ್ತಿಹಳ್ಳಿ ಎಂಬ ಪುಟ್ಟ ಗ್ರಾಮದ ನಾಗೇಂದ್ರರಾಯರು ಸ್ವತಃ ತಾವೇ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದವರು. ಸ್ವತಃ ಅವರು ಅದ್ಭುತ ನಟ, ಚಿತ್ರ ನಿರ್ದೇಶಕ, ನಿರ್ಮಾಪಕ, ಸಂಭಾಷಣೆಕಾರ, ಗೀತೆ ರಚನೆಕಾರ… ಹೀಗೆ ಸಿನಿಮಾದ ಎಲ್ಲ ರಂಗಗಳಲ್ಲೂ ಚಿರಮುದ್ರೆ ಒತ್ತಿದವರು. 

ಆಗ್ಗೆ ಬಹು ಗೌರವದ ಪದ್ಮಶ್ರೀ ಪುರಸ್ಕೃತರಾದ ನಾಗೇಂದ್ರರಾಯರ ಕೊಡುಗೆ ಇಷ್ಟಕ್ಕೇ ನಿಲ್ಲುವುದಿಲ್ಲ. ಇನ್ನೂ ನಾಲ್ಕು ಶಾಶ್ವತ ಕೃತಿಗಳನ್ನು ಅವರು ಕನ್ನಡ ಚಿತ್ರೋದ್ಯಮಕ್ಕೆ (ಒಂದಷ್ಟು ತಮಿಳು ಚಿತ್ರೋದ್ಯಮಕ್ಕೂ) ನೀಡಿದವರು. ಅಂದಹಾಗೆ, ನಾಗೇಂದ್ರ ರಾಯರಿಗೆ ರತ್ನಾ ಬಾಯಿ ಮತ್ತು ಕಮಲಾ ಬಾಯಿ ಎಂಬಿಬ್ಬರು ಪತ್ನಿಯರು.

ನಾಗೇಂದ್ರರಾಯರ ಕುಡಿಗಳು ಇವರು:
ಆರ್​.ಎನ್​. ಗುರುರಾಜ ಪ್ರಸಾದ್, ಆರ್​.ಎನ್​. ಕೃಷ್ಣಪ್ರಸಾದ್, ಆರ್​. ಎನ್​. ಜಯಗೋಪಾಲ್​ ಮತ್ತು ಆರ್​. ಎನ್​. ಸುದರ್ಶನ್ – ಹಿರಿಯ ಪುತ್ರ ಗುರುರಾಜರನ್ನು ಹೊರತುಪಡಿಸಿ ಇತರೆ ಮೂವರೂ ನಾಗೇಂದ್ರರಾಯರ ಅದ್ಭುತ ಕೃತಿಗಳು/ಕುಡಿಗಳು. ಚಿತ್ರರಂಗಕ್ಕೆ ಒಬ್ಬೊಬ್ಬರೂ ಒಂದೊಂದು ಧೀಃ ಶಕ್ತಿಯಾಗಿದ್ದವರು.

ಇವರ ಪೈಕಿ ಆರ್​. ಎನ್​. ಜಯಗೋಪಾಲರ ಬಗ್ಗೆ ಹೇಳುವುದೇನು? 12,000ಕ್ಕೂ ಅಧಿಕ ಅದ್ಭುತ ಅಮೃತದಂತಹ ಗೀತೆಗಳನ್ನು ಕಟ್ಟಿಕೊಟ್ಟವರು ಅವರು. ಇನ್ನು ಜಯಗೋಪಾಲರ ಪುತ್ರ ರವಿ ಸಹ ಇಂದಿನ ಮಾಹಿತಿ ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ಅಂತರ್ಜಾಲದಲ್ಲಿ ವಿಹರಿಸುತ್ತಿರುವ ಪ್ರತಿಭೆ.

ಇಂದು ಆರ್​ ಎನ್ ಸುದರ್ಶನ್ ಅವರು ವಿಧಿವಶರಾಗುವ ಮೂಲಕ ಈ ಸರಸ್ವತೀಪುತ್ರರ ಕೊನೆಯ ಕೊಂಡಿ ಕಳಚಿದಂತಾಗಿದೆ.
ನಾಗೇಂದ್ರರಾಯರ ಪುತ್ರ, ನಟ ಆರೆನ್​ ಸುದರ್ಶನ್​ ಇನ್ನಿಲ್ಲ

 

Leave a Reply

Your email address will not be published. Required fields are marked *

Back To Top