Sunday, 23rd September 2018  

Vijayavani

ಯಾರಿಂದಲೂ ದಬ್ಬಿಸಿಕೊಂಡು ಹೋಗಲ್ಲ - ಕೆಲಸ ಮಾಡದಿದ್ರೆ ಗೌರಯುತ ನಿರ್ಗಮನ - ಎಚ್‌ಡಿಕೆಯಿಂದ ರಾಜಕೀಯ ನಿವೃತ್ತಿ ಮಾತು        ಅಕ್ಟೋಬರ್‌ 10 ರೊಳಗೆ ಸಂಪುಟ ವಿಸ್ತರಣೆ - ಅತೃಪ್ತಿ ಶಮನಕ್ಕೆ ಶೀಘ್ರ ಕ್ರಮ - ಬ್ಲ್ಯಾಕ್‌ಮೇಲರ್‌ಗಳಿಗೆ ವೇಣುಗೋಪಾಲ್‌ ವಾರ್ನಿಂಗ್‌        ದುನಿಯಾ ವಿಜಿ ದಾದಾಗಿರಿ - ವಿಕ್ರಂ ಆಸ್ಪತ್ರೆಗೆ ಸಿಸಿಬಿ ಪೊಲೀಸರ ಭೇಟಿ - ಮಾರುತಿ ಬಳಿ ಹೇಳಿಕೆ ಪಡೆಯದೆ ಪೊಲೀಸರು ವಾಪಸ್‌        ಜಿಮ್ ಟ್ರೈನರ್ ಮೇಲೆ ಹಲ್ಲೆ, ಕಿಡ್ನಾಪ್ ಕೇಸ್ - ಫಿಲಂ ಚೇಂಬರ್​ನಿಂದ ನಾಳೆ ಮೀಟಿಂಗ್ - ದುನಿಯಾ ವಿಜಿ ವಿರುದ್ಧ ಕ್ರಮ ಸಾಧ್ಯತೆ        ಆಯುಷ್ಮಾನ್ ಭಾರತ್ ಯೋಜನೆ ಜಾರಿ - 50 ಕೋಟಿ ಜನರಿಗೆ ಲಾಭ, 5 ಲಕ್ಷವರೆಗೆ ವಿಮೆ - ರಾಂಚಿಯಲ್ಲಿ ಪ್ರಧಾನಿಯಿಂದ ಚಾಲನೆ        ಆಂಧ್ರದಲ್ಲಿ ಹಾಡಹಗಲೇ ನಕ್ಸಲರ ಅಟ್ಟಹಾಸ - ಶಾಸಕ, ಮಾಜಿ ಶಾಸಕನ ಭೀಕರ ಹತ್ಯೆ - 50ಕ್ಕೂ ಹೆಚ್ಚು ನಕ್ಸಲರಿಂದ ರಕ್ತದೋಕುಳಿ       
Breaking News

