Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಗೂಡು ನೇಯುವ ಕಲೆಗಾರ ಸಿಂಪಿಗ

Saturday, 07.07.2018, 3:02 AM       No Comments

ಮೈಬಣ್ಣ ಪಾಚಿಹಸಿರು. ಹೊಟ್ಟೆ ಮತ್ತು ಎದೆಯ ಭಾಗ ಬಿಳಿ. ಗದೆಯಂತೆ ಎತ್ತಿಕೊಂಡಿರುವ ಬಾಲ, ತಿಳಿ ಗುಲಾಬಿ ಕಾಲುಗಳು… ಅದುವೇ ಸಿಂಪಿಗ ಹಕ್ಕಿ.

ಎಲೆಗಳನ್ನು ಒಂದಕ್ಕೊಂದು ಸೇರಿಸಿ ಕೈಯ್ಯಾರ ಅಥವಾ ಜೇಡರ ಬಲೆಯ ದಾರದೊಡನೆ ಒಗ್ಗೂಡಿಸಿ ಹೆಣೆದು ತೊಟ್ಟಿಲಿನಂತಹ ಗೂಡನ್ನು ಕಟ್ಟುವ ಪಕ್ಷಿಯ ಕಲೆಗೆ ಬೆರಗಾಗಲೇಬೇಕು. ಅಂದ ಹಾಗೆ ಈ ನೇಯುವ ಕಲೆಯಲ್ಲಿ ಹೆಣ್ಣು ಗಂಡನ್ನು ಮೀರಿಸುತ್ತದೆ. ಈ ಪುಟ್ಟ ಹಕ್ಕಿಗೆ ತನ್ನ ಕೌಶಲದಿಂದಲೇ ಸಿಂಪಿಗ, ರ್ದಜಿ ಹಕ್ಕಿ ಎಂಬೆಲ್ಲ ನಾಮಧೇಯಗಳು ದೊರಕಿವೆ.

ಕೀಟಗಳು, ಹುಳುಗಳು ಪ್ರಮುಖ ಆಹಾರವಾಗಿರುವ, ತುಂಬ ನಾಚಿಕೆಯ ಸ್ವಭಾವದ ಸಿಂಪಿಗವು ಪೊದೆಗಳಲ್ಲೇ ಹೆಚ್ಚಾಗಿ ಕಾಣಸಿಗುತ್ತದೆ. ಕೆಲ ನಿರ್ದಿಷ್ಟ ಹೂಗಳ ಮಕರಂದವನ್ನೂ ಸೇವಿಸುವ ಈ ಹಕ್ಕಿಗಳಿಗೆ ಮಾರ್ಚ್ ನಿಂದ ಡಿಸೆಂಬರ್​ವರೆಗಿನ ಅವಧಿ ಸಂತಾನೋತ್ಪತ್ತಿಯ ಕಾಲ. ಭಾರತ ಭೂಖಂಡ, ಚೀನಾ, ಮಲೇಷ್ಯಾ, ಜಾವಾದಲ್ಲಿ ಇವು ಕಂಡುಬರುತ್ತವೆ. ಒಮ್ಮೆ ಕೂಡಿದ ಮೇಲೆ ಜತೆಯಲ್ಲೇ ಬಾಳುವ ಸಿಂಪಿಗ ಜೋಡಿಗಳು, ಹಾವು, ಹಲ್ಲಿಗಳಂತಹ ಜೀವಿಗಳಿಂದ ತಮ್ಮ ಮೊಟ್ಟೆಗಳನ್ನು ರಕ್ಷಿಸಿಕೊಳ್ಳಲು ಎತ್ತರದಲ್ಲಿ ಗೂಡು ಕಟ್ಟುತ್ತವೆ. ಮರಗಳ ಎಲೆಗಳನ್ನು ಬಳಸುವುದರಲ್ಲಿ ಇವು ಎತ್ತಿದ ಕೈ. ಎಲೆಗಳ ಮಧ್ಯೆ ಗೂಡನ್ನು ಅಡಗಿಸಿ ಇಡುವ ಚಾಣಾಕ್ಷತನವೂ ಇವಕ್ಕಿದೆ. ಮೊದಲಿಗೆ ಎಲೆಗಳನ್ನು ಸೇರಿಸಿ ಹೆಣೆದು ಹೆಣ್ಣು ಸಿಂಪಿಗ ಕೊಟ್ಟೆ ತಯಾರಿಸುತ್ತದೆ. ಅತ್ಯಂತ ಸೂಕ್ಷ್ಮವಾದ ನೇಯ್ಗೆಯುಳ್ಳ ಈ ಕಾರ್ಯಕ್ಕೆ ಸುಮಾರು ಎರಡು ದಿನಗಳು ಬೇಕು. ನಂತರ ಗಂಡು ಹೆಣ್ಣುಗಳೆರಡೂ ಸೇರಿ ಹುಲ್ಲು, ಗರಿಕೆ, ಹತ್ತಿಯಂತಹ ವಸ್ತುಗಳನ್ನು ಬಳಸಿ ಗೂಡು ಕಟ್ಟುತ್ತವೆ. ಈ ಪುಟ್ಟ ಹಕ್ಕಿಯನ್ನು ಬೇಟೆಯಾಡಲು ಬರುವಂಥ ಶಿಕ್ರಾದಂತಹ ಶಿಕಾರಿ ಹಕ್ಕಿಗಳನ್ನು ಕಂಡ ಕೂಡಲೆ ಆಪತ್ತನ್ನು ಗ್ರಹಿಸಿ, ಒಂದೇ ಸಮನೆ ಕೂಗಿ ಇತರ ಹಕ್ಕಿಗಳನ್ನು ಎಚ್ಚರಿಸುತ್ತದೆ ಈ ಪುಟ್ಟ ಪಕ್ಷಿ.

Leave a Reply

Your email address will not be published. Required fields are marked *

Back To Top