Saturday, 18th August 2018  

Vijayavani

ಭಾರೀ ಮಳೆಗೆ ತತ್ತರಿಸಿದ ಕೇರಳದಲ್ಲಿ ಮೋದಿ ವೈಮಾನಿಕ ಸಮೀಕ್ಷೆ: ಐನೂರು ಕೋಟಿ ನೆರವು ಘೋಷಣೆ        ಕೊಡಗಿಗೆ ಮಳೆ ಸಂಕಷ್ಟ: ಹಾನಿ ಬಗ್ಗೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿಗೆ ಮುಖ್ಯಕಾರ್ಯದರ್ಶಿ ವರದಿ        ಕೊಡಗಿನ ಗೋಣಿಕೊಪ್ಪದಲ್ಲಿ ಮಳೆಯ ಅಬ್ಬರಕ್ಕೆ ಕುಸಿದ ಮನೆ: ನಾಲ್ಕು ಮಂದಿ ದುರ್ಮರಣ        ಚಾರ್ಮಾಡಿ ಘಾಟ್​​ನ ತಿರುವಿನಲ್ಲಿ ಕೆಟ್ಟು ನಿಂತ ವಾಹನ: ಧರ್ಮಸ್ಥಳ ಮಾರ್ಗದಲ್ಲಿ ವಿಪರೀತ ಟ್ರಾಫಿಕ್​ ಜಾಮ್        ಅರಕಲಗೂಡನಲ್ಲಿ 200 ಮನೆಗಳು ಜಲಾವೃತ: ದ್ವೀಪದಂತಾದ ರಾಮನಾಥಪುರ, ಮುಳುಗಿದ ನಿಮಿಷಾಂಭ ದೇಗುಲ       
Breaking News

ಮೋದಿಯೊಂದಿಗೆ ರೋಡ್‌ ಶೋ ನಡೆಸಲಿದ್ದಾರೆ ಜಪಾನ್‌ ಪ್ರಧಾನಿ ಅಬೆ

Tuesday, 12.09.2017, 11:47 AM       No Comments

ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‌ ಪ್ರಧಾನಿ ಶಿಂಜೋ ಅಬೆ ಜಂಟಿಯಾಗಿ ಗುಜರಾತ್‌ನ ಅಹಮದಬಾದ್ ನಲ್ಲಿ ರೋಡ್‌ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.

ಗುಜರಾತ್‌ನಲ್ಲಿ  ನಡೆಯಲಿರುವ ಭಾರತ-ಜಪಾನ್ ವಾರ್ಷಿಕ ಶೃಂಗಸಭೆ ಅಂಗವಾಗಿ ಸೆಪ್ಟಂಬರ್‌ 13 ರಿಂದ ಎರಡು ದಿನ ಜಪಾನ್‌ ಪ್ರಧಾನಿ ಶಿಂಜೋ ಅಬೆ ಭಾರತಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ರೋಡ್‌ ಶೋನಲ್ಲಿ ಭಾಗವಹಿಸಲಿದ್ದಾರೆ.

ಅಹಮದಬಾದ್ ವಿಮಾನ ನಿಲ್ದಾಣದಿಂದ ಪ್ರಾರಂಭಗೊಳ್ಳುವ ರೋಡ್‌ ಶೋ ಸುಮಾರು ಎಂಟು ಕಿಲೋಮೀಟರ್‌ ಕ್ರಮಿಸಿ ಸಾಬರಮತಿ ಆಶ್ರಮದಲ್ಲಿ ಕೊನೆಗೊಳ್ಳಲಿದೆ. ರೋಡ್‌ ಶೋ ನಂತರ ಸಾಬರಮತಿ ಆಶ್ರಮದಲ್ಲೇ ಇಬ್ಬರು ನಾಯಕರು ತಂಗಲಿದ್ದು, ಸಂಜೆ ನಗರದ ಪೂರ್ವ ಭಾಗದ ಸಿದಿ ಸೈಯೆದ್ ಮಸೀದಿಗೆ ಭೇಟಿ ನೀಡಲಿದ್ದಾರೆ.

ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ಇನ್ನೊಂದು ದೇಶದ ಪ್ರಧಾನಿಯೊಂದಿಗೆ ರೋಡ್‌ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನು ಶಿಂಜೋ ಅಬೆ ಭಾರತ ಭೇಟಿ ಪ್ರಮುಖ ಎನಿಸಿದ್ದು, ಭಾರತ-ಜಪಾನ್ ನಡುವಿನ ವಿವಿಧ ಕ್ಷೇತ್ರಗಳಲ್ಲಿನ ಸಹಕಾರದ ಪ್ರಗತಿಯನ್ನು ಇಬ್ಬರೂ ನಾಯಕರು ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗಿದೆ.

ಸೆಪ್ಟಂಬರ್‌ 14ರಂದು ಮುಂಬೈ-ಅಹಮದಬಾದ್ ನಡುವಿನ ಬುಲೆಟ್‌ ರೈಲು ಯೋಜನೆಗೆ ಚಾಲನೆ ನೀಡಲಿದ್ದಾರೆ. ಆನಂತರ ಗುಜರಾತ್‌ನ ಗಾಂಧಿನರದಲ್ಲಿ ನಡೆಯಲಿರುವ 12ನೇ ಭಾರತ ಮತ್ತು ಜಪಾನ್‌ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. (ಏಜೆನ್ಸೀಸ್‌)

Leave a Reply

Your email address will not be published. Required fields are marked *

Back To Top