ರೈಮ್​ ಗಳ ರಮ್ಯ ಲೋಕ

Saturday, 07.07.2018, 3:04 AM       No Comments

| ಬಿ.ಎನ್. ಧನಂಜಯಗೌಡ ಮೈಸೂರು

ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್

ಹೌ ಐ ವಂಡರ್ ವಾಟ್ ಯು ಆರ್

ಆಪ್ ಅಬೌ ದ ವರ್ಲ್ಡ್ ಸೋ ಹೈ

ಲೈಕ್ ಅ ಡೈಮಂಡ್ ಇನ್ ದ ಸ್ಕೆ ೖ

ಈ ಮೇಲಿನ ನಾಲ್ಕು ಸಾಲುಗಳನ್ನು ಓದುತ್ತಿದ್ದಂತೆ ಮಕ್ಕಳಿಗೆ ಮಾತ್ರವಲ್ಲದೆ ಹಿರಿಯರಿಗೂ ಈ ಪದ್ಯವೇ ಬಾಯಿಗೆ ಬಂದು ಬಿಡುತ್ತದೆ. ಇಂತಹ ಶಿಶು ಪದ್ಯಗಳನ್ನು (ನರ್ಸರಿ ರೈಮ್್ಸ) ಕೇಳಲು ಅದೆಷ್ಟೇ ವಯಸ್ಸಾದವರು ಇಷ್ಟಪಡುತ್ತಾರೆ, ಹಾಡುತ್ತಿದ್ದರೆ ತಾವು ಜತೆಗೆ ದನಿಗೂಡಿಸುತ್ತಾರೆ. ಇಂತಹ ಶಿಶು ಪದ್ಯಗಳನ್ನು ಮಕ್ಕಳಿಗೆ ಹೇಳಿಕೊಡುವುದರಿಂದ ಮತ್ತು ಅವರಿಂದ ಹಾಡಿಸುವುದರಿಂದ ಮಕ್ಕಳನ್ನು ಮಾತನಾಡಲು ಪ್ರೇರೇಪಿಸುವುದು ಮಾತ್ರವಲ್ಲದೆ ಭವಿಷ್ಯದಲ್ಲಿ ಭಾಷೆಯ ಮೇಲೆ ಹಿಡಿತ ಸಾಧಿಸುವಂತೆಯೂ ಮಾಡುವ ಶಕ್ತಿಯನ್ನು ಇದು ಹೊಂದಿದೆ.

ಶಿಶು ಪದ್ಯಗಳು ಅಥವಾ ನರ್ಸರಿ ರೈಮ್್ಸ ಗಳು ಕೇಳಲು ಮತ್ತು ಹಾಡಲು ಮಾತ್ರ ಚಂದ ಮತ್ತು ಸಂತೋಷ ನೀಡುತ್ತದೆ ಎಂದು ಮಾತ್ರ ಭಾವಿಸಿದರೆ ತಪ್ಪು. ಇದನ್ನು ಮೀರಿಯೂ ಶಿಶು ಪದ್ಯಗಳು ಮಕ್ಕಳ ಶೈಕ್ಷಣಿಕ ಭವಿಷ್ಯ ಮತ್ತು ಸಂವಹನ ಕೌಶಲ ವೃದ್ಧಿಸುವಲ್ಲೂ ಮಹತ್ವ ಪಡೆದಿವೆ.

ನಾಯಿ ಮರಿ, ನಾಯಿ ಮರಿ ತಿಂಡಿ ಬೇಕೆ?

ತಿಂಡಿಬೇಕು ತೀರ್ಥಬೇಕು ಎಲ್ಲ ಬೇಕು

ನಾಯಿ ಮರಿ ನಿಂಗೆ ತಿಂಡಿ ಏಕೆ ಬೇಕು

ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು..

ಎಂಬ ಸಾಲುಗಳನ್ನು ಮಕ್ಕಳು ಹೇಳುತ್ತಿದ್ದಂತೆ ಅವರಲ್ಲಿ ನಾಯಿ, ತಿಂಡಿ ಇದೇ ಚಿತ್ರಗಳು ಮೂಡುತ್ತವೆ.

ಈ ಸಾಲಿಗೆ ಅನುಗುಣವಾಗಿ ಸನ್ನಿವೇಶಗಳನ್ನು ಊಹಿಸಿಕೊಳ್ಳುತ್ತಾರೆ. ಇದರಿಂದ ಕಲ್ಪನಾಶಕ್ತಿ ಬೆಳವಣಿಗೆ ಪ್ರಾರಂಭವಾಗುತ್ತದೆ. ಪ್ರಾರಂಭದಲ್ಲಿ ಉಚ್ಚಾರಣೆಯಲ್ಲಿ ಎಡರು ತೊಡರು ಇದ್ದರೂ ನಿರಂತರವಾಗಿ ಪದ್ಯಗಳನ್ನು ಹೇಳುತ್ತಿದ್ದಂತೆ ಪದಗಳ ಉಚ್ಚಾರದ ಮೇಲು ಹಿಡಿತ ಬರುತ್ತದೆ. ಅಲ್ಲದೆ ಇದರಿಂದ ಮಕ್ಕಳಿಗೆ ಶಬ್ದಕೋಶದ ಒಂದೊಂದೇ ಹೊಸ ಹೊಸ ಪದಗಳ ಪರಿಚಯವಾಗುತ್ತದೆ.

