Sunday, 25th June 2017  

Vijayavani

1. ಇಂದಿನಿಂದ ಪ್ರಧಾನಿ ಅಮೆರಿಕಾ ಪ್ರವಾಸ- ವೈಟ್‌ಹೌಸ್‌ನಲ್ಲಿ ಮೋದಿಗೆ ವಿಶೇಷ ಡಿನ್ನರ್‌- ಟ್ರಂಪ್‌ರ ಮೊದಲ ಅತಿಥಿಯಾಗಲಿದ್ದಾರೆ ನರೇಂದ್ರ ಮೋದಿ 2. ಹೈವೇಗಳಲ್ಲಿ ಮದ್ಯ ಮಾರಾಟ ನಿಷೇಧ ವಿಚಾರ- ಹೋಟೆಲ್​, ರೆಸ್ಟೋರೆಂಟ್‌ಗಳಲ್ಲಿ ಎಣ್ಣೆಗೆ ಅವಕಾಶ- ರಂಗೋಲಿ ಕೆಳಗೆ ತೂರಿದ ಪಂಜಾಬ್​ ಸರ್ಕಾರ 3. ಇನ್ಫೋಸಿಸ್‌ ವಿರುದ್ಧ ವೀಸಾ ನಿಯಮ ಉಲ್ಲಂಘನೆ ಆರೋಪ- ಆರುವರೆ ಕೋಟಿ ದಂಡ ವಿಧಿಸಿದ ನ್ಯೂಯಾರ್ಕ್‌ ಸರ್ಕಾರ- ಆರೋಪ ಅಲ್ಲಗಳೆದ ಇನ್ಫೋಸಿಸ್‌ 4. ಕಷ್ಟ ಎದುರಾದ್ರೆ ಶಾಲೆಗೆ ಹರಕೆ- ಇಷ್ಟಾರ್ಥ ಸಿದ್ಧಿಯಾದ್ರೆ ವಿವಿಧ ಕೊಡುಗೆ- ಬಂಟ್ವಾಳದ ಸೂರಿಬೈಲ್​ನಲ್ಲಿ ಶಾಲೆಯೇ ದೇವರು 5. ಭಾರತ ವೆಸ್ಟ್‌ವಿಂಡೀಸ್‌ ಕ್ರಿಕೆಟ್‌ ಸರಣಿ- ಮೊದಲ ಪಂದ್ಯ ವರುಣನಿಗೆ ಬಲಿ- ಮಳೆಯಲ್ಲಿ ತೇಲಿಹೋದ ಶಿಖರ್‌ ಧವನ್‌, ರಹಾನೆ ಅರ್ಧ ಶತಕ
Breaking News :

ಏಕಕಾಲಕ್ಕೆ 104 ಉಪಗ್ರಹ ಉಡಾವಣೆ, ಇತಿಹಾಸ ನಿರ್ಮಿಸಿದ ಇಸ್ರೋ

Wednesday, 15.02.2017, 10:13 AM       No Comments

ಶ್ರೀಹರಿ ಕೋಟಾ: ಬಾಹ್ಯಾಕಾಶ ರಂಗದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಇಸ್ರೋ ಬುಧವಾರ ಏಕಕಾಲಕ್ಕೆ ಒಂದೇ ರಾಕೆಟ್​ನಿಂದ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ.

ಬುಧವಾರ ಬೆಳಗ್ಗೆ 9.28 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 104 ಉಪಗ್ರಹಗಳನ್ನು ಹೊತ್ತ ಪಿಎಸ್​ಎಲ್​ವಿ ಸಿ-37 ರಾಕೆಟ್ ನಭಕ್ಕೆ ಚಿಮ್ಮತು.

ಇಸ್ರೋ ಭಾರತದ 3, ಇಸ್ರೇಲ್, ಕಜಕಿಸ್ತಾನ್, ನೆದರ್​ಲೆಂಡ್, ಸ್ವಿಜರ್ಲೆಂಡ್, ಯುಎಇಯ ತಲಾ 1, ಅಮೆರಿಕದ 96 ಉಪಗ್ರಹ ಸೇರಿ ಒಟ್ಟು 104 ಉಪಗ್ರಹಗಳನ್ನು ಕಕ್ಷೆಗೆ ತಲುಪಿಸಿದೆ.

ಎಲ್ಲಾ 104 ಉಪಗ್ರಹಗಳು ಯಶಸ್ವಿಯಾಗಿ ಬೇರ್ಪಟ್ಟಿದ್ದು, ಅವುಗಳ ನಿಗದಿತ ಕಕ್ಷೆಗಳಿಗೆ ತಲುಪಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದು ಇಸ್ರೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದಕ್ಕೂ ಮೊದಲು ರಷ್ಯಾ 2014ರಲ್ಲಿ 39 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಿತ್ತು. ಅಮೆರಿಕದ ನಾಸಾ 2013ರಲ್ಲಿ 29 ಉಪಗ್ರಹಗಳ ಉಡಾವಣೆ ನಡೆಸಿತ್ತು. ಕಳೆದ ವರ್ಷ ಇಸ್ರೋ 20 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.

– ಏಜೆನ್ಸೀಸ್

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

seven + 16 =

Back To Top