Saturday, 18th August 2018  

Vijayavani

ಭಾರೀ ಮಳೆಗೆ ತತ್ತರಿಸಿದ ಕೇರಳದಲ್ಲಿ ಮೋದಿ ವೈಮಾನಿಕ ಸಮೀಕ್ಷೆ: ಐನೂರು ಕೋಟಿ ನೆರವು ಘೋಷಣೆ        ಕೊಡಗಿಗೆ ಮಳೆ ಸಂಕಷ್ಟ: ಹಾನಿ ಬಗ್ಗೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿಗೆ ಮುಖ್ಯಕಾರ್ಯದರ್ಶಿ ವರದಿ        ಕೊಡಗಿನ ಗೋಣಿಕೊಪ್ಪದಲ್ಲಿ ಮಳೆಯ ಅಬ್ಬರಕ್ಕೆ ಕುಸಿದ ಮನೆ: ನಾಲ್ಕು ಮಂದಿ ದುರ್ಮರಣ        ಚಾರ್ಮಾಡಿ ಘಾಟ್​​ನ ತಿರುವಿನಲ್ಲಿ ಕೆಟ್ಟು ನಿಂತ ವಾಹನ: ಧರ್ಮಸ್ಥಳ ಮಾರ್ಗದಲ್ಲಿ ವಿಪರೀತ ಟ್ರಾಫಿಕ್​ ಜಾಮ್        ಅರಕಲಗೂಡನಲ್ಲಿ 200 ಮನೆಗಳು ಜಲಾವೃತ: ದ್ವೀಪದಂತಾದ ರಾಮನಾಥಪುರ, ಮುಳುಗಿದ ನಿಮಿಷಾಂಭ ದೇಗುಲ       
Breaking News

ಮೆಕಾನಿಕ್ ರಾಜನ ಪ್ರೇಮ್ ಕಹಾನಿ

Tuesday, 22.05.2018, 3:03 AM       No Comments

ವಿಜಯ್ ರಾಘವೇಂದ್ರ ನಟನೆಯ ‘ಜಾನಿ’ ಚಿತ್ರ ತೆರೆಕಂಡು ಬರೋಬ್ಬರಿ 9 ತಿಂಗಳುಗಳೇ ಕಳೆದಿವೆ. ಈಗ ‘ರಾಜ ಲವ್ಸ್ ರಾಧೆ’ ಚಿತ್ರದ ಮೂಲಕ ಅವರು ಮತ್ತೆ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಈ ವಾರ (ಮೇ 25) ತೆರೆಕಾಣುತ್ತಿರುವ ಈ ಚಿತ್ರದಲ್ಲಿ ವಿಜಯ್ ಮೆಕಾನಿಕ್ ಅವತಾರ ತಾಳಿದ್ದಾರೆ.

|ರಾಜೇಶ್ ದುಗ್ಗುಮನೆ

ಈ ‘ರಾಜ’ನ ವಿಶೇಷತೆ ಏನು?

‘ರಾಜ ಲವ್ಸ್ ರಾಧೆ’ ಚಿತ್ರದ ಹೆಸರೇ ಹೇಳುವಂತೆ ಇದೊಂದು ಪಕ್ಕಾ ಲವ್​ಸ್ಟೋರಿ ಸಿನಿಮಾ. ಗ್ಯಾರೇಜ್​ನಲ್ಲಿ ಕೆಲಸ ಮಾಡುವ ಮೆಕಾನಿಕ್ ರಾಜ ಆಗಿ ನಾನು ಕಾಣಿಸಿಕೊಂಡಿದ್ದೇನೆ. ಬಡವನಾದರೂ ಎಲ್ಲರೂ ನನ್ನ ಮೇಲೆ ಪ್ರೀತಿ ತೋರುತ್ತಾರೆ. ರಾಧೆ ಶ್ರೀಮಂತ ಕುಟುಂಬದ ಹುಡುಗಿ. ನನಗೆ ಅವಳ ಮೇಲೆ ಪ್ರೀತಿ ಆಗುತ್ತದೆ. ಆ ಪ್ರೀತಿಯನ್ನು ನಾನು ಹೇಗೆ ಉಳಿಸಿಕೊಳ್ಳುತ್ತೇನೆ ಎಂಬುದೇ ಚಿತ್ರದ ಹೈಲೈಟ್. ಶ್ರೀಮಂತ ಕುಟುಂಬದ ಹುಡುಗಿ ಬಡ ಕುಟುಂಬದ ಹುಡುಗನನ್ನು ಪ್ರೀತಿಸುವ ಅನೇಕ ಸಿನಿಮಾಗಳು ಈಗಾಗಲೇ ಬಂದು ಹೋಗಿವೆ. ಚಿತ್ರದ ಫಾಮುಲಾ ಒಂದೇ ರೀತಿ ಇದ್ದರೂ ನಿರ್ದೇಶಕರು ನಿರೂಪಣೆ ಮಾಡಿರುವ ವಿಧಾನ ಭಿನ್ನವಾಗಿದೆ.

