Friday, 17th August 2018  

Vijayavani

ಬಿಜೆಪಿ ಕಚೇರಿಯಲ್ಲಿ ಅಟಲ್​ ಅಂತಿಮ ದರ್ಶನ, ಮೋದಿ ಸೇರಿ ಹಲವು ಗಣ್ಯರಿಂದ ಅಂತಿಮ ನಮನ         ಅಟಲ್​​ಗೆ ವಿಶ್ವದಾದ್ಯಂತ ಕಂಬನಿ: ಅಂತಿಮ ದರ್ಶನಕ್ಕೆ ವಿದೇಶಿ ನಾಯಕರ ಆಗಮನ, ಪಾಕ್​​ ನಿಯೋಗಕ್ಕೆ ಭಾರತ ವೀಸಾ        14 ಕಿ.ಮೀ. ಸಾಗಲಿದೆ ವಾಜಪೇಯಿ​​ ಅಂತಿಮ ಯಾತ್ರೆ: ಭಾಗಿಯಾಗಲಿದ್ದಾರೆ ಪ್ರಧಾನಿ, 4 ಗಂಟೆಗೆ ಸ್ಮೃತಿ ಸ್ಥಳದಲ್ಲಿ ಅಂತ್ಯಕ್ರಿಯೆ        ಕೊಡಗಿನಲ್ಲಿ ಮುಂದುವರಿದ ಮಳೆ: ಪ್ರವಾಹಕ್ಕೆ ಸಿಲುಕಿ ಜನಜೀವನ ತತ್ತರ, ಸಹಾಯಕ್ಕೆ ಅಂಗಲಾಚುತ್ತಿದ್ದಾರೆ ಜನ        ಕೇರಳದಲ್ಲಿ ಮುಂದುವರಿದ ರಕ್ಷಣಾ ಕಾರ್ಯ: ವಿಮಾನದಿಂದ ಆಹಾರ ಪೂರೈಕೆ, ಲಕ್ಷಾಂತರ ಮಂದಿ ಸ್ಥಳಾಂತರ       
Breaking News

ಐತಿಹಾಸಿಕ ಜೆರುಸಲೆಂ ಇನ್ನು ಇಸ್ರೇಲ್ ರಾಜಧಾನಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ 

Thursday, 07.12.2017, 7:29 AM       No Comments

<<ಅಮೆರಿಕ ನಿರ್ಧಾರಕ್ಕೆ ಐಸಿಸ್​ ಮತ್ತು ಅಲ್​​ಖೈದಾ ಉಗ್ರ ಸಂಘಟನೆಗಳು ನೆತ್ತರು ಹರಿಸುವುದಾಗಿ ಬೆದರಿಕೆ >>

ವಾಷಿಂಗ್ಟನ್​/ಜೆರುಸೆಲೆಂ: ಐತಿಹಾಸಿಕ ಜೆರುಸಲೆಂ ನಗರವನ್ನ ಇಸ್ರೇಲ್​​ ರಾಜಧಾನಿಯನ್ನಾಗಿ ಅಮೆರಿಕ ಪರಿಗಣಿಸಿದೆ. ವೈಟ್​ಹೌಸ್​ನಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಟೆಲ್​​ ಅವಿವ್​ ಬದಲಾಗಿ ಜೆರುಸಲೆಂ ನಗರವನ್ನ ಇಸ್ರೇಲ್​​ ರಾಜಧಾನಿಯನ್ನಾಗಿ ಘೋಷಿಸಿದರು.

ಅಮೆರಿಕದ ರಾಯಭಾರ ಕಚೇರಿಯನ್ನ ಟೆಲ್​​ ಅವಿವ್​​ ನಿಂದ ಜೆರುಸಲೆಂಗೆ ವರ್ಗಾಯಿಸುವುದಾಗಿ ಇದೇ ವೇಳೆ ಟ್ರಂಪ್​ ತಿಳಿಸಿದರು. ಟ್ರಂಪ್​ ಸರ್ಕಾರದ ನಿರ್ಧಾರವನ್ನ ಇಸ್ರೇಲ್​​ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಸ್ವಾಗತಿಸಿದ್ದಾರೆ.

ಆದರೆ, ಪ್ಯಾಲೆಸ್ತೀನ್​ ಸೇರಿದಂತೆ ಮಧ್ಯಪ್ರಾಚ್ಯದ ಕೆಲ ಮುಸ್ಲಿಂ ರಾಷ್ಟ್ರಗಳು ಅಮೆರಿಕದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿವೆ. ಜೆರುಸಲೆಂ ಯಹೂದಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಧಾರ್ಮಿಕ ಕ್ಷೇತ್ರವಾಗಿದ್ದು, ಕಳೆದ ಹಲವು ದಶಕಗಳಿಂದ ವಿವಾದಿತ ಪ್ರದೇಶವಾಗೆ ಇದೆ.

ಈ ಮಧ್ಯೆ ಐಸಿಸ್​ ಮತ್ತು ಅಲ್​​ಖೈದಾ ಉಗ್ರ ಸಂಘಟನೆಗಳು ನೆತ್ತರ ಕೋಡಿ ಹರಿಸೋದಾಗಿ ಬೆದರಿಕೆ ಒಡ್ಡಿವೆ. ಇತ್ತ ಬಿಜೆಪಿ ನಾಯಕ ಸುಬ್ರಮಣಿಯನ್​ ಸ್ವಾಮಿ ಕೂಡಾ ಭಾರತದ ರಾಯಭಾರಿ ಕಚೇರಿಯನ್ನ ಜೆರುಸಲೇಂಗೆ ಹಸ್ತಾಂತರಿಸಬೇಕು ಅಂತಾ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top