Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಜಯನಗರ ಸೋಲಿಗೆ ಮೊದಲು ಅನಂತ್​ಕುಮಾರ್​ ಹೊಣೆ ಹೊರಲಿ: ಆಶೋಕ್​

Thursday, 14.06.2018, 3:50 PM       No Comments

ಬೆಂಗಳೂರು: “ಜಯನಗರ ವಿಧಾನಸಭೆ ಚುನಾವಣೆ ಸೋಲಿಗೆ ಮೊದಲು ಅನಂತ್​ಕುಮಾರ್​ ಅವರು ನೈತಿಕ ಹೊಣೆ ಹೊರಬೇಕು. ಆಮೇಲೆ ನಾನು ಹೊಣೆ ಹೊರುತ್ತೇನೆ. ಸೋಲಿಗೆ ನನ್ನ ಹೆಸರು ತಳಕು ಹಾಕುತ್ತಿರುವುದು ನೋವುಂಟು ಮಾಡಿದೆ,” ಎಂದು ಮಾಜಿ ಉಪಮುಖ್ಯಮಂತ್ರಿ ಆರ್​. ಅಶೋಕ್​ ಅವರು ಹೇಳಿದ್ದಾರೆ.

ಜಯನಗರ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ “ವಿಜಯವಾಣಿ” ಸೋದರ ಸಂಸ್ಥೆ “ದಿಗ್ವಿಜಯ ನ್ಯೂಸ್​ 24/7″ಗೆ ಎಕ್ಸ್​ಕ್ಲೂಸಿವ್​ ಸಂದರ್ಶನ ನೀಡಿರುವ ಆರ್​. ಅಶೋಕ್,​ ತಮ್ಮ ಬೇಸರ ಹೊರ ಹಾಕಿದರು.

“ಸೋಲಿಗೆ ಅಶೋಕ್ ಕಾರಣ ಎಂಬ ಆರೋಪಗಳು ಬಹಳ ನೋವುಂಟು ಮಾಡಿವೆ. ಗೆದ್ದಾಗ ಅಶೋಕ್ ಕಾರಣ ಎಂದು ಯಾರೂ ಹೇಳುವುದಿಲ್ಲ. ಅದೇ ಸೋತಾಗ ಎಲ್ಲರೂ ನನ್ನ ಕಡೆಗೆ ಬೊಟ್ಟು ಮಾಡುತ್ತಾರೆ. ಬೆಂಗಳೂರಿನಲ್ಲಿ ನಡೆದ ಅಮಿತ್ ಷಾ ಕಾರ್ಯಕ್ರಮ ವಿಫಲಗೊಂಡಾಗ ಅಶೋಕ್ ಕಾರಣ ಎಂದವರು, ಅದೇ ಪ್ರಧಾನಿ ಮೋದಿ ಕಾರ್ಯಕ್ರಮ ನಿರೀಕ್ಷೆ ಮೀರಿ ಯಶಸ್ಸು ಕಂಡಾಗ ಅಶೋಕ್ ಕಾರಣ ಎಂದು ಹೇಳಲಿಲ್ಲ. ಈ ಎಲ್ಲ ಬೆಳವಣಿಗೆಗಳು ನನಗೆ ಬಹಳ ನೋವುಂಟು ಮಾಡಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸೋಲಿಗೆ ಮೊದಲು ಅನಂತಕುಮಾರ್ ನೈತಿಕ ಹೊಣೆ ಹೊರಬೇಕು. ಆಮೇಲೆ ನಾನು ಸೋಲಿನ ನೈತಿಕ ಹೊಣೆ ಹೊರುತ್ತೇನೆ. ಅನಾರೋಗ್ಯದಿಂದಾಗಿ ಜಯನಗರದಲ್ಲಿ ಪ್ರಚಾರ ಮಾಡಲಿಲ್ಲ ಎಂದು ಹೇಳಿದರು.

ಕಾಂಗ್ರೆಸ್​ಗೆ ಕೆಲಸ ಮಾಡಿದ ಬೈರಸಂದ್ರದ ಬಿಜೆಪಿ ಕಾರ್ಪೊರೇಟರ್ ನಾಗರಾಜ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಈ ಕುರಿತು ಈಗಾಗಲೇ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ನಾನೂ ಸೇರಿದ್ದಂತೆ ಎಲ್ಲ ನಾಯಕರು ಪ್ರಚಾರ ಮಾಡಿದ್ದೆವು. ಅಭ್ಯರ್ಥಿ ಆಯ್ಕೆ ವೇಳೆ ಗೊಂದಲ ಆಗಿದ್ದು ನಿಜ. ಆದರೆ, ಬೆಂಗಳೂರಿನ ನಾಯಕರಲ್ಲಿ ಯಾವುದೇ ವೈಮನಸ್ಸಿಲ್ಲ. ಅನಂತಕುಮಾರ, ಸದಾನಂದಗೌಡ, ಯಡಿಯೂರಪ್ಪ ನಾವೆಲ್ಲಾ ಒಂದಾಗಿದ್ದೇವೆ ಎಂದೂ ಅವರು ಹೇಳಿದರು.
ಮೈತ್ರಿ ಸರ್ಕಾರ ಹನಿಮೂನ್​ ಮಾಡಿಕೊಂಡು ಬರಲಿ ಎಂದೇ ಜಯನಗರವನ್ನು ಬಿಟ್ಟುಕೊಟ್ಟಿದ್ದೇವೆ ಎಂದು ಅವರು ಲಘು ಧಾಟಿಯಲ್ಲೇ ಸೋಲಿನ ವ್ಯಾಖ್ಯಾನ ಮಾಡಿದ್ದಾರೆ.

Leave a Reply

Your email address will not be published. Required fields are marked *

Back To Top