Tuesday, 20th February 2018  

Vijayavani

ಹ್ಯಾರಿಸ್ ಪುತ್ರ ಆಯ್ತು ಮತ್ತೊಬ್ಬ ಕೈ ಮುಖಂಡನ ದರ್ಪ- ಸರ್ಕಾರಿ ಕಚೇರಿಗೆ ನುಗ್ಗಿ ಅಧಿಕಾರಿಗೆ ಧಮ್ಕಿ- ಜಲಮಂಡಳಿ ಸದಸ್ಯ ನಾರಾಯಣಸ್ವಾಮಿ ಗೂಂಡಾಗಿರಿ        ನಾನು ಎರಚಿದ್ದು ಪೆಟ್ರೋಲ್ ಅಲ್ಲ, ನೀರು- ಕಿವಿಗೆ ಕಲರ್ ಕಲರ್ ಹೂವಿಟ್ಟ ನಾರಾಯಣಸ್ವಾಮಿ- ನಿಮ್ಮ ಏರಿಯಾದಲ್ಲಿ ನೀರಿಗೆ ಬಣ್ಣ ಇರುತ್ತಾ...?        ಸಿದ್ದರಾಮಯ್ಯ ಆಪ್ತನ ದರ್ಪ ಕಾಂಗ್ರೆಸ್‌ಗೆ ಕಾಣಿಸಲ್ವಾ- ಪರಮೇಶ್ವರ್‌ ಅವರೇ ಗೂಂಡಾನ ವಿರುದ್ಧ ಕ್ರಮ ಇಲ್ವಾ..?- ಕಾಂಗ್ರೆಸ್‌ ಸರ್ಕಾರದಲ್ಲಿ ಅಧಿಕಾರಿಗಳಿಷ್ಟು ಸೇಫ್..?        ದಕ್ಷಿಣ ಕರ್ನಾಟಕದಲ್ಲಿ ಅಮಿತ್ ಷಾ ದಂಡಯಾತ್ರೆ- ಕುಕ್ಕೆ ಸನ್ನಿಧಿಯಲ್ಲಿ ವಿಶೇಷ ಪೂಜೆ- ಜ್ವರದ ನಡುವೆಯೂ ಹತ್ತು ಹಲವು ಕಾರ್ಯಕ್ರಮದಲ್ಲಿ ಭಾಗಿ        ಮೇಯ್ತಿದ್ದ ಮದಗಜ ಕೆಣಕಿದ ಶ್ವಾನ- ನಾಯಿ ತುಂಟಾಟಕ್ಕೆ ತಿರುಗಿ ಬಿದ್ದ ಆನೆ- ಮಡಿಕೇರಿಯ ಕಾಫಿತೋಟದಲ್ಲಿ ಆನೆ, ನಾಯಿ ಕಾಳಗ       
Breaking News

16 ಲಕ್ಷದ ಜತೆಗೆ 25 ಲಕ್ಷ ರೂ.ಕೊಡುತ್ತೇವೆ ಪ್ರತಿಭಟನೆ ನಿಲ್ಲಿಸಿ ಎಂದ ಆಸ್ಪತ್ರೆ?

Thursday, 07.12.2017, 2:09 PM       No Comments

<< ಗುರುಗ್ರಾಮ್ ಆಸ್ಪತ್ರೆ ವಿರುದ್ಧ ಡೆಂಘೆಗೆ ಮೃತಪಟ್ಟ ಬಾಲಕಿ ತಂದೆ ಆರೋಪ >>

ಗುರುಗ್ರಾಮ್​: ಮಗುವೊಂದರ ಡೆಂಘೆ ಚಿಕಿತ್ಸೆಗೆ 16 ಲಕ್ಷ ರೂ. ದುಬಾರಿ ಬಿಲ್​ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಫೋರ್ಟಿಸ್ ಈಗ ಹೊಸ ವಿವಾದಕ್ಕೆ ಸಿಲುಕಿದೆ. ಪ್ರತಿಭಟನೆ ಕೈ ಬೀಡುವಂತೆ ಪೋಷಕರಿಗೆ ಹಣದ ಆಮಿಷವೊಡ್ಡಿದ ಆರೋಪವನ್ನು ಎದುರಿಸುವಂತಾಗಿದೆ.

