Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಆದಾಯ ತೆರಿಗೆಯಲ್ಲಿ ವಿನಾಯಿತಿ ಬೇಕಿತ್ತು

Friday, 02.02.2018, 3:05 AM       No Comments

1 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ರಾಜಧಾನಿ ಬೆಂಗಳೂರಿನಲ್ಲಿ ಎಷ್ಟೇ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರೂ ‘ಇನ್ನೂ ಬೇಕು..’ ಎಂಬ ಬಯಕೆ ಇದ್ದದ್ದೇ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಮಂಡಿಸಿದ 2018-19ರ ಸಾಲಿನ ಕೇಂದ್ರ ಮುಂಗಡಪತ್ರದಲ್ಲೂ ಈ ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಎಲ್ಲರನ್ನೂ ಏಕಕಾಲದಲ್ಲಿ ತೃಪ್ತಿಪಡಿಸಲು ಸಾಧ್ಯವಿಲ್ಲವಾದರೂ ಆ ನೆಲೆಯಲ್ಲಿ ಜೇಟ್ಲಿ ಪ್ರಾಮಾಣಿಕವಾಗಿ ಪ್ರತಿಸ್ಪಂದಿಸಿದ್ದಾರೆ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ಬಗ್ಗೆ ಬೆಂಗಳೂರಿಗರ ಪ್ರತಿಕ್ರಿಯೆಗಳು ಇಲ್ಲಿವೆ.


ಶಿಕ್ಷಣ, ಕೌಶಲಕ್ಕೆ ಒತ್ತು ಸ್ವಾಗತಾರ್ಹ

| ಅಬ್ದುಲ್ ಅಜೀಜ್ ಭಾರತೀಯ ರಾಷ್ಟ್ರೀಯ ಕಾನೂನು ಶಾಲೆ ವಿವಿಯ ಅಧ್ಯಾಪಕರು

ಈ ಸಲದ ಕೇಂದ್ರ ಬಜೆಟ್​ನಲ್ಲಿ ಬಡಜನರ ಅನುಕೂಲಕ್ಕಾಗಿ ಆರೋಗ್ಯ ವಿಮೆ ಜಾರಿಗೆ ತಂದಿರುವುದು ಒಳ್ಳೆಯ ಕ್ರಮ. ಇದರ ಜತೆಗೆ ಶಿಕ್ಷಣಕ್ಕೆ ಒತ್ತು ಕೊಡಲಾಗಿದೆ. ಇದು ಅಭಿವೃದ್ಧಿಯ ಉತ್ತೇಜನ ಕ್ರಮವಾಗಿದೆ. ಬಿ.ಟೆಕ್ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ ಕಲ್ಪಿಸಿದೆ. ಪ್ರತಿ ಜಿಲ್ಲೆಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಪ್ರಾರಂಭಿಸಲು ಉದ್ದೇಶಿಸಿದೆ. ಆರೋಗ್ಯ, ಶಿಕ್ಷಣ ಹಾಗೂ ಕೌಶಲಕ್ಕೆ ಒತ್ತು ಕೊಟ್ಟಿರುವುದು ಸ್ವಾಗತಾರ್ಹ. ಈ ಎರಡು- ಮೂರು ಅಂಶಗಳನ್ನು ಗಮನಿಸಿದಾಗ ಕೇಂದ್ರ ಸರ್ಕಾರ ಈಗ ಸಾಮಾಜಿಕ ಮೂಲ ಸೌಕರ್ಯಗಳಿಗೆ ಪ್ರಾತಿನಿಧ್ಯ ನೀಡಿರುವುದು ಗೋಚರವಾಗುತ್ತದೆ. ಏಕೆಂದರೆ, ಮಾನವ ಸಂಪನ್ಮೂಲ, ಸಂಪತ್ತು ಬಹಳ ಮುಖ್ಯ. ಅದಕ್ಕೆ ಉತ್ತೇಜನ ನೀಡಲು ಬಜೆಟ್​ನಲ್ಲಿ ಅವಕಾಶ ನೀಡಿದಂತಾಗಿದೆ. ಈಗೀಗ ಬಡವರು ಮೊಬೈಲ್ ಹಾಗೂ ಟಿವಿಯನ್ನು ಹೆಚ್ಚು ಉಪಯೋಗಿಸುತ್ತಿದ್ದಾರೆ. ಅವುಗಳ ಮೇಲೆ ತೆರಿಗೆ ಹೆಚ್ಚಳ ಮಾಡಬಾರದಿತ್ತು. ಸಾಹುಕಾರರು ಉಪಯೋಗಿಸುವ ವಸ್ತುಗಳ ಮೇಲೆ ಹೆಚ್ಚು ತೆರಿಗೆ ಹೊರಿಸಬೇಕಿತ್ತು. ಬಡವರ ಮೇಲೆ ತೆರಿಗೆ ವಿಧಿಸುವುದು ಸರಿಯಲ್ಲ. ತೆರಿಗೆ ಸ್ಲಾಬ್​ಗಳಲ್ಲಿ ಬದಲಾವಣೆ ಮಾಡಬೇಕಿತ್ತು. ಈ ಹಿಂದೆ 3 ಲಕ್ಷ ರೂ. ವರೆಗಿನ ಆದಾಯಕ್ಕೆ ಯಾವುದೇ ರೀತಿಯ ತೆರಿಗೆ ಇಲ್ಲ ಎಂಬ ಕೂಗು ಕೇಳಿಬಂದಿತ್ತು. ಕೇಂದ್ರ ಸರ್ಕಾರ ಆ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಆದರೆ, 40 ಸಾವಿರ ರೂ. ಸ್ಟಾಂಡರ್ಡ್ ಡಿಡಕ್ಷನ್ ನೀಡಿರುವುದು ಅನುಕೂಲಕರವಾಗಿದೆ. ಮಧ್ಯಮವರ್ಗದ ಜನರಿಗೆ ಅನುಕೂಲವಾಗುವಂತೆ ಬಜೆಟ್ ಮಂಡನೆ ಮಾಡಬೇಕಿತ್ತು. ಏಕೆಂದರೆ, ಎಲ್ಲ ಕಡೆ ಮಧ್ಯಮವರ್ಗದ ಜನರಿಗೆ ಅನುಕೂಲಗಿಂತ ಅನಾನುಕೂಲವೇ ಹೆಚ್ಚಾಗಿದೆ. ಉಳಿದಂತೆ ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಘೋಷಿಸಿದೆ. ಆದರೆ, ಆ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವಂತೆ ಸರ್ಕಾರ ಕ್ರಮ ಕೈಗೊಳಬೇಕು.


