Wednesday, 13th December 2017  

Vijayavani

1. ನನ್ನ ಮಗನದ್ದು ವ್ಯವಸ್ಥಿತ ಕೊಲೆ- ನ್ಯಾಯ ಸಿಗದಿದ್ರೆ ಕುಟುಂಬದೊಂದಿಗೆ ಆತ್ಮಹತ್ಯೆ- ಪರೇಶ್​ ಮೇಸ್ತಾ ಹೆತ್ತವರ ಕಣ್ಣೀರು 2. ರವಿ ಬೆಳಗೆರೆ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ- ಪರಪ್ಪನ ಅಗ್ರಹಾರದಿಂದ ಆಸ್ಪತ್ರೆಗೆ ಶಿಫ್ಟ್​- ಜಯದೇವ ಹಾಸ್ಪಿಟೆಲ್​ಗೆ ಕರೆಯೊಯ್ದ ಸಿಬ್ಬಂದಿ 3. ಸಿಎಂ ಸಿದ್ದರಾಮಯ್ಯ ನಕಲಿ ಕಾಂಗ್ರೆಸಿಗ- ರಾಜ್ಯದಲ್ಲಿರೋದು ಮಾರ್ಕೆಟಿಂಗ್ ಸರ್ಕಾರ- ಜೆಡಿಎಸ್​ ಸಮಾವೇಶದಲ್ಲಿ ದೇವೇಗೌಡರ ಗುಡುಗು 4. ಸೂಪರ್​​ ಸ್ಟಾರ್ ಬರ್ತಡೇಗೆ ಬಿಎಸ್​ವೈ ವಿಶ್- ಧನ್ಯವಾದ ತಿಳಿಸಿದ ತಲೈವಾ- ಥ್ಯಾಂಕ್ಯೂ ಯಡಿಯೂರಪ್ಪ ಜೀ ಎಂದು ರಜನಿ ಟ್ವೀಟ್ 5. ಅಬ್ಬರಿಸಿ ಬೊಬ್ಬಿರಿದ ರೋಹಿತ್ ಶರ್ಮಾ- ಮೊಹಾಲಿಯಲ್ಲಿ ವಿಶ್ವ ಕ್ರಿಕೆಟ್​ ದಾಖಲೆಗಳೆಲ್ಲಾ ಪೀಸ್​​​ಪೀಸ್​- 3ನೇ ದ್ವಿಶತಕ ಸಿಡಿಸಿದ ರೋಹಿತ್​
Breaking News :

ರಾಹುಲ್​ ಗಾಂಧಿಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ

Monday, 19.06.2017, 11:02 AM       No Comments

ನವದೆಹಲಿ: ಕಾಂಗ್ರೆಸ್​ ಉಪಾಧ್ಯಕ್ಷ ರಾಹುಲ್​ ಗಾಂಧಿಗೆ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಶುಭ ಕೋರಿದ್ದಾರೆ.

47 ವರ್ಷಕ್ಕೆ ಕಾಲಿಟ್ಟಿರುವ ರಾಹುಲ್​ ಗಾಂಧಿಗೆ ಶುಭ ಕೋರಿ ಮೋದಿ ಅವರು ಸೋಮವಾರ ಬೆಳಗ್ಗೆ ಟ್ವೀಟ್​ ಮಾಡಿದ್ದಾರೆ. ‘ಕಾಂಗ್ರೆಸ್​ ಉಪಾಧ್ಯಕ್ಷರಾದ ಶ್ರೀ ರಾಹುಲ್​ ಗಾಂಧಿಯವರಿಗೆ ಜನ್ಮ ದಿನದ ಶುಭಾಶಯಗಳು, ದೇವರು ಅವರಿಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಮೋದಿ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ. ರಾಹುಲ್ ಈ ಟ್ವೀಟ್​ಗೆ ಪ್ರತಿಸ್ಪಂದಿಸಿರುವ ಬಗ್ಗೆ ಇನ್ನೂ ತಿಳಿದುಬಂದಿಲ್ಲ.

ರಾಹುಲ್​ ಗಾಂಧಿ ಕಳೆದ ಮಂಗಳವಾರ ತಮ್ಮ ಅಜ್ಜಿಯನ್ನು ಭೇಟಿ ಮಾಡಲು ಇಟಲಿಗೆ ತೆರಳಿದ್ದಾರೆ. ಅವರು ಇನ್ನೂ ಇಟಲಿಯಲ್ಲಿದ್ದಾರೆ. ರಾಹುಲ್​ ಜನ್ಮ ದಿನದ ಪ್ರಯುಕ್ತ ದೇಶದ ಹಲವೆಡೆ ಕಾಂಗ್ರೆಸ್​ ಕಾರ್ಯಕರ್ತರು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back To Top