Friday, 21st September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ಅನಾಥ ಮಕ್ಕಳಿಗೆ ಮಿಡಿದ ನರೇಂದ್ರ ಮೋದಿ

Sunday, 08.07.2018, 3:08 AM       No Comments

ಗಜೇಂದ್ರಗಡ: 15ನೇ ವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿ ಹೊತ್ತು, ಕೂಲಿ ಮಾಡಿ ತಮ್ಮ-ತಂಗಿಯರಿಗೆ ಶಿಕ್ಷಣ ಕೊಡಿಸುತ್ತ ಸಂಕಷ್ಟದಲ್ಲಿದ್ದ ಗದಗದ ಗಜೇಂದ್ರಗಡ ತಾಲೂಕಿನ ನಾಗರಸಕೊಪ್ಪ ತಾಂಡಾದ ಮಂಜುಳಾ ಚವ್ಹಾಣ ನೆರವಿಗೆ ಪ್ರಧಾನಿ ಕಾರ್ಯಾಲಯವೇ ಧಾವಿಸಿದೆ.

ತಂದೆ-ತಾಯಿ ಇಲ್ಲದೆ ಸಂಕಷ್ಟದ ಬದುಕು ಸಾಗಿಸುತ್ತಿದ್ದ ಮಂಜುಳಾ ಸ್ಥಿತಿ ಕುರಿತು ವಿಜಯವಾಣಿ ಕಳೆದ ಏಪ್ರಿಲ್ 22ರಂದು ‘ಈ ಮೂರು ಮಕ್ಕಳಿಗೆ ಅಕ್ಕನೇ ಅಮ್ಮ’ ಶೀರ್ಷಿಕೆಯಡಿ ಮುಖಪುಟದಲ್ಲಿ ವಿಸõತ ವರದಿ ಪ್ರಕಟಿಸಿತ್ತು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸೇರಿ ಹಲವಾರು ಸಹೃದಯಿಗಳು ಮಂಜುಳಾ ನೆರವಿಗೆ ಧಾವಿಸಿದ್ದರು. ‘ವಿಜಯವಾಣಿ’ಯ ಓದುಗರಾದ ದಾವಣಗೆರೆಯ ವಿದ್ಯಾನಗರ ನಿವಾಸಿ ಜಿ.ಬಿ. ನಾಗರಾಜ ಎಂಬುವವರು ಪತ್ರಿಕೆ ವರದಿಯನ್ನು ಲಗತ್ತಿಸಿ ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ‘ತಬ್ಬಲಿ ಕುಟುಂಬಕ್ಕೆ ಸಹಾಯ ಮಾಡಿ’ ಎಂದು ಪತ್ರ ಬರೆದಿದ್ದರು. ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ ಮಂಜುಳಾ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದೆ. ಇದಾದ ಮರುದಿನವೇ ‘ಸಂಕಷ್ಟದಲ್ಲಿರುವ ಕುಟುಂಬದ ಸ್ಥಿತಿಗತಿ ಕುರಿತು ಮಾಹಿತಿ ನೀಡಿ’ ಎಂದು ಪ್ರಧಾನಿ ಕಾರ್ಯಾಲಯದ ಹಣಕಾಸು ವಿಭಾಗದ ಅಧಿಕಾರಿ ಪರ್ವೆಶ ಕುಮಾರ ಅವರು ಗದಗ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ರೋಣ ತಹಸೀಲ್ದಾರ್ ಶಿವಲಿಂಗ ಪ್ರಭು ವಾಲಿ ಹಾಗೂ ಕಂದಾಯ ನಿರೀಕ್ಷಕ ವೀರಣ್ಣ ಅಡಗಿತ್ತಿ ಅವರು ಮಂಜುಳಾ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಕಳುಹಿಸಿದ್ದಾರೆ.

ಕಣ್ಣೀರಲ್ಲೇ ಕೈತೊಳೆಯುತ್ತಿದ್ದ ನಮ್ಮ ಬಾಳಿಗೆ ‘ವಿಜಯವಾಣಿ’ ಬೆಳಕಾಗಿದೆ. ನೂರಾರು ಜನ ಮನೆಗೆ ಬಂದು ಮತ್ತು ಕರೆ ಮಾಡುವ ಮೂಲಕ ಧೈರ್ಯ ತುಂಬಿದ್ದಾರೆ. ಆರ್ಥಿಕ ಸಹಾಯದ ಜತೆಗೆ ನನ್ನ ತಮ್ಮ ಹಾಗೂ ತಂಗಿಯರ ಶಿಕ್ಷಣಕ್ಕೆ ಮುಂದಾಗಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.

| ಮಂಜುಳಾ ಚವ್ವಾಣ ಅನಾಥ ಬಾಲಕಿ

ಪ್ರಧಾನಮಂತ್ರಿ ಕಾರ್ಯಾಲಯದಿಂದ ಕೇಳಲಾದ ಅಗತ್ಯ ಮಾಹಿತಿಯನ್ನು ಕಳುಹಿಸಲಾಗಿದೆ. ಕೆಲವೇ ದಿನಗಳಲ್ಲಿ ಆ ಕುಟುಂಬಕ್ಕೆ ಕೇಂದ್ರದಿಂದ ನೆರವು ಸಿಗಲಿದೆ.

| ವೀರಣ್ಣ ಅಡಗಿತ್ತಿ ಕಂದಾಯ ನಿರೀಕ್ಷಕ

Leave a Reply

Your email address will not be published. Required fields are marked *

Back To Top