ರೈತರ ಬೇಡಿಕೆ ಈಡೇರಿಲ್ಲ

ಕೇಂದ್ರ ಸರ್ಕಾರದ ಹಣಕಾಸಿನ ವ್ಯವಸ್ಥೆ ಆರೋಗ್ಯಕರ ಇಲ್ಲ ಎಂಬುದು ಈ ಬಜೆಟ್​ನಿಂದ ಸಾಬೀತಾಗಿದೆ. ಶಿಕ್ಷಣ, ಉದ್ಯಮ ಹಾಗೂ ಕಾರ್ಪೆರೇಟ್ ಕ್ಷೇತ್ರಗಳಿಗೆ ತುಸು ರಿಲೀಫ್ ಕೊಡಲಾಗಿದೆ. ಮೂಲಸೌಕರ್ಯ ಕ್ಷೇತ್ರಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಹಣ ಮೀಸಲಿಟ್ಟಿಲ್ಲ. ಸಾಲ ಮನ್ನಾ ಮಾಡಬೇಕು ಎಂಬ ರೈತರ ಬೇಡಿಕೆಯೂ ಈಡೇರಿಲ್ಲ. ರಾಜ್ಯಕ್ಕೆ ಹೊಸ ಯಾವುದೇ ಯೋಜನೆ ಕೊಟ್ಟಿಲ್ಲ. ಹೀಗಾಗಿ ಇದೊಂದು ನಿರಾಶಾದಾಯಕ ಬಜೆಟ್.

| ಡಾ.ಜಿ. ಪರಮೇಶ್ವರ ಕೆಪಿಸಿಸಿ ಅಧ್ಯಕ್ಷ

 


ವಾಸ್ತವಾಂಶ ತಿಳಿಸಿ

ಕೇಂದ್ರದ ಬಜೆಟ್ ಮತ್ತೊಂದು ದೊಡ್ಡ ಸೊನ್ನೆ. ನರೇಂದ್ರ ಮೋದಿ ಹಾಗೂ ಅಮಿತ್ ಷಾ ಬಗ್ಗೆ ವೈಭವೀಕರಿಸಿ ಚರ್ಚೆ ಮಾಡುವ ಮಾಧ್ಯಮಗಳು ಬಜೆಟ್ ಬಗ್ಗೆ ವಾಸ್ತವಾಂಶ ತಿಳಿಸಬೇಕು.

|ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ


ಏನಿಲ್ಲ…ಏನಿಲ್ಲ….!

ಏನಿದೆ ಬಜೆಟ್​ನಲ್ಲಿ? ಏನಾದರೂ ಇದ್ದರೆ ತಿಳಿಸಿ. ಕೇಂದ್ರ ಸರ್ಕಾರದ ಮೇಲಿನ ಬೆಟ್ಟದಷ್ಟು ನಿರೀಕ್ಷೆ ಹುಸಿಯಾಗಿದೆ. ರೈತರ ಸಾಲ ಮನ್ನಾ ಆಗಲಿದೆ, ದ್ರಾಕ್ಷಿ ಬೆಳೆಗಾರರಿಗೆ ಸಿಹಿ ಸುದ್ದಿ ಬರಲಿದೆ ಎಂದು ರೈತರು ನಿರೀಕ್ಷೆ ಇಟ್ಟುಕೊಂಡಿದ್ದರು. ಈಗ ನೋಡಿದರೆ ಏನಿಲ್ಲ್ಲ..ಏನಿಲ್ಲ..ಬಿಜೆಪಿ ಬಜೆಟ್​ನಲ್ಲಿ ಏನಿಲ್ಲವೆಂದು ಜನ ಗೊಣಗುತ್ತಿದ್ದಾರೆ. ನಿರುದ್ಯೋಗಿಗಳು ಕೊನೆಗೂ ಪಕೋಡಾ ಮಾರುವುದು ಅನಿವಾರ್ಯವಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರ ಮಾದರಿ ಬಜೆಟ್ ಮಂಡಿಸಲಿದೆ.

| ಎಂ.ಬಿ. ಪಾಟೀಲ್ ಜಲಸಂಪನ್ಮೂಲ ಸಚಿವರು

Leave a Reply

Your email address will not be published. Required fields are marked *

Back To Top