Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ನಂದಿನಿಯ ಸ್ಕೇಟಿಂಗ್ ನಾಗಾಲೋಟ

Saturday, 07.07.2018, 3:03 AM       No Comments

| ಇಮಾಮಹುಸೇನ್ ಗೂಡುನವರ

ಬೆಳಗಾವಿ: ಆಕೆಗೆ ಸಿಗುವುದು ವಾರಕ್ಕೆ ಎರಡೇ ತರಬೇತಿ. ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಅಷ್ಟಕಷ್ಟೇ. ಆದರೆ, ಕಾಲಿಗೆ ಸ್ಕೇಟಿಂಗ್​ವ್ಹೀಲ್ ಕಟ್ಟಿಕೊಂಡು, ಹತ್ತಾರು ಕಿಮೀ ಓಡಬೇಕು ಎಂಬ ಹಂಬಲ ಆ ಪೋರಿಯದು. ಈ ಹಂಬಲದಿಂದಲೇ ಈಕೆ ಯಶಸ್ಸಿನ ದಡಕ್ಕೆ ಬಂದು ನಿಂತಿದ್ದಾಳೆ. ಅವಳೇ ನಂದಿನಿ ನಾಗರಾಜ ಕೋಲೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಿಎಲ್​ಇ ಸೊಸೈಟಿಯ ಕೆ.ಕೆ. ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿ.

ರಾಷ್ಟ್ರ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಿಂಚುತ್ತಿರುವ ಈ ಪೋರಿ, ಇತ್ತೀಚೆಗೆ ಬೆಳಗಾವಿಯಲ್ಲಿ ಶಿವಗಂಗಾ ಸ್ಕೇಟಿಂಗ್ ಅಕಾಡೆಮಿ ಆಯೋಜಿಸಿದ್ದ 72 ಗಂಟೆಗಳ ನಿರಂತರ ವರ್ಲ್ಡ್ ರೆಕಾರ್ಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು, ಮತ್ತಷ್ಟು ಸಾಧನೆಯ ಮುನ್ಸೂಚನೆ ನೀಡಿದ್ದಾಳೆ. ಈ ಹಿಂದೆ ಮಹಾರಾಷ್ಟ್ರದ ಇಚಲಕರಂಜಿ ಹಾಗೂ ಬೆಳಗಾವಿಯಲ್ಲೇ ನಡೆದಿದ್ದ ಹಲವು ಸ್ಕೇಟಿಂಗ್ ಸ್ಪರ್ಧೆಯಲ್ಲೂ 3,4ನೇ ಸ್ಥಾನ ಪಡೆದು, ಪದಕಗಳನ್ನು ಬೇಟೆಯಾಡಿದ್ದಾಳೆ. ಮುಂಬರುವ ದಿನಗಳಲ್ಲಿ ಸ್ಕೇಟಿಂಗ್​ನಲ್ಲೇ ಇನ್ನಷ್ಟು ಸಾಧನೆ ಮಾಡಬೇಕು ಎಂಬ ಬಯಕೆ ಇವಳದು. ಆದರೆ ಬಾಲಕಿಯ ಅಭ್ಯಾಸಕ್ಕೆ ಬಡತನ ಅಡ್ಡಿಯಾಗಿದೆ. ಈಕೆಯ ತಂದೆ ನಾಗರಾಜ ಇಲೆಕ್ಟ್ರಿಕ್ ವೈರಿಂಗ್ ಕೆಲಸಗಾರ. ತಾಯಿ ಗೃಹಿಣಿ. ಮತ್ತೊಬ್ಬ 3 ವರ್ಷದ ಸಹೋದರನಿದ್ದಾನೆ. 6 ವರ್ಷದವಳಿದ್ದಾಗಲೇ ಸ್ಕೇಟಿಂಗ್​ನತ್ತ ಒಲವು ಬೆಳೆಸಿಕೊಂಡ ನಂದಿನಿ, ಈಗ ಸ್ಕೇಟಿಂಗ್​ನಲ್ಲೇ ಅತ್ಯುತ್ತಮ ಸಾಧನೆಗೆ ತವಕಿಸುತ್ತಿದ್ದಾಳೆ.

ಉತ್ತಮ ಗುಣಮಟ್ಟದ ಸ್ಕೇಟಿಂಗ್ ವ್ಹೀಲ್ ಕೊಡಿಸಬೇಕೆಂಬ ಆಸೆ ಇದೆ. ಆದರೆ, ಕಡಿಮೆ ಮೊತ್ತದ ಹಳೆಯ ಸ್ಕೇಟಿಂಗ್ ವ್ಹೀಲ್ ಅನ್ನೇ ಕಟ್ಟಿಕೊಂಡು ರಿಂಗ್​ಗೆ ಧುಮುಕುತ್ತಿದ್ದಾಳೆ.

| ನಾಗರಾಜ ಕೋಲೆ ನಂದಿನಿಯ ತಂದೆ

Leave a Reply

Your email address will not be published. Required fields are marked *

Back To Top