ರಾಧಿಕಾ ಪ್ರೀತಿ ಮತ್ತು ನಿಮ್ಮ ಕೆಮಿಸ್ಟ್ರಿ ಹೇಗೆ ಮೂಡಿ ಬಂದಿದೆ?

ಎಸ್. ನಾರಾಯಣ್ ನಿರ್ದೇಶನದ ‘ಪಂಟ’ ಚಿತ್ರದಲ್ಲಿ ರಾಧಿಕಾ ಪ್ರೀತಿ ನಟಿಸಿದ್ದರು. ಇದು ಅವರ ಎರಡನೇ ಚಿತ್ರ. ರಾಧೆಯಾಗಿ ಅವರು ಕಾಣಿಸಿಕೊಂಡಿದ್ದಾರೆ. ರಾಧಿಕಾ ಕನ್ನಡವನ್ನು ಸುಲಲಿತವಾಗಿ ಮಾತನಾಡುತ್ತಾರೆ. ಹಾಗಾಗಿ ಅವರ ಜತೆ ನಟಿಸುವುದು ಸುಲಭವಾಯಿತು. ಚಿತ್ರದಲ್ಲಿ ನಮ್ಮಿಬ್ಬರ ಕೆಮಿಸ್ಟ್ರಿ ಚೆನ್ನಾಗಿ ಮೂಡಿ ಬಂದಿದೆ.

ಸಿನಿಮಾ ತಂಡದ ಜತೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಈ ಚಿತ್ರದಲ್ಲಿ ರವಿಶಂಕರ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಸದ್ಯ ಅವರು ಸ್ಟಾರ್ ಕಲಾವಿದರು. ಈ ಮೊದಲಿನಿಂದಲೂ ಅವರ ಜತೆ ನಟಿಸಬೇಕು ಎಂಬ ಆಸೆ ಇತ್ತು. ಅದು ಈಗ ಈಡೇರಿದೆ. ಅವರು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದರೂ, ತುಂಬ ಹಂಬಲ್ ಆಗಿ ನಡೆದುಕೊಳ್ಳುತ್ತಾರೆ. ಇನ್ನು, ನಿರ್ದೇಶಕ ರಾಜಶೇಖರ್ ಈ ಮೊದಲು ಕಿರುತೆರೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವವರು. ಕಥೆ ಬಗ್ಗೆ ಹೆಚ್ಚು ಹಿಡಿತ ಹೊಂದಿದ್ದಾರೆ.

ಈ ಸಿನಿಮಾ ನಿಮ್ಮ ನಟನಾ ಬದುಕಿಗೆ ಎಷ್ಟು ಮುಖ್ಯ?

ಕಲಾವಿದ ಎಂದಮೇಲೆ ಆತನಿಗೆ ಪ್ರತಿ ಸಿನಿಮಾ ಕೂಡ ಮುಖ್ಯ. ಒಂದು ಚಿತ್ರದಲ್ಲಿ ಅತಿಥಿ ಕಲಾವಿದನ ಪಾತ್ರ ಮಾಡಿದ್ದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಇರಲು ಸಾಧ್ಯವಿಲ್ಲ. ಕಾರಣ ಪ್ರೇಕ್ಷಕ ಎಲ್ಲವನ್ನೂ ಗಮನಿಸುತ್ತಾನೆ. ಇದಲ್ಲದೆ, ನಾವು ಮಾಡಿದ ಪಾತ್ರ ನಮ್ಮ ಮೇಲೆ ಪ್ರಭಾವ ಬೀರುತ್ತಿರುತ್ತದೆ. ಹಾಗಾಗಿ ‘ರಾಜ ಲವ್ಸ್ ರಾಧೆ’ ನನ್ನ ಕರಿಯರ್​ನ್ಲ್ಲಿ ಪ್ರಮುಖ ಚಿತ್ರ ಎನ್ನಬಹುದು.

ಬೇರೆ ಯಾವೆಲ್ಲ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದೀರಿ?

