Monday, 19th February 2018  

Vijayavani

ವಿದ್ಯಾರ್ಥಿ ಮೇಲೆ ದರ್ಪ ಮೆರೆದಿದ್ದ ಗೂಂಡಾ ಅರೆಸ್ಟ್ - ಕಬ್ಬನ್‌ ಪಾರ್ಕ್‌ ಪೊಲೀಸರಿಂದ ಬಂಧನ - ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ        ಶ್ರವಣಬೆಳಗೊಳದತ್ತ ಪ್ರಧಾನಿ ಮೋದಿ ಪಯಣ - ಬಾಹುಬಲಿಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪನಮನ - ನಾಲ್ಕು ಗಂಟೆ ವೇಳೆಗೆ ಮೈಸೂರಲ್ಲಿ ಬಿಜೆಪಿ ಪರಿವರ್ತನಾ        ಭಾರತವೇ ಎಲ್ಲ ಆವಿಷ್ಕಾರಕ್ಕೆ ಹಾಟ್‌ ಸ್ಪಾಟ್ - ಜನರಿಂದಲೇ ಡಿಜಿಟಲ್ ಇಂಡಿಯಾ ಸಕ್ಸಸ್ - ಹೈದ್ರಾಬಾದ್ ಸಮಾವೇಶಕ್ಕೆ ಮೈಸೂರಿಂದ ಮೋದಿ ಸ್ಪೀಚ್        ಮುಂದುವರಿದ ಪಿಎನ್‌ಬಿ ಬ್ಯಾಂಕ್‌ ಹಗರಣ ಬೇಟೆ - ಬೆಂಗಳೂರಿನ ಹಲವೆಡೆ ಇಡಿ ದಾಳಿ - ನೀರವ್ ಡೈಮಂಡ್ಸ್ ಮಳಿಗೆಗಳಲ್ಲಿ ಶೋಧ        ಕೆ.ಆರ್‌ ಆಸ್ಪತ್ರೆಗೆ ಕೆ.ಎಸ್‌ ಪುಟ್ಟಣ್ಣಯ್ಯ ಪಾರ್ಥಿವ ಶರೀರ ರವಾನೆ - ವಿದೇಶದಿಂದ ಪುತ್ರಿ ಬಂದ ಬಳಿಕ ಬುಧವಾರ ಅಂತ್ಯಕ್ರಿಯೆ - ಗಣ್ಯರಿಂದ ಸಂತಾಪ       
Breaking News

ರಾಷ್ಟ್ರಪತಿ ಕೋವಿಂದ ಸೇನೆಯ ಗೌರವ ವಂದನೆ ಸ್ವೀಕರಿಸಿದ್ದು ಹೀಗಾ!?

Tuesday, 10.10.2017, 9:26 AM       No Comments

ಕೊಲ್ಲಂ: ಕಳೆದ ವಾರ ಕೇರಳ ಪ್ರವಾಸದಲ್ಲಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಮಾತಾ ಅಮೃತಾನಂದಮಯಿ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸೈನಿಕರಿಂದ ಗೌರವ ರಕ್ಷಣೆ ಸ್ವೀಕರಿಸುವಾಗ ರಾಷ್ಟ್ರಪತಿ ಕೋವಿಂದ ಅವರು ಮಳೆಯನ್ನು ಲೆಕ್ಕಿಸದೆ ರಾಷ್ಟ್ರಗೀತೆಗೆ ಗೌರವ ಸೂಚಕವಾಗಿ ನಿಂತು, ಗೌರವ ವಂದನೆ ಪಥದಲ್ಲಿ ಸಾಗಿದರು. ಕೋವಿಂದ್ ಅವರ ಈ ನಡೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಭದ್ರತಾಧಿಕಾರಿಯೊಬ್ಬರು ಆ ವೇಳೆ ರಾಷ್ಟ್ರಪತಿ ಕೋವಿಂದ ಅವರಿಗೆ ಕೊಡೆ ನೀಡಲು ಮುಂದಾದರು. ಆದರೆ ಅದನ್ನು ನಿರಾಕರಿಸಿದ ಕೋವಿಂದ ಹಾಗೆಯೇ ವಾಹನದಲ್ಲಿ ನಿಂತು, ಮಂದೆ ಸಾಗಿದರು.

ರಾಷ್ಟ್ರಪತಿ ಪದವಿ ಅಲಂಕರಿಸಿದ ಮೇಲೆ ಪ್ರಥಮ ಬಾರಿಗೆ ಕೇರಳಕ್ಕೆ ಆಗಮಿಸಿರುವ ಅವರು ಭಾನುವಾರದಂದು ಕೊಲ್ಲಂಗೆ ಬಂದರು. ಇಲ್ಲಿನ ಮಾತಾ ಅಮೃತಾನಂದಮಯಿ ಅವರ 64ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಗ್ರಾಮದ ಜನರಿಗೆ 100 ಕೋಟಿ ರೂಪಾಯಿ ವೆಚ್ಚದಲ್ಲಿ ನೀರು ಒದಗಿಸುವ ಯೋಜನೆಗೆ ವಲ್ಲಿಕಾವುದಲ್ಲಿನ ಮಠದ ಪ್ರಧಾನ ಕಚೇರಿಯಲ್ಲಿ ಚಾಲನೆ ನೀಡಿದರು. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top