Friday, 18th August 2017  

Vijayavani

1. ಕಾಂಗ್ರೆಸ್‌ನಲ್ಲಿ ಎಡಪಂಥಿಯರಿಗೆ ಮಾತ್ರ ಮಣೆ- ಚುನಾವಣಾ ತಂತ್ರಗಾರ ಕೈ ಗುಡ್‌ಬೈ- ಅಲ್ಪ ಸಂಖ್ಯಾತರರನ್ನ ಅತಿಯಾಗಿ ಓಲೈಸ್ತಿದ್ಯಾ ಕಾಂಗ್ರೆಸ್‌.? 2. ಜೆಡಿಎಸ್​ ಭಿನ್ನರಿಗೆಲ್ಲಾ ಇಲ್ಲಾ ಟಿಕೆಟ್​ – 3 ಕ್ಷೇತ್ರಗಳ ಟಿಕೆಟ್​​​​​​​​ಗೆ ಖಾತ್ರಿ ನೀಡದ ಖರ್ಗೆ- ತ್ರಿಶಂಕು ಸ್ಥಿತಿಯಲ್ಲಿ ಜೆಡಿಎಸ್​​​​​​ ಭಿನ್ನರ ಸ್ಥಿತಿ 3. ಸಿಲಿಕಾನ್ ಸಿಟಿಗೆ ಖತರ್ನಾಕ್​ ಗ್ಯಾಂಗ್​ ಎಂಟ್ರಿ- ಸೆಕ್ಯೂರಿಟಿ ಡ್ರೆಸ್​​​ನಲ್ಲಿ ಮಾಡ್ತಿದ್ದಾರೆ ಕಳ್ಳತನ- ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕೃತ್ಯ 4. ರಾಜೀನಾಮೆ ಬಳಿಕ ವಿಶಾಲ್‌ ಸಿಕ್ಕಾ ಮೊದಲ ಮಾತು- ನನ್ನ ಜೀವನದ ದುಃಖದ ವಿಚಾರ ಅಂತಾ ಬೇಸರ- ಅತ್ತ ನಾನು ಕಾರಣನಲ್ಲ ಎಂದ ನಾರಾಯಣ ಮೂರ್ತಿ 5. ಯುಪಿ ಆಸ್ಪತ್ರೆಯಲ್ಲಿ ಮಕ್ಕಳ ಸಾವು ಪ್ರಕರಣ- ಹೈಕೋರ್ಟ್‌ನಿಂದ ಯೋಗಿ ಸರ್ಕಾರಕ್ಕೆ ತರಾಟೆಗೆ- ಕೂಡಲೇ ವರದಿ ನೀಡಲು ಸೂಚನೆ
Breaking News :

ಚಹಾಕುಡಿಕೆ ಬೆಲೆ 3 ದಶಲಕ್ಷ ಡಾಲರ್!

Saturday, 14.01.2017, 4:00 AM       No Comments

| ಪ.ರಾಮಕೃಷ್ಣ ಶಾಸ್ತ್ರಿ, ಬೆಳ್ತಂಗಡಿ

ಇದು ಚಹಾ ತುಂಬುವ ಕ್ಯಾಟಲ್ ಅಥವಾ ಕುಡಿಕೆ. ನೋಡಲು ಮನ ಮೋಹಕವಾಗಿದೆ, ನಮ್ಮ ಮನೆಯಲ್ಲಿಯೂ ಒಂದು ಇರಲಿ ಎಂದು ಭಾವಿಸಿದರೆ ಅದೇನೂ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಅದರ ತಯಾರಿಕೆಗೆ ಬಳಸಿದ ವಸ್ತುಗಳ ಬೆಲೆ ಮೂರು ದಶಲಕ್ಷ ಡಾಲರ್! ಇಷ್ಟು ಬೆಲೆ ಬಾಳುವ ಚಹಾ ಕುಡಿಕೆ ಜಗತ್ತಿನಲ್ಲಿ ಇನ್ನೊಂದಿಲ್ಲ ಎಂದು ಈ ಸಾಲಿನ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಅಂಗೀಕರಿಸಲಾಗಿದೆ.

ಸುಂದರವಾದ ಈ ಕಲಾತ್ಮಕ ಚಹಾ ಕುಡಿಕೆಗೆ ಇಷ್ಟೊಂದು ಬೆಲೆಯಾದರೂ ಯಾಕೆ? ಅದನ್ನು ತಯಾರಿಸಲು ಬಳಸಿದ ವಸ್ತುಗಳಾದರೂ ಏನೇನಿದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಬೆಳ್ಳಿ ಮತ್ತು 18 ಕ್ಯಾರೆಟ್ ಚಿನ್ನವನ್ನು ಉಪಯೋಗಿಸಿ ಈ ಚಹಾ ಕುಡಿಕೆಯನ್ನು ಸಿದ್ಧ ಮಾಡಲಾಗಿದೆ. ಇದರಲ್ಲಿ ಬಣ್ಣಬಣ್ಣದ 1658 ವಜ್ರದ ತುಣುಕುಗಳನ್ನು ಅಳವಡಿಸಿರುವುದರಿಂದ ಅದರ ಫಳಫಳ ಬೆಳಕು ಕಂಡು ‘ಇದು ಆಗ್ನೇಯ ಏಷ್ಯಾದ ಹೊಳೆಯುವ ಸೂರ್ಯ’ ಎಂದು ಎಲ್ಲರೂ ಹೊಗಳಿದ್ದಾರೆ. ಕುಡಿಕೆಯಲ್ಲಿ 386 ಮಾಣಿಕ್ಯಗಳಿವೆ. 20, 70 ಕ್ಯಾರೆಟ್ ಭಾರವಿರುವ ಕೆಂಪು ಹರಳು ಶಿರೋಭಾಗದಲ್ಲಿ ಎದ್ದು ಕಾಣುತ್ತಿದೆ. ಮಧ್ಯ ಭಾಗದಲ್ಲಿಯೂ ಅತಿ ಅಮೂಲ್ಯವಾದ ಥಾಯ್ ಕೆಂಪು ರತ್ನವನ್ನು ಕೂಡಿಸಲಾಗಿದೆ. ಇದರ ತೂಕ 6, 67 ಕ್ಯಾರೆಟ್ ಇದೆ. ಕುಶಲ ಕೆಲಸಗಾರರು ಈ ಕುಡಿಕೆಯನ್ನು ನಿರ್ವಿುಸಲು ಆರು ತಿಂಗಳು ಶ್ರಮಪಟ್ಟರು. ಅಂದಹಾಗೆ ಈ ಅಮೂಲ್ಯ ವಸ್ತುವಿನ ಸೃಷ್ಟಿಗೆ ಕಾರಣರಾದವರು ಭಾರತೀಯ ಮೂಲದ ಲಂಡನ್ನಿನಲ್ಲಿರುವ ಮೋಸಿಮನ್ ರೆಸ್ಟೋರೆಂಟಿನ ನಿರ್ಮಲ್ ಸೇಥಿ ಹಾಗೂ ಅವರ ಪತ್ನಿ ಚಿತ್ರಾ ಸೇಥಿ. ಚಿತ್ತ ಸೆಳೆಯುವ ಚಹಾ ಕುಡಿಕೆಯ ಮೋಹಕ ಹಿಡಿಕೆ ಆನೆ ದಂತದಿಂದ ತಯಾರಾಗಿದೆ.

 

Leave a Reply

Your email address will not be published. Required fields are marked *

Back To Top