Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ಬೆಳಗಾವಿ-ಕಲಬುರಗಿಯಲ್ಲಿ ದುಬಾರಿ ಕಾರಿಗೆ ಬೆಂಕಿ ಇಡುತ್ತಿದ್ದ ಸೈಕೋ ಡಾಕ್ಟರ್ ಬಂಧನ

Thursday, 18.01.2018, 3:23 PM       No Comments

ಬೆಳಗಾವಿ: ಸುಖಾ ಸುಮ್ಮನೇ ದುಬಾರಿ ಕಾರುಗಳಿಗೆ ಬೆಂಕಿ ಇಡುತ್ತಿದ್ದ ಸೈಕೋ ವೈದ್ಯನೊಬ್ಬನನ್ನು ಬೆಳಗಾವಿ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.

ಈ ಸಂಬಂಧ ಬೆಳಗಾವಿ ಡಿಸಿಪಿ ಸೀಮಾ ಲಾಟಕಾರ ಸುದ್ದಿಗೋಷ್ಠಿ ನಡೆಸಿ ಸುಮಾರು 10 ದುಬಾರಿ ಕಾರಿಗೆ ಬೆಂಕಿ ಹಚ್ಚಿದ ಬಿಮ್ಸ್​ ವೈದ್ಯ ಡಾ. ಅಮಿತ್ ಗಾಕವಾಡ್​ನನ್ನು ಬಂಧಿಸಲಾಗಿದ್ದು, ಈತ ಕಲಬುರಗಿ ಮೂಲದವನು ಎಂದು ತಿಳಿಸಿದ್ದಾರೆ.

ಕಲಬುರ್ಗಿ ಹಾಗೂ ಬೆಳಗಾವಿಯಲ್ಲಿ ಕಾರುಗಳಿಗೆ ಬೆಂಕಿ ಹಚ್ಚಿದ್ದಾನೆ. ಈತ ಕೃತ್ಯಕ್ಕೆ ಡೀಸೆಲ್ ಹಾಗೂ ಕರ್ಪೂರಗಳನ್ನು ಬಳಸುತ್ತಿದ್ದ. ಮುಖಕ್ಕೆ ಹೆಲ್ಮೆಟ್ ಧರಿಸಿ ಕೃತ್ಯವನ್ನು ಎಸಗುತ್ತಿದ್ದ.

ಬೆಳಗಾವಿಯ ಸದಾಶಿವನಗರದ ವಿವೇಂತಾ ಅಪಾರ್ಟ್ಮೆಂಟ್ ನಲ್ಲಿ ಕಾರಿಗೆ ಬೆಂಕಿ ಹಚ್ಚುವಾಗ ಈತ ಸಿಕ್ಕಿ ಬಿದ್ದಿದ್ದಾನೆ. ಸಾರ್ವಜನಿಕರ ಸಹಾಯದಿಂದ ಆರೋಪಿಯನ್ನು ಬಂಧಿಸಲಾಗಿದೆ. ಇದಕ್ಕೂ ಮೊದಲು ಕಲಬುರಗಿಗೆ ತೆರಳಿ ಕಾರುಗಳಿಗೆ ಬೆಂಕಿ ಹಚ್ಚಿದ್ದ. ಕಲಬುರಗಿ ಪೊಲೀಸರು ಬೆಳಗಾವಿ ಪೊಲೀಸರಿಗೆ ಸಿಸಿಟಿವಿ ಕ್ಯಾಮರಾ ದೃಶ್ಯಗಳು ಸೇರಿದಂತೆ ಅನೇಕ ಮಾಹಿತಿಗಳನ್ನು ಹಂಚಿಕೊಂಡು ಕಿಡಿಗೇಡಿಯನ್ನು ಬಲೆಗೆ ಬೀಳಿಸಿದ್ದಾರೆ.

ದುಬಾರಿ ಕಾರುಗಳಿಗ್ಯಾಕೆ ಬೆಂಕಿ ಹಚ್ಚುತ್ತಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಈ ಸಂಬಂಧ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವಿದ್ಯಾವಂತ ಕುಟಂಬದ ಸದಸ್ಯ

ಉತ್ತಮ ಕುಟುಂಬದ ಹಿನ್ನೆಲೆ ಹೊಂದಿರುವ ಡಾ.ಅಮಿತ್ ಗಾಯಕವಾಡ್ ಪತ್ನಿ ಕೂಡಾ‌ ವೈದ್ಯೆ. ತಂದೆ ನಿವೃತ್ತ ಸರ್ಕಾರಿ ನೌಕರ. ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಅನೇಕರಿಗೆ ಅವಾಚ್ಯ ಸಂದೇಶಗಳನ್ನು ಕಳುಹಿಸಿದ್ದಾನಂತೆ. ಹೀಗಾಗಿ ಆತನನ್ನು ಅಮಾನತು ಮಾಡ‌ಲಾಗಿತ್ತಂತೆ.

 

 

Leave a Reply

Your email address will not be published. Required fields are marked *

Back To Top