Sunday, 23rd September 2018  

Vijayavani

ಯಾರಿಂದಲೂ ದಬ್ಬಿಸಿಕೊಂಡು ಹೋಗಲ್ಲ - ಕೆಲಸ ಮಾಡದಿದ್ರೆ ಗೌರಯುತ ನಿರ್ಗಮನ - ಎಚ್‌ಡಿಕೆಯಿಂದ ರಾಜಕೀಯ ನಿವೃತ್ತಿ ಮಾತು        ಅಕ್ಟೋಬರ್‌ 10 ರೊಳಗೆ ಸಂಪುಟ ವಿಸ್ತರಣೆ - ಅತೃಪ್ತಿ ಶಮನಕ್ಕೆ ಶೀಘ್ರ ಕ್ರಮ - ಬ್ಲ್ಯಾಕ್‌ಮೇಲರ್‌ಗಳಿಗೆ ವೇಣುಗೋಪಾಲ್‌ ವಾರ್ನಿಂಗ್‌        ದುನಿಯಾ ವಿಜಿ ದಾದಾಗಿರಿ - ವಿಕ್ರಂ ಆಸ್ಪತ್ರೆಗೆ ಸಿಸಿಬಿ ಪೊಲೀಸರ ಭೇಟಿ - ಮಾರುತಿ ಬಳಿ ಹೇಳಿಕೆ ಪಡೆಯದೆ ಪೊಲೀಸರು ವಾಪಸ್‌        ಜಿಮ್ ಟ್ರೈನರ್ ಮೇಲೆ ಹಲ್ಲೆ, ಕಿಡ್ನಾಪ್ ಕೇಸ್ - ಫಿಲಂ ಚೇಂಬರ್​ನಿಂದ ನಾಳೆ ಮೀಟಿಂಗ್ - ದುನಿಯಾ ವಿಜಿ ವಿರುದ್ಧ ಕ್ರಮ ಸಾಧ್ಯತೆ        ಆಯುಷ್ಮಾನ್ ಭಾರತ್ ಯೋಜನೆ ಜಾರಿ - 50 ಕೋಟಿ ಜನರಿಗೆ ಲಾಭ, 5 ಲಕ್ಷವರೆಗೆ ವಿಮೆ - ರಾಂಚಿಯಲ್ಲಿ ಪ್ರಧಾನಿಯಿಂದ ಚಾಲನೆ        ಆಂಧ್ರದಲ್ಲಿ ಹಾಡಹಗಲೇ ನಕ್ಸಲರ ಅಟ್ಟಹಾಸ - ಶಾಸಕ, ಮಾಜಿ ಶಾಸಕನ ಭೀಕರ ಹತ್ಯೆ - 50ಕ್ಕೂ ಹೆಚ್ಚು ನಕ್ಸಲರಿಂದ ರಕ್ತದೋಕುಳಿ       
Breaking News

