Wednesday, 15th August 2018  

Vijayavani

ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟ: ಕೆಆರ್‌ಎಸ್‌ಗೆ ಭಾರಿ ಒಳಹರಿವು, ಡ್ಯಾಂನಿಂದ 1.50 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ        ಹಾಸನದಲ್ಲಿ ಮಳೆ ಅಬ್ಬರ: ಶಿರಾಡಿಘಾಟ್‌ನಲ್ಲಿ ಅನಿಲ ಟ್ಯಾಂಕ್‌ ಪಲ್ಟಿ, ಸೋಮವಾರ ಪೇಟೆ ಹೆದ್ದಾರಿ ಬಿರುಕು        ಉಕ್ಕಿಹರಿಯುತ್ತಿದೆ ತುಂಗಭದ್ರ: ದಾವಣಗೆರೆ ಜಿಲ್ಲೆಯಲ್ಲಿ ಬೆಳೆ ನಾಶ, ಕಂಪ್ಲಿ ಸೇತುವೆ ನೀರಲ್ಲಿ ಮುಳುಗಡೆ        ಕೆಂಪು ಕೋಟೆ ಮೇಲೆ ಮೋದಿ ಧ್ವಜರೋಹಣ: ಸರ್ಕಾರದ ಸಾಧನೆಗಳ ಬಣ್ಣನೆ, ಆಯುಷ್ಮಾನ್‌ ಭಾರತ ಘೋಷಣೆ       
Breaking News

ಹಾಸನದಿಂದ ಪ್ರಜ್ವಲ್​ ಅಭ್ಯರ್ಥಿ ಎಂದ ಗೌಡರು; ಯಾವ ಕ್ಷೇತ್ರ ಸೂಚಿಸಿದರೂ ಸ್ಪರ್ಧಿಸುತ್ತೇನೆ ಎಂದ ಪ್ರಜ್ವಲ್​

Monday, 13.08.2018, 9:19 AM       No Comments

ಹಾಸನ: ಹಾಸನದಿಂದ ತಮ್ಮನ್ನು ಅಭ್ಯರ್ಥಿ ಮಾಡಬಯಸಿರುವ ಮಾಜಿ ಪ್ರಧಾನಿ ದೇವೇಗೌಡರ ತೀರ್ಮಾನದಿಂದ ನನಗೆ ಸಂತೋಷವಾಗಿದೆ. ಅವರ ಆಜ್ಞೆ ಪಾಲಿಸುತ್ತೇನೆ ಎಂದು ಪ್ರಜ್ವಲ್​ ರೇವಣ್ಣ ಹೇಳಿದ್ದಾರೆ.

ದೇವೇಗೌಡರ ಕುಟುಂಬದಿಂದ ಇಂದು ಹಾಸನದ ವಿವಿಧ ದೇವಸ್ಥಾನಗಳಲ್ಲಿ ಹಮ್ಮಿಕೊಂಡಿರುವ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳಲೆಂದು ದೇವೇಗೌಡರ ಹುಟ್ಟೂರು ಹರದನಹಳ್ಳಿಗೆ ಆಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು.

“ಎಚ್.ಡಿ.ದೇವೇಗೌಡರ ನಿರ್ಧಾರ ಸಂತೋಷದ ವಿಚಾರ, ಅವರ ಆಜ್ಞೆಯನ್ನು ನಾನು ಪಾಲಿಸುತ್ತೇನೆ. ರಾಜ್ಯದಲ್ಲಿ ಎಲ್ಲೇ ನಿಲ್ಲಿಸಿದರೂ ಸ್ಪರ್ಧೆ ಮಾಡುತ್ತೇನೆ. ರಾಜ್ಯದ ಜನರ ಅಪೇಕ್ಷೆಯಂತೆ ಕೆಲಸ ಮಾಡುತ್ತೇನೆ,” ಎಂದು ಅವರು ಹೇಳಿದರು.

ಇದನ್ನೂ ಓದಿ: ಪ್ರಧಾನಿ ಅಭ್ಯರ್ಥಿಯಲ್ಲ… ಚುನಾವಣೆಗೇ ನಿಲ್ಲಲು ಆಸಕ್ತಿ ಇಲ್ಲ; ಹಾಸನಕ್ಕೆ ಪ್ರಜ್ವಲ್​ ಅಭ್ಯರ್ಥಿ ಎಂದ ದೇವೇಗೌಡ

ಕೋಡಿಮಠದ ಶ್ರೀಗಳ ಭವಿಷ್ಯವಾಣಿಗೆ ಪ್ರತಿಕ್ರಿಯಿಸಿ, ಒಂದು ವೇಳೆ ಕುಮಾರಸ್ವಾಮಿ ದೆಹಲಿಗೆ ಹೋದರೆ ರಾಜ್ಯದಲ್ಲಿ ಆ ಸ್ಥಾನವನ್ನು ರೇವಣ್ಣ ತುಂಬಲಿದ್ದಾರೆ. ನಾವು ರಾಹುಲ್ ಗಾಂಧಿಯನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಸೂಚಿಸಿದ್ದೆವೆ ಮತ್ತು ಬೆಂಬಲಿಸಿದ್ದೇವೆ ಎಂದರು.

“ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ನಾನು ಸ್ಪರ್ಧಿಸುವ ಸಾಧ್ಯತೆಗಳು ಕಡಿಮೆ. ಹೀಗಾಗಿ, ರೇವಣ್ಣ ಪುತ್ರ ಪ್ರಜ್ವಲ್​ ಅವರನ್ನು ಚುನಾವಣೆಗೆ ನಿಲ್ಲಿಸಲು ನಾನು ನಿರ್ಧಾರ ಮಾಡಿದ್ದೇನೆ,” ಎಂದು ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಅವರು ಸೋಮವಾರ ಬೆಳಗ್ಗೆಯಷ್ಟೇ ತಿಳಿಸಿದ್ದರು.

Leave a Reply

Your email address will not be published. Required fields are marked *

Back To Top