ಜಯಂತ್​ ಸಿಂಗ್ ಎಂಬುವವರು ಡೆಂಘೆ ಚಿಕಿತ್ಸೆಗೆಂದು ತಮ್ಮ 7 ವರ್ಷದ ಪುತ್ರಿ ಆದ್ಯಾಳನ್ನು ಈ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಮಗು ಅಸುನೀಗಿತ್ತು. ಜತೆಗೆ 16 ಲಕ್ಷ ರೂ. ದುಬಾರಿ ಶುಲ್ಕ ಪಾವತಿಸಿಕೊಂಡಿದ್ದ ಆಸ್ಪತ್ರೆ ವಿರುದ್ಧ ಪಾಲಕರು ಪ್ರತಿಭಟನೆ ನಡೆಸಿದ್ದರು.

ಆದರೆ, ಈಗ ಆಸ್ಪತ್ರೆಯ ಸಿಬ್ಬಂದಿ ಪಾಲಕರನ್ನು ಭೇಟಿಯಾಗಿ 10 ಲಕ್ಷ ರೂ. ಬಿಲ್​ ಮೊತ್ತವನ್ನು ಹಿಂದಿರುಗಿಸುತ್ತೇವೆ ಎಂದಿದ್ದಾರಲ್ಲದೇ, 25 ಲಕ್ಷ ರೂಪಾಯಿಯನ್ನು ಕೂಡಾ ನೀಡುತ್ತೇವೆ. ಇದಕ್ಕೆ ಬದಲಾಗಿ ಪಾಲಕರು ಪ್ರತಿಭಟನೆ ಹಿಂಪಡೆಯಬೇಕು ಹಾಗೂ ಮುಂದಿನ ದಿನಗಳಲ್ಲಿ ಆಸ್ಪತ್ರೆ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಒಪ್ಪಂದಕ್ಕೆ ಸಹಿ ಮಾಡಬೇಕೆಂಬ ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ.

ಬುಧವಾರ ಪ್ರಕರಣದ ಬಗ್ಗೆ ಹೇಳಿಕೆ ನೀಡಿದ್ದ ರಾಜ್ಯ ಆರೋಗ್ಯ ಮಂತ್ರಿ ಅನಿಲ್​ ವಿಜ್​, ಆಸ್ಪತ್ರೆಯ ಲೀಸ್​ ಒಪ್ಪದ ರದ್ದು ಮಾಡಬೇಕು ಹಾಗೂ ಆಸ್ಪತ್ರೆ ವಿರುದ್ಧ ಎಫ್​ಐಆರ್​ ದಾಖಲಿಸಬೇಕು ಎಂದಿದ್ದರು. ಇದರ ಬೆನ್ನಲ್ಲೇ ಜಯಂತ್ ಸಿಂಗ್ ಆಸ್ಪತ್ರೆ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ.

ಭಾರತೀಯ ವೈದ್ಯಕೀಯ ಮಂಡಳಿಗೆ ಆಸ್ಪತ್ರೆಯ ಪರವಾನಗಿಯನ್ನು ರದ್ದುಗೊಳಿಸುವಂತೆ ಪತ್ರ ಬರೆಯಲಿರುವ ಆರೋಗ್ಯ ಮಂತ್ರಿ, ಈಗಾಗಲೇ ಆಸ್ಪತ್ರೆಯ ರಕ್ತದಾನ ಶಾಖೆಯನ್ನು ಬಂದು ಮಾಡುವಂತೆ ನೋಟಿಸ್​ ಹೊರಡಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top