ಪೋರರಿಗೆ ರೆಡಿಮೇಡ್ ಪಂಚೆ

Saturday, 07.07.2018, 3:03 AM       No Comments

ಪಂಚೆ ಉಡುವುದೆಂದರೆ ದೊಡ್ಡವರಿಗೂ ಸ್ವಲ್ಪ ಕಿರಿಕಿರಿಯೇ. ಹಬ್ಬ, ಸಮಾರಂಭಗಳಿಗೆ ಪಂಚೆಯೇ ಹೇಳಿ ಮಾಡಿಸಿದ ಉಡುಗೆ. ಪೂಜೆ, ಪುನಸ್ಕಾರಗಳಿಗೋಸ್ಕರವಾದರೂ ಪಂಚೆ ಉಡಲೇಬೇಕು. ಇನ್ನು ಚಿಕ್ಕ ಮಕ್ಕಳಿಗೆ ಹೇಗೆ ಪಂಚೆ ಉಡಿಸುವುದು? ಅವರು ಅದನ್ನು ಹೇಗೆ ನಿಭಾಯಿಸಿಯಾರು ಎಂಬುದೇ ಹಿಂದೆಲ್ಲ ಪಾಲಕರ ಚಿಂತೆಯಾಗಿತ್ತು. ಈಗ ಹಾಗಿಲ್ಲ, ರೆಡಿಮೇಡ್ ಪಂಚೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಜುಬ್ಬಾಗಳು ಹಳೆಯದಾದವು. ಸರಿಯಾದ ಚೆಂದನೆಯ ನೆರಿಗೆಗಳ ಸಹಿತ ಬರುವ ಪಂಚೆಗಳನ್ನು ಪ್ಯಾಂಟ್ ಧರಿಸುವ ಹಾಗೆ ಧರಿಸಿದರಾಯಿತು. ಹೀಗಿದ್ದಾಗ ನೆರಿಗೆ ಹಾಳಾಗುವ ಪ್ರಶ್ನೆಯೇ ಬರುವುದಿಲ್ಲ. ಮಕ್ಕಳಿಗೆ ಇಂತಹ ಪಂಚೆಗಳು ಬಹಳ ಉಪಯುಕ್ತವಾಗಿವೆ. ಸಂಪ್ರದಾಯ ಕಾಪಾಡಿಕೊಂಡು ಹೋಗಲು ಪಂಚೆ ಉಡಲೇಬೇಕು ಎನ್ನುವವರಿಗೆ ಇಂತಹ ಪಂಚೆಗಳು ಅನುಕೂಲಕರ. ವಿವಿಧ ಕಾರ್ಯಕ್ರಮಗಳಲ್ಲಿ ದೊಡ್ಡವರು ಕೂಡ ಇಂತಹ ಪಂಚೆಗಳನ್ನು ಧರಿಸುತ್ತಿದ್ದಾರೆ. ಪಟಿಯಾಲಾ ಮಾದರಿಯಲ್ಲಿ ಈ ಪಂಚೆಗಳ ವಿನ್ಯಾಸವಿರುವುದರಿಂದ ನೋಡಲು ಚೆನ್ನಾಗಿ ಕಾಣುತ್ತದೆ. ಜುಬ್ಬಾಗಳನ್ನು ಧರಿಸಿ ಬೇಸರವಾದವರು ರೆಡಿಮೇಡ್ ಪಂಚೆ ಧರಿಸಿ ಖುಷಿ ಪಡಬಹುದು. ವಿಭಿನ್ನ ವಿನ್ಯಾಸದ ಪಂಚೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಪ್ಲೇನ್, ಪ್ರಿಂಟೆಡ್ ಪಂಚೆಗಳೂ ಇವೆ. ಪಂಚೆ ಪ್ಲೇನ್ ಆಗಿದ್ದರೆ, ಕುರ್ತಾದಲ್ಲಿ ಹೆಚ್ಚಿನ ಎಂಬ್ರಾಯಿಡರಿ ಇರಬೇಕು. ಕುರ್ತಾ ಪ್ಲೇನ್ ಆಗಿದ್ದರೆ ಪಂಚೆ ಪ್ರಿಂಟೆಡ್ ಆಗಿದ್ದರೆ ಚೆನ್ನಾಗಿರುತ್ತದೆ.

ದಿನದಿಂದ ದಿನಕ್ಕೆ ಫ್ಯಾಷನ್​ಲೋಕದಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ. ಅದಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಅಪ್​ಡೇಟ್ ಆಗುತ್ತಿರುತ್ತಾರೆ. ನಮಗೆ ಗೊತ್ತಿರದ ಸ್ಟೈಲ್ ನಿಮಗೆ ಗೊತ್ತಿರಬಹುದು. ಅಂಥವನ್ನು [email protected]ಗೆ ಬರೆದು ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ.

Leave a Reply

Your email address will not be published. Required fields are marked *

Back To Top