Tuesday, 16th October 2018  

Vijayavani

ಜಮಖಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಜಂಗೀಕುಸ್ತಿ- ಕೈ-ಕಮಲ ಅಭ್ಯರ್ಥಿಗಳಿಂದ ನಾಮಿನೇಷನ್​​ - ಬಿಎಸ್​ವೈ, ಸಿದ್ದು ಶಕ್ತಿಪ್ರದರ್ಶನ        ಗಣಿಧಣಿಗಳ ನಾಡಲ್ಲಿ ಬಿಗ್ ಫೈಟ್-ಉಗ್ರಪ್ಪ-ಶಾಂತಾರಿಂದ ಉಮೇದುವಾರಿಕೆ-ರಾಮುಲು, ಡಿಕೆಶಿ ನಡುವೆ ಅಸಲಿ ಕದನ        ಶಿವಮೊಗ್ಗ ಅಖಾಡದಲ್ಲಿ ಮಾಜಿ ಸಿಎಂ ಪುತ್ರರ ಸಮರ-ಇಂದು ಮಧು ಬಂಗಾರಪ್ಪ ನಾಮಪತ್ರ-ಜೆಡಿಎಸ್‌ ಅಭ್ಯರ್ಥಿಗೆ ಕಾಂಗ್ರೆಸ್ ಸಾಥ್        ಮಂಡ್ಯ ಲೋಕಸಭಾ ಚುನಾವಣೆ ಕದನ-ಇಂದು ಬಿಎಸ್​​ವೈ, ಎಚ್​ಡಿಕೆಯಿಂದ ಪ್ರಚಾರ-ದೋಸ್ತಿಗೆ ಸೆಡ್ಡು ಹೊಡೆಯಲು ಕಮಲ ಪ್ಲಾನ್​​        ರಾಮನಗರದಲ್ಲಿ ಕೋಟ್ಯಧಿಪತಿಗಳ ಕಾರುಬಾರು-ಸಿಎಂ ಪತ್ನಿ 127 ಕೋಟಿ ರೂ. ಒಡತಿ-ನಾನೇನು ಕಮ್ಮಿನಾ ಅಂತಿದ್ದಾರೆ ಚಂದ್ರಶೇಖರ್        ಬೈ ಎಲೆಕ್ಷನ್​ ಟೆನ್ಷನ್​ ಮಧ್ಯೆಯೇ ಡಿಸಿಎಂ ವರ್ಕಿಂಗ್​​-ಹುಬ್ಬಳ್ಳಿ ಠಾಣೆಗೆ ದಿಢೀರ್ ವಿಸಿಟ್​​​​​​​​​​-ಬೀಟ್ ಸಿಸ್ಟ್ಂ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಪಾಠ       
Breaking News

ಜನ ಆರೋಗ್ಯಕ್ಕೆ ಚಾಲನೆ

Monday, 24.09.2018, 3:03 AM       No Comments

ರಾಂಚಿ: ಕೇಂದ್ರ ಸರ್ಕಾರದ ಬಹುನಿರೀಕ್ಷಿತ, ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆಯಾಗಿರುವ ಪ್ರಧಾನ ಮಂತ್ರಿ ಜನ ಆರೋಗ್ಯ-ಆಯುಷ್ಮಾನ್ ಭಾರತ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡದಲ್ಲಿ ಭಾನುವಾರ ಚಾಲನೆ ನೀಡಿದ್ದಾರೆ.

ಈ ಯೋಜನೆಯ ಫಲಾನುಭವಿಗಳು ದೇಶಾ ದ್ಯಂತ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಆರೋಗ್ಯ ಸೇವೆಗಳನ್ನು ಪಡೆಯಬಹುದಾಗಿದೆ. ಜಾರ್ಖಂಡದ 10 ಆರೋಗ್ಯ ಕೇಂದ್ರ, ಎರಡು ಮೆಡಿಕಲ್ ಕಾಲೇಜುಗಳಿಗೂ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಕೆಲ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಇ-ಕಾರ್ಡ್​ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯೋಜನೆಯ ಲಾಭಗಳನ್ನು ವಿವರಿಸುತ್ತ ಕಾಂಗ್ರೆಸ್​ನತ್ತ ಚಾಟಿ ಬೀಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಕಳೆದ 60 ವರ್ಷಗಳಿಂದ ಮತಬ್ಯಾಂಕ್ ರಾಜಕಾರಣ ನಡೆಸಿರುವ ಕಾಂಗ್ರೆಸ್, ಬಡವರ ಆರೋಗ್ಯ ಕುರಿತು ಕಾಳಜಿ ವಹಿಸಿಲ್ಲ.

