Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :

ಐದನೇ ಬಾರಿ ಸೆಕ್ಸಿಯಸ್ಟ್ ಏಷ್ಯನ್ ವಿಮೆನ್ ಪಟ್ಟ ಪಡೆದ ಪಿಗ್ಗಿ

Thursday, 07.12.2017, 1:18 PM       No Comments

<< ಕಳೆದ ಬಾರಿಯ ವಿನ್ನರ್ ಡಿಪ್ಪಿ ಈ ಬಾರಿ 3ನೇ ಸ್ಥಾನಕ್ಕೆ >>

ಲಂಡನ್​: ಬಾಲಿವುಡ್​ ಸಿನಿಮಾದಿಂದ ಹಾಲಿವುಡ್​ನಲ್ಲೂ ಮಿಂಚಿರುವ ಬಾಲಿವುಡ್​ ನಟಿ ಪ್ರಿಯಾಂಕ ಚೋಪ್ರಾಗೆ ಬರೀ ಭಾರತದಲ್ಲಷ್ಟೇ ಅಲ್ಲ, ಅಮೆರಿಕಾದಲ್ಲೂ ಫ್ಯಾನ್ಸ್​ಗಳಿದ್ದಾರೆ. ಕ್ವಾಂಟಿಕೋ ಮೂಲಕ ಅಮೆರಿಕಾದಲ್ಲೂ ಮನೆಮಾತಾಗಿರುವ ಪ್ರಿಯಾಂಕಾ ಚೋಪ್ರಾ ಇದೀಗ “ಸೆಕ್ಸಿಯಸ್ಟ್​ ಏಷ್ಯನ್ ವಿಮೆನ್ 2017” ಕೀರ್ತೀಗೆ ಭಾಜನರಾಗಿದ್ದಾರೆ.

ಲಂಡನ್​ ಮೂಲದ ‘ಈಸ್ಟರ್ನ್​ ಐ’ ವಾರಪತ್ರಿಕೆ ನಡೆಸಿದ 50 ಸೆಕ್ಸಿಯಸ್ಟ್ ಏಷ್ಯನ್ ವಿಮೆನ್ 2017 ಸಮೀಕ್ಷೆಯಲ್ಲಿ ಪ್ರಿಯಾಂಕ ಚೋಪ್ರಾ ಮೊದಲ ಸ್ಥಾನ ಪಡೆದಿದ್ದಾರೆ.

ಬಾಲಿವುಡ್​ನ ಮತ್ತೊಬ್ಬ ಖ್ಯಾತ ತಾರೆ, ಕನ್ನಡತಿ ದೀಪಿಕಾ ಪಡುಕೋಣೆ ಸೆಕ್ಸಿಯಸ್ಟ್​ ಏಷ್ಯನ್ ವಿಮೆನ್-2016 ಪಟ್ಟ ಪಡೆದಿದ್ದರು. ದೀಪಿಕಾ (ಡಿಪ್ಪಿ) ಈ ಬಾರಿ ಮೂರನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಪ್ರಿಯಾಂಕ (ಪಿಗ್ಗಿ) ಐದನೇ ಬಾರಿಗೆ ಸೆಕ್ಸಿಯಸ್ಟ್ ವಿಮೆನ್ ಪಟ್ಟ ತನ್ನದಾಗಿಸಿದ್ದಾರೆ. ಸಮೀಕ್ಷೆಯಲ್ಲಿ ತನಗೆ ವೋಟ್​ ಮಾಡಿದ ಎಲ್ಲರಿಗೂ ಪಿಗ್ಗಿ ಅಭಿನಂದನೆ ಸಲ್ಲಿಸಿದ್ದಾರೆ. (ಏಜೆನ್ಸೀಸ್)

 

Leave a Reply

Your email address will not be published. Required fields are marked *

Back To Top