Saturday, 20th October 2018  

Vijayavani

ಚೀಪ್ ಮೆಂಟಾಲಿಟಿ ನನಗಿಲ್ಲ - ಇದರ ಹಿಂದೆ ಕೈವಾಡ ಇರಬಹುದು - ನಟಿ ಶ್ರುತಿ ಹರಿಹರನ್ ಆರೋಪ ತಳ್ಳಿಹಾಕಿದ ಅರ್ಜುನ್ ಸರ್ಜಾ        ಸ್ಯಾಂಡಲ್​ವುಡ್​​ನಲ್ಲಿ ಮೀ ಟೂ - ನಾಳೆ ಸುದ್ದಿಗೋಷ್ಠಿಯಲ್ಲಿ ಶ್ರುತಿ ಹಾಕ್ತಾರಾ ಬಾಂಬ್ - ನಟಿ ವಿರುದ್ಧ ಗುಡುಗಿದ ಅರ್ಜುನ್ ಸರ್ಜಾ ಅತ್ತೆ        ಧರ್ಮ ವಿಚಾರದಲ್ಲಿ ಡಿಕೆಶಿ ಕ್ಷಮೆಯಾಚನೆಗೆ ಸಿದ್ದು ಸಿಟ್ಟು - ಒಂದೇ ವೇದಿಯಲ್ಲಿದ್ರೂ ಮುಖ ಮುಖ ನೋಡಲಿಲ್ಲ - ಜಂಟಿ ಸುದ್ದಿಗೋಷ್ಠಿಯಲ್ಲಿ ನಾಯಕರ ಮಹಾ ಮುನಿಸು        ಜೆಡಿಎಸ್‌, ಕಾಂಗ್ರೆಸ್‌ನ ಸುದ್ದಿಗೋಷ್ಠಿ - ಕಾಂಗ್ರೆಸ್‌, ಜೆಡಿಎಸ್‌ ಜಂಟಿ ಸಮರಕ್ಕೆ ಬಿಜೆಪಿ ವ್ಯಂಗ್ಯ- ಟ್ವೀಟ್‌ ಮೂಲಕ ಟಾಂಗ್‌        ಒಂದೇ ಮನಸ್ಸು ಎರಡು ದೇಹ ಅಂದ್ರು ಸಿಎಂ - ಈ ಜನ್ಮದಲ್ಲಿ ಗೌಡ್ರು-ಸಿದ್ದು ಒಂದಾಗಲ್ಲ ಅಂದ್ರು ಕಾರಜೋಳ - ದೋಸ್ತಿಗಳಿಗೆ ಬಿಜೆಪಿ ನಾಯಕರ ಟಕ್ಕರ್        ಗದಗಿನ ತೋಂಟದಾರ್ಯ ಶ್ರೀಗಳು ಲಿಂಗೈಕ್ಯ - ಹೃದಯಾಘಾತದಿಂದ ಗದಗ್‌ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶ - ನಾಳೆ ಗದಗದಲ್ಲಿ ಅಂತ್ಯಕ್ರಿಯೆ       
Breaking News

ಎಳವೆಯಲ್ಲೇ ಮಿನುಗಿದ ಅಮೋಘ ‘ನಕ್ಷತ್ರ’

Saturday, 11.08.2018, 3:04 AM       No Comments

ಡ್ರಾಮಾ ಜ್ಯೂನಿಯರ್ ಸೀಸನ್-2 ನೋಡಿದವರಿಗೆ ಅಮೋಘಕೃಷ್ಣ ಚಿರಪರಿಚಿತ. ಐದನೇ ವಯಸ್ಸಿಗೆ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಬಣ್ಣ ಹಚ್ಚಿದ ಈತ, ಪ್ರಖ್ಯಾತಿ ಪಡೆದದ್ದು ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದ ಮೂಲಕ. ಪ್ರಸ್ತುತ ಬೆಂಗಳೂರಿನ ಯಲಹಂಕದ ಪೂರ್ಣಪ್ರಜ್ಞ ಎಜುಕೇಶನ್ ಸೆಂಟರ್​ನಲ್ಲಿ 6ನೇ ತರಗತಿ ವಿದ್ಯಾರ್ಥಿಯಾಗಿರುವ ಈತ ಎಚ್.ಯು. ವಿದ್ಯಾಶಂಕರ ಮತ್ತು ಟಿ.ಡಿ. ಪೂರ್ಣಿಮಾ ದಂಪತಿಯ ಪುತ್ರ.

