Monday, 22nd January 2018  

Vijayavani

ಸರಹದ್ದು ಮೀರಿ ವರ್ತಿಸ್ತಿದೆ ಪಾಪಿ ಪಾಕ್​- ಐದು ದಿನಗಳಿಂದ ಗುಂಡಿನ ದಾಳಿಗೆ ಪರಿಸ್ಥಿತಿ ಉಲ್ಭಣ- ಗಡಿಯಲ್ಲಿ ಯುದ್ಧ ಸ್ಥಿತಿ ನಿರ್ಮಾಣ        ದಾವೋಸ್​ನಲ್ಲಿ 48ನೇ ವಿಶ್ವ ಆರ್ಥಿಕ ವೇದಿಕೆ ಸಮಾವೇಶ- ಸ್ವಿಸ್​ಗೆ ಹಾರಿದ ಪ್ರಧಾನಿ ಮೋದಿ- ವಿದೇಶಿ ಬಂಡವಾಳ ಸೆಳೆಯುವತ್ತ ಹಲವುಸೂತ್ರ        ಗ್ಯಾಸ್​ ರೀಫಿಲ್ಲಿಂಗ್ ವೇಳೆ ಲೀಕ್​ಆಗಿ ಹೊತ್ತಿಕೊಂಡ ಬೆಂಕಿ- ಆರು ಜನರಿಗೆ ಗಂಭೀರ ಗಾಯ- ಬೆಂಗಳೂರಿನಲ್ಲಿ ತಪ್ಪಿದ ಭಾರಿ ದುರಂತ        ಬೀದರ್​ನಲ್ಲಿ ವೀರಭದ್ರನ ಪಲ್ಲಕ್ಕಿ ಉತ್ಸವ- ಶಸ್ತ್ರಧಾರಣೆ ಮೂಲಕ ಭಕ್ತಿಯ ಪರಾಕಷ್ಠೆ- ಅತ್ತ ಮಂಗಳೂರಿನಲ್ಲಿ ಕಲವರದ ಪುತ್ತೂರು ಕಂಬಳ        ರಿಲೀಸ್​ ಡೇಟ್ ಫಿಕ್ಸ್​ ಆದ್ರೂ ಪದ್ಮಾವತ್​​ಗೆ ಸಂಕಷ್ಟ- 25ಕ್ಕೆ ಬಿಡುಗಡೆಯಾದ್ರೆ ದೇಶಾದ್ಯಂತ ಬಂದ್​- ಕರ್ಣಿಸೇನಾ ರಕ್ತಪಾತದ ಡೈಲಾಗ್​ಗೆ ಬೆವರಿದ ಬನ್ಸಾಲಿ       
Breaking News :

ಪಿಎಸ್​ಎಲ್​ವಿ ಸಿ-37 ರಾಕೆಟ್​ನ ಸೆಲ್ಫಿ ವೀಡಿಯೋ

Friday, 17.02.2017, 12:01 PM       No Comments

https://www.youtube.com/watch?v=f1l8r9iDI0Y&feature=youtu.be

ನವದೆಹಲಿ: ಏಕಕಾಲದಲ್ಲಿ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇಸ್ರೋ ವಿಶ್ವದ ಗಮನ ಸೆಳೆದಿದೆ. ಉಪಗ್ರಹ ಉಡಾವಣೆಯ ಪ್ರಕ್ರಿಯೆಯನ್ನು ರಾಕೆಟ್​ನಲ್ಲಿ ಅಳವಡಿಸಿದ ವಿಶೇಷ ಕ್ಯಾಮೆರಾದ ಮೂಲಕ ಇಸ್ರೋ ಸೆರೆ ಹಿಡಿದಿದೆ. ಇಸ್ರೋ ಬಿಡುಗಡೆ ಮಾಡಿರುವ ಪಿಎಸ್​ಎಲ್​ವಿ ರಾಕೆಟ್​ನ ಈ ಸೆಲ್ಪಿ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

5 ನಿಮಿಷ 32 ಸೆಕೆಂಡ್​ಗಳ ವಿಡಿಯೋ ಇದಾಗಿದ್ದು, ರಾಕೆಟ್ ಉಡಾವಣಿ ಪ್ರಾರಂಭಿಸಿದ ಕ್ಷಣದಿಂದ ಎಲ್ಲಾ 104 ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸಿದ ಸಂಪೂರ್ಣ ಚಿತ್ರಣವನ್ನು ಸೆರೆಹಿಡಿಯಲಾಗಿದೆ. ಬುಧವಾರ ಬೆಳಗ್ಗೆ 9.28ಕ್ಕೆ ನಭಕ್ಕೆ ಚಿಮ್ಮಿದ ಪಿಎಸ್​ಎಲ್​ವಿ ಮೊದಲಿಗೆ ಭಾರತದ ಕಾರ್ಟೋಸ್ಯಾಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ, ನಂತರ ಎಲ್ಲಾ 101 ನ್ಯಾನೋ ಉಪಗ್ರಹಗಳನ್ನು ಅವುಗಳ ಕಕ್ಷೆಗೆ ಯಶಸ್ವಿಯಾಗಿ ತಲುಪಿಸಿದೆ. ರಾಕೆಟ್​ನಿಂದ ಹೊರಬಂದ ಉಪಗ್ರಹಗಳು ತಮ್ಮ ಕಕ್ಷೆಯನ್ನು ಸೇರುತ್ತಿರುವುದನ್ನು ವೀಡಿಯೋದಲ್ಲಿ ವೀಕ್ಷಿಸಬಹುದಾಗಿದೆ.

ವೀಡಿಯೋ ಕೃಪೆ – ಇಸ್ರೋ

– ಏಜೆನ್ಸೀಸ್

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

Back To Top