Thursday, 20th September 2018  

Vijayavani

Breaking News

200 ರೂ. ಸಾಲ ಮಾಡಿ ಖರೀದಿಸಿದ್ದ ಟಿಕೆಟ್​ಗೆ 1.50 ಕೋಟಿ ರೂ. ಲಾಟರಿ

Saturday, 15.09.2018, 2:08 AM       No Comments

ಮಾಂಡವಿ(ಪಂಜಾಬ್): ಪಂಜಾಬ್​ನ ಸಂಗ್ರೂರ್ ಜಿಲ್ಲೆಯ ಮಾಂಡವಿ ಗ್ರಾಮದ ದಿನಗೂಲಿ ಕಾರ್ವಿುಕ ದಂಪತಿ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ನೆರೆ ಮನೆಯವರಿಂದ 200 ರೂ. ಸಾಲ ಪಡೆದು ಖರೀದಿಸಿದ್ದ ಲಾಟರಿ ಟಿಕೆಟ್​ಗೆ 1.50 ಕೋಟಿ ರೂ. ಬಹುಮಾನ ಬಂದಿದೆ. ಇಟ್ಟಿಗೆ ತಯಾರಿಕಾ ಘಟಕದಲ್ಲಿ ದಿನಗೂಲಿ ಕಾರ್ವಿುಕರಾಗಿರುವ ಮನೋಜ್ ಮತ್ತು ಪತ್ನಿ ರಾಜ್ ಕೌರ್ ಕಡು ಬಡತನದಲ್ಲಿ ಸಂಸಾರ ಸಾಗಿಸುತ್ತಿದ್ದರು. ವರ್ಷಕ್ಕೆ ಆರು ತಿಂಗಳು ಮಾತ್ರ ದಿನಗೂಲಿ ಸಂಪಾದನೆ ದೊರೆಯುತ್ತಿತ್ತು. ಹಣಕಾಸು ತೊಂದರೆ ಕಾರಣ ಮಗಳ ವಿದ್ಯಾಭ್ಯಾಸ ಮೊಟಕು ಮಾಡಬೇಕಾದ ಸ್ಥಿತಿಯಲ್ಲಿದ್ದರು. 200 ರೂ. ಸಾಲ ಪಡೆದು ಅದೃಷ್ಟ ಪರೀಕ್ಷಿಸುವುದಾಗಿ ಮಗಳಿಗೆ ಮನೋಜ್ ತಿಳಿಸಿದ್ದರು. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top