Sunday, 23rd September 2018  

Vijayavani

ಯಾರಿಂದಲೂ ದಬ್ಬಿಸಿಕೊಂಡು ಹೋಗಲ್ಲ - ಕೆಲಸ ಮಾಡದಿದ್ರೆ ಗೌರಯುತ ನಿರ್ಗಮನ - ಎಚ್‌ಡಿಕೆಯಿಂದ ರಾಜಕೀಯ ನಿವೃತ್ತಿ ಮಾತು        ಅಕ್ಟೋಬರ್‌ 10 ರೊಳಗೆ ಸಂಪುಟ ವಿಸ್ತರಣೆ - ಅತೃಪ್ತಿ ಶಮನಕ್ಕೆ ಶೀಘ್ರ ಕ್ರಮ - ಬ್ಲ್ಯಾಕ್‌ಮೇಲರ್‌ಗಳಿಗೆ ವೇಣುಗೋಪಾಲ್‌ ವಾರ್ನಿಂಗ್‌        ದುನಿಯಾ ವಿಜಿ ದಾದಾಗಿರಿ - ವಿಕ್ರಂ ಆಸ್ಪತ್ರೆಗೆ ಸಿಸಿಬಿ ಪೊಲೀಸರ ಭೇಟಿ - ಮಾರುತಿ ಬಳಿ ಹೇಳಿಕೆ ಪಡೆಯದೆ ಪೊಲೀಸರು ವಾಪಸ್‌        ಜಿಮ್ ಟ್ರೈನರ್ ಮೇಲೆ ಹಲ್ಲೆ, ಕಿಡ್ನಾಪ್ ಕೇಸ್ - ಫಿಲಂ ಚೇಂಬರ್​ನಿಂದ ನಾಳೆ ಮೀಟಿಂಗ್ - ದುನಿಯಾ ವಿಜಿ ವಿರುದ್ಧ ಕ್ರಮ ಸಾಧ್ಯತೆ        ಆಯುಷ್ಮಾನ್ ಭಾರತ್ ಯೋಜನೆ ಜಾರಿ - 50 ಕೋಟಿ ಜನರಿಗೆ ಲಾಭ, 5 ಲಕ್ಷವರೆಗೆ ವಿಮೆ - ರಾಂಚಿಯಲ್ಲಿ ಪ್ರಧಾನಿಯಿಂದ ಚಾಲನೆ        ಆಂಧ್ರದಲ್ಲಿ ಹಾಡಹಗಲೇ ನಕ್ಸಲರ ಅಟ್ಟಹಾಸ - ಶಾಸಕ, ಮಾಜಿ ಶಾಸಕನ ಭೀಕರ ಹತ್ಯೆ - 50ಕ್ಕೂ ಹೆಚ್ಚು ನಕ್ಸಲರಿಂದ ರಕ್ತದೋಕುಳಿ       
Breaking News

ಶುಭಾರಂಭ ಕಂಡ ಪಿವಿ ಸಿಂಧು, ಪ್ರಣಯ್

Thursday, 12.07.2018, 3:03 AM       No Comments

ಬ್ಯಾಂಕಾಕ್: ಭಾರತದ ಷಟ್ಲರ್ ಪಿವಿ ಸಿಂಧು, ಪಿ.ಕಶ್ಯಪ್ ಹಾಗೂ ಎಚ್​ಎಸ್ ಪ್ರಣಯ್, ಥಾಯ್ಲೆಂಡ್ ಓಪನ್-2018ರ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಕಂಡಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಮನು ಅತ್ರಿ-ಸುಮೀತ್ ರೆಡ್ಡಿ ಮುನ್ನಡೆ ಸಾಧಿಸಿತು.

ಬುಧವಾರ ನಡೆದ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಹಾಗೂ 2ನೇ ಶ್ರೇಯಾಂಕಿತ ಆಟಗಾರ್ತಿ ಪಿವಿ ಸಿಂಧು 21-8, 21-15 ನೇರ ಗೇಮ್ಳಿಂದ ಬಲ್ಗೇರಿಯಾದ ಜೆಟ್​ಚಿರಿ ಲಿಂಡಾ ವಿರುದ್ಧ ಕೇವಲ 26 ನಿಮಿಷಗಳ ಹೋರಾಟದಲ್ಲಿ ಜಯ ದಾಖಲಿಸಿದರು. ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ 4ನೇ ಶ್ರೇಯಾಂಕಿತ ಆಟಗಾರ ಎಚ್​ಎಸ್ ಪ್ರಣಯ್ 21-16, 21-19 ನೇರ ಗೇಮ್ಳಿಂದ ಸ್ಪೇನ್​ನ ಅಬಿಯನ್ ಪ್ಯಾಬ್ಲೊ ವಿರುದ್ಧ 35 ನಿಮಿಷಗಳ ಹೋರಾಟದಲ್ಲಿ ಜಯ ದಾಖಲಿಸಿದರು. 2014ರ ಕಾಮನ್ವೆಲ್ತ್ ಗೇಮ್್ಸ ಸ್ವರ್ಣ ಪದಕ ವಿಜೇತ ಪಿ.ಕಶ್ಯಪ್ 21-15, 21-17 ರಿಂದ ಕೆನಡದ ಜಾಸನ್ ಅಂಥೋನಿ ವಿರುದ್ಧ ಸುಲಭ ಗೆಲುವು ಪಡೆದರು. ಉಳಿದಂತೆ, ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೌರಭ್ ಶರ್ಮ-ಅನುಷ್ಕಾ ಪಾರಿಖ್, ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಮೇಘನಾ ಜಕ್ಕಂಪುಡಿ-ಪೂರ್ವಿಶಾ ಎಸ್ ರಾಮ್ ಪುರುಷರ ಡಬಲ್ಸ್ ವಿಭಾಗದ ಅರ್ಜುನ್ ಎಂಆರ್-ರಾಮಚಂದ್ರನ್ ಶ್ಲೋಕ್ ಜೋಡಿ ತರುಣ್ ಕೋನಾ-ಸೌರಭ್ ಶರ್ಮ, ಅನಿಲ್​ಕುಮಾರ್ ರಾಜು -ಪ್ರಸಾದ್ ವೆಂಕಟ್ ಗೌರವ್ ನಿರಾಸೆ ಅನುಭವಿಸಿದರು.

Leave a Reply

Your email address will not be published. Required fields are marked *

Back To Top