ಹಲವು ದಶಕಗಳಿಂದ ಬಡತನ ಮಂತ್ರ ಪಠಿಸುತ್ತಿರುವವರು ಉತ್ತಮ ಕ್ರಮಗಳನ್ನು ಕೈಗೊಂಡಿದ್ದರೆ, ಈಗ ಪರಿಸ್ಥಿತಿ ಬದಲಾಗಿರುತ್ತಿತ್ತು. ಈಗ ಕೇಂದ್ರದ ಯೋಜನೆಯಿಂದ ಬಡತನ ಹಂತ ಹಂತವಾಗಿ ನಿಮೂಲನೆ ಆಗುತ್ತಿದೆ ಎಂದರು.

ಯಾರು ಫಲಾನುಭವಿಗಳಲ್ಲ

 • ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರಗಳ ಮೋಟಾರು ವಾಹನ ಹೊಂದಿರುವವರು
 • ತ್ರಿಚಕ್ರ, ನಾಲ್ಕು ಚಕ್ರಗಳ ಯಾಂತ್ರೀಕೃತ ಕೃಷಿ ಉಪಕರಣ ಹೊಂದಿದವರು
 • 50,000 ರೂ. ಗಿಂತ ಹೆಚ್ಚು ಕ್ರೆಡಿಟ್ ಲಿಮಿಟ್​ನ ಕಿಸಾನ್ ಕ್ರೆಡಿಟ್ ಕಾರ್ಡ್​ದಾರರು
 • ಸರ್ಕಾರಿ ಉದ್ಯೋಗಿಗಳು
 • ಸರ್ಕಾರದಲ್ಲಿ ನೋಂದಣಿಯಾಗಿರುವ ಕೃಷಿಯೇತರ ಉದ್ಯಮ ಹೊಂದಿರುವವರು
 • ಮಾಸಿಕ -ಠಿ; 10,000 ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವವರು
 • ಆದಾಯ ತೆರಿಗೆ, ವೃತ್ತಿ ತೆರಿಗೆ ಪಾವತಿದಾರರು
 • ಮೂರು ಕೊಠಡಿಯ ಮನೆ, ಪಕ್ಕಾಗೋಡೆ, ಛಾವಣಿ ಹೊಂದಿರುವ ಮನೆಯಲ್ಲಿ ವಾಸ ಮಾಡುವವರು
 • ಫ್ರಿಜ್, ಲ್ಯಾಂಡ್​ಲೈನ್ ದೂರವಾಣಿ ಹೊಂದಿರುವವರು
 • 2.5 ಎಕರೆಗಿಂತ ಹೆಚ್ಚಿನ ನಿರಾವರಿ ಭೂಮಿ, ಕೃಷಿ ಉಪಕರಣಗಳನ್ನು ಹೊಂದಿರುವವರು
 • 7.5 ಎಕರೆಗಿಂತ ಹೆಚ್ಚು ಭೂಮಿ, ಕೃಷಿ ಉಪಕರಣಗಳನ್ನು ಹೊಂದಿರುವವರು

 

ಮೌಸಮಿ ಮೊದಲ ಫಲಾನುಭವಿ

ಹರಿಯಾಣದ ಕರ್ನಾಲ್ ಪ್ರದೇಶದ ಮೌಸಮಿ ಎಂಬುವವರು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಮೊದಲ ಫಲಾನುಭವಿ. ಕೃಷಿ ಕೂಲಿ ಕೆಲಸ ಮಾಡುತ್ತಿರುವ ಅಮಿತ್ ಕುಮಾರ್ ಎಂಬುವವರ ಪತ್ನಿ. ಹರಿಯಾಣದಲ್ಲಿ ಯೋಜನೆಯ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದ್ದಾಗ, ಈಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆಸ್ಪತ್ರೆಯ ವೆಚ್ಚ 9 ಸಾವಿರ ರೂಪಾಯಿಯನ್ನು ಈ ಯೋಜನೆಯ ಅನ್ವಯ ಅವರಿಗೆ ಮರುಪಾವತಿ ಮಾಡಲಾಗಿತ್ತು.

ಮೋದಿ ಕೇರ್ ಅಂತಾರೆ ಜನ

‘ನಾನೂ ಬಡತನದಿಂದ ಬಂದವನು. ನನಗೆ ಬಡವರ ಕಷ್ಟ ಅರ್ಥವಾಗುತ್ತದೆ. ವೈದ್ಯಕೀಯ ಸೇವೆಯೇ ಅವರಿದ್ದಲ್ಲಿಗೆ ಬರಲಿದೆ. ಈ ಯೋಜನೆಯನ್ನು ಜನರು ಮೋದಿ ಕೇರ್ ಎಂದು ಕರೆಯುತ್ತಿದ್ದಾರೆ. ಆದರೆ ಇದು ಜನರ ಸೇವೆಗೆ ನನಗೆ ಸಿಕ್ಕಿರುವ ಅವಕಾಶ ಎಂದು ತಿಳಿಯುತ್ತೇನೆ. ಫಲಾನುಭವಿಗಳು ಔಪಚಾರಿಕವಾಗಿಯೇ ಯೋಜನೆಯಲ್ಲಿ ಒಳಗೊಳ್ಳಬೇಕು ಎಂಬ ನಿಯಮವಿಲ್ಲ. ಅರ್ಹ ಫಲಾನುಭವಿಗಳು ಸಹಜವಾಗಿಯೇ ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ’ ಎಂದು ಮೋದಿ ಹೇಳಿದರು.