‘ಜಾನಿ’ ಚಿತ್ರ ಆಗಸ್ಟ್​ನಲ್ಲಿ ತೆರೆಕಂಡಿತ್ತು. ಆಗಲೇ ನನ್ನ ನಟನೆಯ ಮತ್ತೊಂದು ಸಿನಿಮಾ ಬಿಡುಗಡೆಯಾಗಿತ್ತು. ಹಾಗಾಗಿ ಸ್ವಲ್ಪ ಗ್ಯಾಪ್ ಆಯಿತು. ನನ್ನ ನಿರ್ದೇಶನದ ‘ಕಿಸ್ಮತ್’ ಚಿತ್ರದ ಕೆಲಸಗಳು ಮುಗಿದಿದ್ದು, ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಸ್ಯಾಂಡಲ್​ವುಡ್​ಗೆ ಇದೊಂದು ಭಿನ್ನ ರೀತಿಯ ಚಿತ್ರ. ರಾಜ್​ಶೇಖರ್ ನಿರ್ದೇಶನದ ‘ಪರದೇಸಿ ಕೇರ್ ಆಫ್ ಲಂಡನ್’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ‘ಧರ್ಮಸ್ಯ’ ಚಿತ್ರ ಕೂಡ ರಿಲೀಸ್​ಗೆ ಸಿದ್ಧವಾಗುತ್ತಿದೆ.

ಪ್ರಯೋಗಾತ್ಮಕ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವ ಯೋಚನೆ ಇದೆಯಾ?

ನಿಜ ಹೇಳಬೇಕೆಂದರೆ ಆ ರೀತಿ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಮೊದಲಿನಿಂದಲೂ ಇದೆ. ಆದರೆ ಈವರೆಗೆ ತೂಕ ಇರುವ ಕಥೆ ಸಿಕ್ಕಿಲ್ಲ. ಕಮರ್ಷಿಯಲ್ ಚಿತ್ರ ಎಂದರೆ ಅದರಲ್ಲಿ ಒಂದಷ್ಟು ಮಸಾಲೆ ಅಂಶಗಳು, ಹಾಸ್ಯದ ಅಂಶಗಳು ಇವೆ ಎಂಬ ಕಾರಣಕ್ಕೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ. ಆದರೆ ಪ್ರಯೋಗಾತ್ಮಕ ಸಿನಿಮಾ ಎಂದರೆ ಹಾಗಾಗುವುದಿಲ್ಲ. ಅದಕ್ಕೆ ಕಥೆ ಗಟ್ಟಿ ಇರಬೇಕು. ಅಂದಾಗ ಜನರು ಒಪ್ಪಿಕೊಳ್ಳುತ್ತಾರೆ. ಅಂಥ ಪಾತ್ರಕ್ಕೋಸ್ಕರ ಕಾಯುತ್ತಿದ್ದೇನೆ.

ಕಮರ್ಷಿಯಲ್ ಕನವರಿಕೆಯಲ್ಲಿ ಚಿನ್ನಾರಿ ಮುತ್ತಾ

ಚಿತ್ರದಲ್ಲಿ ಯಾವ ಅಂಶ ನಿಮಗೆ ಹೆಚ್ಚು ಇಷ್ಟ ಆಯ್ತು?

ನಾನು ಕಮರ್ಷಿಯಲ್ ಮಸಾಲ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದು ಕಡಿಮೆ. ಈ ಚಿತ್ರದಲ್ಲಿ ಮಾಸ್ ಅಂಶಗಳು ಹೆಚ್ಚಿವೆ. ಈ ವಿಧದ ಪಾತ್ರವನ್ನು ಹೆಚ್ಚು ಮಾಡಿಲ್ಲದ ಕಾರಣ ರಾಜನ ಪಾತ್ರ ಸವಾಲಿನಿಂದ ಕೂಡಿತ್ತು ಎನಿಸಿತು. ಹಾಗಾಗಿ ನಾನು ಈ ಸಿನಿಮಾ ಒಪ್ಪಿಕೊಂಡೆ. ಚಿತ್ರದಲ್ಲಿ ಹಾಸ್ಯದ ಅಂಶಗಳು ಹೆಚ್ಚಿದ್ದರಿಂದ ಪಾತ್ರಕ್ಕೆ ನ್ಯಾಯ ಒದಗಿಸುವುದು ಸುಲಭವಾಯಿತು.

Leave a Reply

Your email address will not be published. Required fields are marked *

Back To Top