ಮಕ್ಕಳು ಬೆಳೆದಂತೆಲ್ಲ ಅವರ ಮನಸ್ಸು ಸ್ವಾಭಾವಿಕವಾಗಿ ಪದಗಳ ಅರ್ಥ ತಿಳಿಯಲು ಹಾತೊರೆಯುತ್ತವೆ. ಅವರ ಭಾಷೆ ಮತ್ತು ಸಂವಹನ ಕೌಶಲ ಅಭಿವೃದ್ಧಿ ಉತ್ತಮವಾಗಿ ಸಾಗುತ್ತದೆ. ಮಕ್ಕಳು ಇಂತಹ ಪದ್ಯಗಳನ್ನು ಹೇಳುವಾಗ ಅವರ ಅಂಗಾಭಿನಯಗಳು ಮುಖ್ಯ. ಇಂತಹ ಪದ್ಯಗಳನ್ನು ಮಕ್ಕಳು ರಾಗವಾಗಿ ಹೇಳುತ್ತಾ, ಅಭಿನಯಿಸುವುದರಿಂದ ಭವಿಷ್ಯದಲ್ಲಿ ಅವರ ಮಾತಿಗೆ ತಕ್ಕಂತೆ ಸ್ವಾಭಾವಿಕವಾಗಿ ಅಂಗ ರಚನೆಗಳು ಮೂಡುತ್ತವೆ.

ಮಕ್ಕಳ ಪದ್ಯಗಳನ್ನು ಹೆಚ್ಚು ಹೆಚ್ಚು ಹೇಳಿಕೊಡುವುದರಿಂದ ಮಕ್ಕಳಲ್ಲಿ ಶಬ್ದಗಳ ಗುರುತಿಸುವಿಕೆ, ಭಾಷಣ ಕಲೆಗೂ ಹೆಚ್ಚು ಸಹಕಾರಿಯಾಗುತ್ತದೆ. ಆದ್ದರಿಂದ ಇಂಗ್ಲಿಷ್ ಶಿಕ್ಷಣ ಸಂಸ್ಥೆಗಳು ಮಕ್ಕಳ ಪದ್ಯಗಳಿಗೆ ಬೋಧನಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ಅದನ್ನು ಮಕ್ಕಳ ಆರಂಭಿಕ ಶಿಕ್ಷಣದ ಮುಖ್ಯ ವಿಧಾನವಾಗಿ ಪರಿಗಣಿಸಿದೆ.

ರೈಮ್ಸ್​ ಕಲಿಕೆಯ ಉಪಯೋಗ

ಶಾಲೆಗೆ ಬರಲು ಹಠ ಮಾಡುವ ಸಣ್ಣ ಮಕ್ಕಳನ್ನು ಶಾಲೆಯತ್ತ ಸೆಳೆಯುತ್ತದೆ.

ಖುಷಿ ನೀಡುವ ಮೂಲಕ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸುತ್ತದೆ.

ಕೇಳುವ, ಮಾತನಾಡುವ, ಓದುವ, ಹಾಡುವ, ಬರೆಯುವ ಚಟುವಟಿಕೆ ಬೆಳವಣಿಗೆಗೆ ಅಗತ್ಯವಾಗಿದೆ.

ಮಕ್ಕಳಲ್ಲಿ ಕಲ್ಪನಾಶೀಲತೆ ವೃದ್ಧಿಸುತ್ತದೆ.

ಶಿಕ್ಷಕರ ಗಮನಕ್ಕೆ..