ಆಕ್ಷೇಪಣೆಗಳೇನು?

ಫ್ರಿಜ್, ದ್ವಿಚಕ್ರ ವಾಹನಗಳನ್ನು ಹೊಂದಿರುವ ಬಿಪಿಎಲ್ ಕಾರ್ಡದಾರ ರನ್ನು ಪಟ್ಟಿ ಯಿಂದ ಹೊರಗಿಟ್ಟಿರುವುದು

2011ರ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಜನಗಣತಿ ನಂತರ ನಡೆಸಲಾದ ಗಣತಿ, ನೋಂದಣಿಯಲ್ಲಿ ಸೇರ್ಪಡೆಯಾದವರು ಪಟ್ಟಿಯಲ್ಲಿಲ್ಲ

 

ಫಲಾನುಭವಿಗಳ ಸಂಖ್ಯೆ ಯುರೋಪ್​ಗೆ ಸಮ!

ಜನ ಆರೋಗ್ಯ ಯೋಜನೆಯ ಫಲಾನುಭವಿಗಳ ಸಂಖ್ಯೆ ಐರೋಪ್ಯ ಒಕ್ಕೂಟದ ಒಟ್ಟೂ ಜನಸಂಖ್ಯೆಗೆ ಸಮವಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜಾರಿಗೊಂಡಿರುವ ವಿಶ್ವದ ಮೊದಲ ಯೋಜನೆ ಇದಾಗಿದೆ ಎಂದು ಮೋದಿ ಹೇಳಿದರು.

ಫಲಾನುಭವಿಗಳು ಯಾರು?

 • 2011ರ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಜನಗಣತಿಯಲ್ಲಿ ನೋಂದಣಿಯಾಗಿರುವ ಗ್ರಾಮೀಣ ಭಾಗದ ಜನರು
 • ವಾಸಿಸಲು ಮನೆ ಇಲ್ಲದವರು, ನಿರ್ಗತಿಕರು
 • ಕಡುಬಡವರು, ನಿರ್ಗತಿಕರು, ನಿರಾಶ್ರಿತರು
 • ಮಲಹೊರುವ ಪದ್ಧತಿಯಲ್ಲಿ ಭಾಗಿಯಾಗಿದ್ದವರು, ಅವರ ಕುಟುಂಬದವರು
 • ಪ್ರಾಚೀನ ಬುಡಕಟ್ಟು ಜನಾಂಗದವರು
 • ಜೀತಪದ್ಧತಿಯಿಂದ ಕಾನೂನುಬದ್ಧವಾಗಿ ಬಿಡುಗಡೆಗೊಂಡವರು
 • ಒಂದು ಕೋಣೆಯ ಮನೆ, ಕಚ್ಚಾಗೋಡೆ, ಕಚ್ಚಾಛಾವಣಿ ಹೊಂದಿರುವ ಮನೆಯಲ್ಲಿ ವಾಸಿಸುತ್ತಿರುವವರು
 • 18ರಿಂದ 59 ವರ್ಷದ ಒಳಗಿನ ಯಾವುದೇ ಸದಸ್ಯರಿಲ್ಲದೇ; ಕಿರಿಯರು ಮಾತ್ರ ಇರುವ ಕುಟುಂಬ – ಕುಟುಂಬಕ್ಕೆ ಮಹಿಳೆ ಯಜಮಾನಿಯಾಗಿದ್ದು, ಮನೆಯಲ್ಲಿ 16ರಿಂದ 59 ವರ್ಷದ ಯಾವುದೇ ಪುರುಷ ಸದಸ್ಯ ಇರದಿದ್ದರೆ
 • ಮನೆಯಲ್ಲಿ ಅಂಗವಿಕಲರಿದ್ದು, ಅವರಿಗೆ ವಯಸ್ಕ ಪೋಷಕರು ಇರದಿದ್ದರೆ
 • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ
 • 25 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಅನಕ್ಷರಸ್ಥರು
 • ಭೂಮಿರಹಿತ ಕೂಲಿ ಕಾರ್ವಿುಕರು

Leave a Reply

Your email address will not be published. Required fields are marked *

Back To Top