Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಕೇರಳ ಹಾನಿ ಅವಲೋಕನಕ್ಕೆ ಕೊಚ್ಚಿಗೆ ಆಗಮಿಸಿದ ಮೋದಿ; ಪ್ರತಿಕೂಲ ಹವಾಮಾನದಿಂದ ವೈಮಾನಿಕ ಸಮೀಕ್ಷೆ ರದ್ದು?

Saturday, 18.08.2018, 9:49 AM       No Comments

ತಿರುವನಂತಪುರಂ: ಅಬ್ಬರದ ಮಳೆಯಿಂದಾಗಿ ಜರ್ಜರಿತಗೊಂಡಿರುವ ಕೇರಳದಲ್ಲಿ ಪ್ರವಾಹಕ್ಕೆ ಈ ವರೆಗೆ 324 ಮಂದಿ ಮೃತಪಟ್ಟಿದ್ದು ಪರಿಸ್ಥಿತಿ ಇನ್ನೂ ತಹಬದಿಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪರಿಸ್ಥಿತಿ ಅವಲೋಕನಕ್ಕಾಗಿ ಶುಕ್ರವಾರ ರಾತ್ರಿ ಕೇರಳಕ್ಕೆ ಆಗಮಿಸಿದ್ದಾರೆ.

ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳನ್ನು ಇಂದು ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ಮೂಲಕ ಅವಲೋಕನ ನಡೆಸುವವರಿದ್ದರು. ಆದರೆ, ಕೇರಳದಲ್ಲಿ ಉಂಟಾಗಿರುವ ಪ್ರತಿಕೂಲ ಹವಮಾನದ ಹಿನ್ನೆಲೆಯಲ್ಲಿ ವೈಮಾನಿಕ ಸಮೀಕ್ಷೆ ರದ್ದಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಸುದ್ದಿ ಬಿತ್ತರಿಸಿವೆ. ಆದರೆ, ಕೊಚ್ಚಿಯಲ್ಲಿ ಮೋದಿ ಅಧಿಕಾರಿಗಳು ಮತ್ತು ಸಚಿವರ ಸಭೆ ನಡೆಸುತ್ತಿದ್ದು, ವೈಮಾನಿಕ ಸಮೀಕ್ಷೆ ರದ್ದಾದ ಬಗ್ಗೆ ಯಾವುದೇ ಮಾಹಿತಿ ಹೊರ ಹಾಕಿಲ್ಲ.

ನಿನ್ನೆ ರಾತ್ರಿ ತಿರುವನಂತಪುರಕ್ಕೆ ಆಗಮಿಸಿದ್ದ ಮೋದಿ ಅವರು, ವೈಮಾನಿಕ ವೀಕ್ಷಣೆ ನಡೆಸಲೆಂದೇ ಇಂದು ಬೆಳಗ್ಗೆ ತಿರುವನಂತಪುರದಿಂದ ಕೊಚ್ಚಿಗೆ ತೆರಳಿದ್ದರು.

ಈ ನಡುವೆ ಕೇರಳದಲ್ಲಿ ಸಂಭವಿಸಿರುವ ಮಳೆ ಹಾನಿಗೆ ಪರಿಹಾರ ಒದಗಿಸಲು ಯುಎಇ (ಯುನೈಟೆಡ್​ ಅರಬ್​ ಎಮಿರೆಟ್ಸ್​) ಸಮಿತಿಯೊಂದನ್ನು ರಚನೆ ಮಾಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯನ್ನು ರಚಿಸಿರುವ ಅರಬ್​ ರಾಷ್ಟ್ರ ಸೂಕ್ತ ನೆರವು ನೀಡಲು ನಿರ್ಧರಿಸಿದೆ.

ಇನ್ನು ತೆಲಂಗಾಣದ ಮುಖ್ಯಮಂತ್ರಿ 25 ಕೋಟಿ, ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹತ್ತು ಕೋಟಿ ರೂ. ನೆರವು ಘೋಷಣೆ ಮಾಡಿದ್ದಾರೆ.

ಕೇರಳದ ಪ್ರವಾಹದ ಹಿನ್ನೆಲೆಯಲ್ಲಿ ಈ ವರೆಗೆ ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. 100 ಕ್ಕೂ ಹೆಚ್ಚು ಜಲಾಶಗಳು ತುಂಬಿದ್ದು ಎಲ್ಲದರಿಂದಲೂ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಅಲ್ಲದೆ, ಇನ್ನೂ ಸಾವಿರಾರು ಮಂದಿ ಪ್ರವಾಹದಲ್ಲಿ ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.

ಸುಮಾರು 30ಕ್ಕೂ ಹೆಚ್ಚು ಸೇನಾ ಹೆಲಿಕಾಪ್ಟರ್​ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಈ ನಡುವೆ ಇಂದು ಮತ್ತು ನಾಳೆಯೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.

ಉತ್ತರ ಮತ್ತು ಮಧ್ಯ ಕೇರಳದಲ್ಲಿ ಹಿಂದೆಂದೂ ಕಂಡು ಕೇಳರಿಯದ ಮಳೆಯಾಗಿದ್ದು, ಈ ವರೆಗೆ ಮೂರು ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ. ರಾಜ್ಯದಲ್ಲಿ 2 ಸಾವಿರ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ.

Leave a Reply

Your email address will not be published. Required fields are marked *

Back To Top