  • ಇದು ಮಗುವಿಗೆ ಖುಷಿ ನೀಡುವ ಮನರಂಜನೆಯಂತಿರಬೇಕು. ಹಾಸ್ಯದ ಅಂಶಗಳು ಪ್ರಮುಖವಾಗಿರಬೇಕು. ಇದರಿಂದ ಸಂವೇದನಾತ್ಮಕ ಅನುಭವಗಳು, ಭಾವನೆಗಳು ಮತ್ತು ಆಲೋಚನೆಗಳು ಹುಟ್ಟುತ್ತವೆ. ಸಂತೋಷದಿಂದ ಆರಂಭವಾಗುವ ಪದ್ಯಗಳು ಹೆಚ್ಚು ನೆನಪಿನಲ್ಲಿ ಉಳಿಯುತ್ತವೆ.
  • ಕಲಿಕೆಗೆ ಪೂರಕವಾದ ಕೌಶಲಗಳಲ್ಲಿ ಆಲಿಸುವುದು ಪ್ರಮುಖವಾಗಿದೆ. ಏಕೆಂದರೆ ಯಾವುದೇ ಸಾಲು, ಪಾಠ, ಪ್ರವಚನಗಳನ್ನು ಸರಿಯಾಗಿ ಆಲಿಸಿ, ಗ್ರಹಿಸಿದಾಗ ಮಾತ್ರ ಸಂದೇಶವನ್ನು ಅರ್ಥೈಸಿಕೊಳ್ಳಲು ಸಾಧ್ಯ. ಆದ್ದರಿಂದ, ಮಕ್ಕಳಿಗೆ ಆಲಿಸುವ ಮತ್ತು ಗ್ರಹಿಸುವ ರೀತಿಯನ್ನು ಕಲಿಸಬೇಕು.
  • ನರ್ಸರಿ ರೈಮ್ಸ್​ಗಳಲ್ಲಿ ಪದಬಳಕೆ, ಉಚ್ಛಾರ, ಲಯ ಬದ್ಧತೆ ಮುಖ್ಯವಾಗಿರುತ್ತದೆ. ಮಕ್ಕಳು ಶಬ್ದ ಮತ್ತು ಪದಗಳನ್ನು ಕಲಿಯುವ ಪ್ರಾರಂಭಿಕ ಹಂತವಾದ್ದರಿಂದ ಪದ್ಯಗಳು ಮತ್ತು ಅದರ ಪದಗಳು ಸುಲಭವಾಗಿರಲಿ, ಹೆಚ್ಚು ಪ್ರಾಸದಿಂದ ಕೂಡಿರಲಿ.
  • ಹೇಳಿಕೊಡುವವರು ಪದಗಳ ಉಚ್ಛಾರಣೆ ತಪ್ಪು ಮಾಡಿದಲ್ಲಿ, ಮಕ್ಕಳು ಅವುಗಳನ್ನೆ ಬಳಸಬಹುದು ಆದ್ದರಿಂದ ವ್ಯಂಜನಗಳು ಮತ್ತು ಸ್ವರಗಳನ್ನು ಉಚ್ಚರಿಸುವಾಗ ಜಾಗರೂಕರಾಗಿರಬೇಕು. ಪದ್ಯಗಳನ್ನು ಲಯಬದ್ಧವಾಗಿ ಹೇಳುವುದು ಪದ್ಧತಿಯಾಗಿದ್ದು, ಇದು ಮಕ್ಕಳನ್ನು ಕಲಿಕೆಗೆ ಪ್ರೋತ್ಸಾಹಿಸುತ್ತದೆ.
  • ಇಂತಹ ಪದ್ಯಗಳನ್ನು ಹೇಳಿಕೊಡುವಾಗ ಅಭಿನಯಿಸುವ ಮೂಲಕ ಹೇಳಿದರೆ. ಮಕ್ಕಳು ಗ್ರಹಿಸಲು ಮತ್ತು ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ.

 

ಶಿಕ್ಷಣ ಸಂಸ್ಥೆಗಳ ನಂಬಿಕೆ

ಮಕ್ಕಳು ಭಾಷೆಯನ್ನು ಅತ್ಯಂತ ಸಂತೋಷಕರವಾಗಿ ಕಲಿಯಲು ನರ್ಸರಿ ರೈಮ್್ಸ ಉತ್ತಮ ವಿಧಾನವೆಂದು ಇಂಗ್ಲಿಷ್ ಶಿಕ್ಷಣ ಸಂಸ್ಥೆಗಳು ಪರಿಗಣಿಸಿವೆ. ಅಮೆರಿಕಾ, ಇಂಗ್ಲೆಂಡ್​ನಲ್ಲಿ ಇಂಗ್ಲಿಷ್ ಭಾಷೆಯ ಸರಳತೆ ಮತ್ತು ಚೆಲುವನ್ನು ಪರಿಚಯಿಸಲು ನರ್ಸರಿ ರೈಮ್್ಸ ಅನುಕೂಲವಾಗಿದೆ. ಪದ್ಯಗಳನ್ನು ಗಟ್ಟಿಯಾಗಿ ಓದುವುದರಿಂದ ಭಾಷೆ ಮತ್ತು ರಾಗವು ಉತ್ತಮವಾಗಿ ವೃದ್ಧಿಯಾಗಿ ಭಾಷಾ ಕೌಶಲ ಸುಧಾರಿಸುತ್ತದೆ ಎಂಬ ದೃಢ ನಂಬಿಕೆ ಹೊಂದಿದ್ದಾರೆ.

Leave a Reply

Your email address will not be published. Required fields are marked *

Back To Top