ಶೈಕ್ಷಣಿಕ ಚಟುವಟಿಕೆಯಲ್ಲಿ ಕೂಡ ಮುಂದಿ ರುವ ಅಮೋಘನಿಗೆ ಪ್ರತಿ ವರ್ಷ ಆರೆಂಟು ಬಹುಮಾನಗಳು ಗ್ಯಾರಂಟಿ. ಶಾಲೆಯಿಂದ ‘ಮಿನುಗುವ ನಕ್ಷತ್ರ’ ಎಂಬ ಬಿರುದು ಪಡೆದಿದ್ದಾನೆ. ಶಾಲಾ ಮಕ್ಕಳಿಗಾಗಿ ಇಸ್ಕಾನ್ ಸಂಸ್ಥೆ ನಡೆಸುವ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಸತತ 8 ವರ್ಷಗಳ ಕಾಲ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ‘ಹೊಳೆಯುವ ನಕ್ಷತ್ರ’ ಎಂಬ ಬಿರುದು ತನ್ನದಾಗಿಸಿಕೊಂಡ ಹೆಗ್ಗಳಿಕೆ ಈ ಬಾಲಕನದು. ಇಷ್ಟೇ ಅಲ್ಲದೆ ವೇದ ಪಠಣ, ಮಂತ್ರ, ಭಗವದ್ಗೀತೆ ಕಂಠಪಾಠ, ಚಿತ್ರ ಬಿಡಿಸುವುದು, ಚುಟುಕುಗಳನ್ನು ಬರೆಯುವುದರಲ್ಲೂ ಸೈ ಎನಿಸಿಕೊಂಡಿದ್ದಾನೆ. ಇಲ್ಲಿಯವರೆಗೆ 25ಕ್ಕೂ ಹೆಚ್ಚು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ಸಾಧನೆ ಇವನದು. ಆಕಾಶವಾಣಿಯ 101.3 ಕಂಪನಾಂಕದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಅತಿಥಿ ಭಾಷಣಕಾರನಾಗಿ ಸುಮಾರು 2 ಗಂಟೆಗಳ ಕಾಲ ಮಾತನಾಡಿದ ಕೀರ್ತಿಗೂ ಅಮೋಘಕೃಷ್ಣ ಪಾತ್ರನಾಗಿದ್ದಾನೆ.

ಮುಡಿಗೇರಿದ ಪ್ರಶಸ್ತಿ

ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನಿಂದ ಕರ್ನಾಟಕ ಭೂಷಣ ರಾಜ್ಯ ಪ್ರಶಸ್ತಿ, ತೆಲಂಗಾಣ ಸರ್ಕಾರದಿಂದ ನವ್ಯ ನಾಟಕ ಪ್ರಶಸ್ತಿ, ಮಲ್ಲೇಶ್ವರದ ಲಾಸ್ಯ ವರ್ಧನದಿಂದ ಕೇಶವಕಲ್ಪ ಪ್ರಶಸ್ತಿ, ಜಿಎಂಆರ್ ಟ್ರಸ್ಟ್ ಏರ್ಪಡಿಸಿದ್ದ ನೃತ್ಯ ಮತ್ತು ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ತೃತೀಯ ಬಹುಮಾನ ಹಾಗೂ ಉದಯಭಾನು ಕಲಾಸಂಘದಿಂದ ಗೋಪಿನಾಥದಾಸ ನ್ಯಾಸ ಪ್ರಶಸ್ತಿ, ಸುರ್ವೆ ಕಲ್ಚರಲ್ ಅಕಾಡೆಮಿಯಿಂದ ಕುವೆಂಪು ಪ್ರಶಸ್ತಿ ಪಡೆದಿದ್ದಾನೆ.

ಸಾಧಕರಿಗೊಂದು ವೇದಿಕೆ

ನಿಮ್ಮನೆ, ನಿಮ್ಮೂರಲ್ಲೂ ಇಂತಹ ಅಸಾಮಾನ್ಯ ಪ್ರತಿಭೆಗಳಿದ್ದರೆ ನಮಗೆ ಮಾಹಿತಿ ನೀಡಿ. ವಿಜಯವಾಣಿ ಪುಟಾಣಿ ಪುರವಣಿಯಲ್ಲಿ ಪ್ರಕಟಿಸುತ್ತೇವೆ. ನೆನಪಿರಲಿ ಪುಟಾಣಿ ವಯಸ್ಸು 12 ವರ್ಷ ಮೀರಿರಬಾರದು.

ನಮ್ಮ ವಿಳಾಸ: ಸಂಪಾದಕರು, ಭಲೇ ಪುಟಾಣಿ ವಿಭಾಗ ಪುಟಾಣಿ ಪುರವಣಿ, ವಿಜಯವಾಣಿ, ನಂ.24, ಸಾಯಿರಾಂ ಟವರ್ಸ್, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18.

Leave a Reply

Your email address will not be published. Required fields are marked *

Back To Top